ಅಮೇಜಾನ್​ ಪ್ರೈಮ್​​ನಲ್ಲಿ ರಿಲೀಸ್​ ಆಗುತ್ತಿದೆ ಪುನೀತ್​ ನಿರ್ಮಾಣದ ಮೂರು ಸಿನಿಮಾಗಳು | PRK productions 3 Movies Family Pack Man of The Match One cut two cut Movie will be releasing in Amazon prime video


ಅಮೇಜಾನ್​ ಪ್ರೈಮ್​​ನಲ್ಲಿ ರಿಲೀಸ್​ ಆಗುತ್ತಿದೆ ಪುನೀತ್​ ನಿರ್ಮಾಣದ ಮೂರು ಸಿನಿಮಾಗಳು

ಪುನೀತ್​ ನಿರ್ಮಾಣದ ಮೂರು ಸಿನಿಮಾಗಳು

ಕೊವಿಡ್ ಮೂರನೇ ಅಲೆ ಕಾಣಿಸಿಕೊಂಡಿರುವುದರಿಂದ ಚಿತ್ರರಂಗದಲ್ಲಿ ಮತ್ತೆ ಅನಿಶ್ಚಿತತೆ ಎದುರಾಗಿದೆ. ಚಿತ್ರಮಂದಿರಗಳಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದ್ದರೂ ಸಿನಿಮಾಗಳು ರಿಲೀಸ್​ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಟಿಟಿ ಮೇಲೆ ಕಣ್ಣಿಟ್ಟಿದ್ದಾರೆ. ಹಲವು ಸಿನಿಮಾಗಳು ನೇರವಾಗಿ ಒಟಿಟಿ ಹಾದಿ ಹಿಡಿಯುತ್ತಿವೆ. ಈಗ ಪುನೀತ್​ ರಾಜ್​ಕುಮಾರ್ (Puneeth Rajkumar) ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಅವರ ನಿರ್ಮಾಣದ ಮೂರು ಚಿತ್ರಗಳು ನೇರವಾಗಿ ಒಟಿಟಿ (OTT) ಹಾದಿ ಹಿಡಿದಿದೆ. ಈ ವಿಚಾರ ಕೇಳಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ.

ಪುನೀತ್​ ರಾಜ್​ಕುಮಾರ್ ನಟನೆ ಜತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಪಿಆರ್​ಕೆ ಸಂಸ್ಥೆ  ಸ್ಥಾಪಿಸಿ ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಈಗ ಮೂರು ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ಈ ಮೂರು ಚಿತ್ರಗಳು ಈಗ ಅಮೇಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗುತ್ತಿವೆ. ವಾರಕ್ಕೆ ಒಂದರಂತೆ ಮೂರು ಚಿತ್ರಗಳು ಪ್ರೀಮಿಯರ್​ ಆಗುತ್ತಿವೆ ಎನ್ನಲಾಗಿದೆ.

ಪುನೀತ್​ ರಾಜ್​ಕುಮಾರ್​ ಅವರು ಅಕ್ಟೋಬರ್​ 29ರಂದು ನಿಧನ ಹೊಂದಿದ್ದರು. ಅವರ ಅಕಾಲಿಕ ಮರಣ ಸಾಕಷ್ಟು ಜನರಿಗೆ ಶಾಕ್​ ನೀಡಿದೆ. ಅವರು ಸಾಕಷ್ಟು ಸಿನಿಮಾ ಕೆಲಸಗಳನ್ನು ಅರ್ಧಕ್ಕೆ ತೊರೆದು ಹೋಗಿದ್ದಾರೆ. ‘ಜೇಮ್ಸ್​’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಈ ಚಿತ್ರ ಈ ವರ್ಷ ಬಿಡುಗಡೆ ಆಗಲಿದೆ. ‘ಲಕ್ಕಿ ಮ್ಯಾನ್​’ ಸಿನಿಮಾದಲ್ಲಿ ಅಪ್ಪು ಅತಿಥಿ ಪಾತ್ರ ಮಾಡಿದ್ದಾರೆ. ಪಿಆರ್​ಕೆ ನಿರ್ಮಾಣದ ‘ಗಂಧದ ಗುಡಿ’ ಡಾಕ್ಯುಮೆಂಟರಿ ಚಿತ್ರಮಂದಿರದಲ್ಲೇ ರಿಲೀಸ್ ಆಗುತ್ತಿದೆ. ಇದರ ಜತೆಗೆ ಅವರ ನಿರ್ಮಾಣದ ಮೂರು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್​ ಆಗುತ್ತಿದೆ.

ಪಿಆರ್​ಕೆ ಪ್ರೊಡಕ್ಷನ್ ​‘ಒನ್​ ಕಟ್​ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್​ ಆಫ್​ ದಿ ಮ್ಯಾಚ್​’, ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಅರ್ಜುನ್​ ಕುಮಾರ್​ ಅವರು ‘ಫ್ಯಾಮಿಲಿ ಪ್ಯಾಕ್​’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಮ್ಯಾನ್​ ಆಫ್​ ದಿ ಮ್ಯಾಚ್​’ಗೆ ‘ರಾಮಾ ರಾಮಾ ರೇ’ ಖ್ಯಾತಿ ಡಿ. ಸತ್ಯ ಪ್ರಕಾಶ್​ ನಿರ್ದೇಶನವಿದೆ. ‘ಒನ್​ ಕಟ್​ ಟೂ ಕಟ್’ ಚಿತ್ರದಲ್ಲಿ ದ್ಯಾನಿಶ್​ ಸೇಠ್​ ನಟಿಸುತ್ತಿದ್ದಾರೆ.

ಈ ಮೊದಲು ಪಿಆರ್​ಕೆ ಅಡಿಯಲ್ಲಿ ಸಿದ್ಧವಾದ ‘ಕವಲುದಾರಿ’, ‘ಮಾಯಾಬಜಾರ್​ 2016’, ‘ಲಾ’ ಹಾಗೂ ‘ಫ್ರೆಂಚ್​ ಬಿರಿಯಾನಿ’ ಸಿನಿಮಾಗಳು ಅಮೇಜಾನ್​ ಪ್ರೈಮ್​ ವಿಡಿಯೋದಲ್ಲೇ ವೀಕ್ಷಣೆ ಲಭ್ಯವಾಗಿತ್ತು. ಈಗ ಅವರ ಮುಂದಿನ ಮೂರು ಚಿತ್ರಗಳಿಗೆ ಅಮೇಜಾನ್​ ಪ್ರೈಮ್​ ವೇದಿಕೆ ಆಗಿದೆ.

TV9 Kannada


Leave a Reply

Your email address will not be published. Required fields are marked *