ಅಮ್ಮನೊಂದಿಗೆ ಪಿಯಾನೋ ಕೇಳಲು ಬಂದ ಮರಿಯಾನೆ; ಮಂಡೇ ಬ್ಲ್ಯೂಸ್​ ಓಡಿಹೋಗದಿದ್ದರೆ ಹೇಳಿ – mother and baby elephant listening to a man playing piano watch viral video


Elephant : ಸಂಗೀತಕ್ಕೆ ಮನಸೋಲದವರು ಯಾರಿದ್ದಾರೆ? ಈ ಕಲಾವಿದರು ಕಾಡಿನೊಳಗೆ ಈ ಅಮ್ಮ ಮತ್ತು ಮರಿಯಾನೆಗೆಂದೇ ಪಿಯಾನೋ ನುಡಿಸಿದ್ದಾರೆ. ನೋಡಿ ವಿಡಿಯೋ.

ಅಮ್ಮನೊಂದಿಗೆ ಪಿಯಾನೋ ಕೇಳಲು ಬಂದ ಮರಿಯಾನೆ; ಮಂಡೇ ಬ್ಲ್ಯೂಸ್​ ಓಡಿಹೋಗದಿದ್ದರೆ ಹೇಳಿ

ಪಿಯಾನೋ ಕೇಳಲು ಬಂದ ಅಮ್ಮಆನೆ, ಮರಿಆನೆ

Viral Video : ಈ ಮಂಡೇ ಬ್ಲ್ಯೂಸ್​ ಓಡಿಸಲು ಇದಕ್ಕಿಂತ ಮನಮೋಹಕವಾದ ವಿಡಿಯೋ ಬೇಕೆ? ಈ ವಿಡಿಯೋ 2019ರಲ್ಲಿ ಚಿತ್ರೀಕರಣಗೊಂಡಿದ್ದು. ಅಮ್ಮ ನಾರ್ಪೋಲ್​ ಮತ್ತು ಮರಿ ನಾರ್ಗೆಲ್​ಗೆ ಪಿಯಾನೋ ಧ್ವನಿ ಕೇಳಿದೆ. ಹಾಗೇ ಹುಡುಕಿಕೊಂಡು ಬಂದಾಗ ಈ ಕಲಾವಿದರು ಸಿಕ್ಕಿದ್ದಾರೆ. ಪಿಯಾನೊ ಕೇಳುತ್ತ ಕೇಳುತ್ತ ಅವುಗಳ ಆ ಸಂತೋಷವನ್ನ ಹೇಗೆ ವ್ಯಕ್ತಪಡಿಸುತ್ತಿದ್ದಾವೆ ನೋಡಿ. 5,000 ಜನರು ಈ ವಿಡಿಯೋ ನೋಡಿದ್ದಾರೆ. 400 ಜನರು ಇಷ್ಟಪಟ್ಟಿದ್ಧಾರೆ.

ಕಲಾವಿದರಿಗೆ ಉಮೇದು ಬಂದು ಈ ಅಮ್ಮಮಗುವಿಗಾಗಿ ಮತ್ತಷ್ಟು ಪಿಯಾನೋ ನುಡಿಸಿ ತಾವೂ ಸಂತೋಷಪಟ್ಟಿದ್ಧಾರೆ. ಥೈಲ್ಯಾಂಡ್​ನಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಅನೇಕರು ಈ ಅದ್ಭುತವಾದ ವಿಡಿಯೋ ನೋಡಿ ಅಚ್ಚರಿಗೊಳಗಾಗಿದ್ಧಾರೆ. ಆದರೆ ಯಾರೋ ಒಬ್ಬರು, ಇದು ಸಹಜವಾಗಿ ಚಿತ್ರೀಕರಿಸಿದ ವಿಡಿಯೋ ಅಲ್ಲ. ಇಲ್ಲಿ ಆನೆಗಳಿಗೆ ತೊಂದರೆ ಕೊಡಲಾಗಿದೆ ಎಂದು ದೂರಿದ್ಧಾರೆ.

ನೆಟ್ಟಿಗರು ಆಗಾಗ ಇಂಥ ವಿಡಿಯೋಗಳ ಬಗ್ಗೆ ಪರ ವಿರೋಧದ ಚರ್ಚೆ ನಡೆಸುತ್ತಲೇ ಇರುತ್ತಾರೆ. ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹೂ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

TV9 Kannada


Leave a Reply

Your email address will not be published.