ನಮ್ಮನೇ ಯುವರಾಣಿ ಸೀರಿಯಲ್ ಕತೆ ಏಳು ವರ್ಷ ಮುಂದೆ ಹೋಗಿಟ್ಟಿದೆ. ಮೀರಾ ಅಂಡ್ ಅನಿಕೇತ್ ಕೂಡ ಕಣ್ಮರೆಯಾಗ್ಬಿಟ್ಟಿದ್ದಾರೆ. ಅವರಿಬ್ಬರ ಜಾಗಕ್ಕೆ ಹೊಸಬರು ಬಂದಿದ್ದಾರೆ. ಇದು ನಿಮ್ಗೆ ಗೊತ್ತಿರೋ ವಿಚಾರವೇ. ಆದ್ರೆ, ಪರಮ್ ರಾಜಗುರು ಪಾತ್ರದಲ್ಲಿ ಮಾಡ್ತಿರೋ ಈ ಹುಡ್ಗನ ಬಗ್ಗೆ ನಿಮ್ಗೆ ಹೇಳೋದ್ ಮರೆತಿತ್ವಿ. ಈಗ ಆ ಕಾಲ ಕೂಡಿಬಂದಿದೆ.
ಪರಮ್ ರಾಜಗುರು.. ನಮ್ಮನೇ ಯುವರಾಣಿ ಸೀರಿಯಲ್ನ ಲೀಡ್ ರೋಲ್. ಅನಿಕೇತ್ ಜಾಗಕ್ಕೆ ಶಕ್ತಿ ತುಂಬಲು ಬಂದಿರೋ ಹೊಸ ಪಾತ್ರ. ಪರಮ್ ರಾಜಗುರು ಪಾತ್ರದಲ್ಲಿ ಮಾಡ್ತಿರೋ ಹ್ಯಾಂಡ್ಸಮ್ ಹುಡ್ಗನ ಹೆಸರು ಸ್ನೇಹಿತ್ ಗೌಡ. ನಟನಾಗ್ಬೇಕು ಅನ್ನೋ ಮಹತ್ವಾಕಾಂಕ್ಷೆಯಿಟ್ಕೊಂಡಿದ್ದ ಸ್ನೇಹಿತ್ಗೆ ಕೊನೆಗೂ ಒಂದೊಂಳ್ಳೆ ಪಾತ್ರ ಸಿಕ್ಕಿದೆ.. ಇದು ಸ್ನೇಹಿತ್ಗೆ ಸಹಜವಾಗಿಯೇ ಸಂತಸವಾಗಿರುತ್ತದೆ. ಆದ್ರೆ, ಇವ್ರಿಗಿಂತ ತುಂಬಾ ಅಂದ್ರೆ ಹೆಚ್ಚೆಚ್ಚು ಖುಷಿಪಟ್ಟೋರು ಇವರ ತಾಯಿ.
ನಮ್ಮನೇ ಯುವರಾಣಿ ಸೀರಿಯಲ್ನಲ್ಲಿ ಆಯ್ಕೆ ಆದ್ಮೇಲೆ ಸ್ನೇಹಿತ್ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ತನ್ನ ತಾಯಿಯ ಬಗ್ಗೆ ಬರೆದುಕೊಂಡಿದ್ದಾರೆ. ಇದೊಂದು ಎಮೋಷನಲ್ ನೋಟ್ ಅಂದ್ರೆ ತಪ್ಪಾಗೋಲ್ಲ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಮ್ಮ ತಾಯಿಯ ಊರಲ್ಲಿ ಇದ್ದಿದ್ದು ಒಂದೇ ಟಿವಿ. ಕಿಟಕಿಯ ಸಂದಿಯಲ್ಲಿ ದೂರದರ್ಶನದ ಕಾರ್ಯಕ್ರಮಗಳನ್ನ ನೋಡಲು ಪೈಪೋಟಿ ನಡೆಸ್ತಿದ್ದರು. ಡಿಸೆಂಬರ್ 25ರಂದು ನಾನು ಟಿವಿಯಲ್ಲಿ ಬರ್ತೀನಿ ನೋಡಮ್ಮ ಅಂತಾ ನಾನು ಹೇಳ್ದಾಗ ಆಕೆಯ ಸಂತೋಷಕ್ಕೆ ಪಾರವೇ ಇರ್ಲಿಲ್ಲ. ನನ್ನನ್ನ ಟಿವಿಯಲ್ಲಿ ನೋಡುವ ತಾಯಿಯ ಕನಸು ಈಡೇರಿದೆ. ನನ್ನ ತಾಯಿ ಹೆಚ್ಚು ಸಂತೋಷ ಪಟ್ಟ ಕ್ಷಣವಿದು. ಇದಷ್ಟೇ ಅಲ್ಲ, ಇನ್ನಷ್ಟು ಕನಸಗಳು ನನಸಾಗ್ಬೇಕಿದೆ ಎಂದು ಬರೆದುಕೊಂಡಿದ್ದಾರೆ.
ಇದು ಸ್ನೇಹಿತ್ ಅವರ ಮನದ ಮಾತು. ಇಷ್ಟು ವರ್ಷ ಪಟ್ಟ ಶ್ರಮ, ಆ ಸ್ಟ್ರಗಲ್, ಎಲ್ಲವನ್ನೂ ಈ ಪದಗಳಲ್ಲಿ ನೋಡ್ಬಹುದು. ಜೊತೆಗೆ ತಾಯಿಯ ಕನಸು ಈಡೇರಿಸಿದ ಸಂತೃಪ್ತಿಯೂ ಅವರಲ್ಲಿದೆ. ಜೊತೆಗೆ ಇನ್ನಷ್ಟು ಸಾಧನೆ ಮಾಡ್ಬೇಕು ಅನ್ನೋ ಉತ್ಸಾಹವೂ ಇದೆ. ಅವ್ರು ಅಂದುಕೊಂಡಂತೆ ಸ್ನೇಹಿತ್ ಗೌಡ ಜರ್ನಿ ಕಲರ್ ಫುಲ್ಲಾಗಿರಲಿ.