ಕೊಡಗು: ಕೊರೊನಾದಿಂದ ಮೃತರಾದ ತನ್ನ ತಾಯಿಯ ಮೊಬೈಲ್‌ ಹುಡುಕಿಕೊಡುವಂತೆ  ಬಾಲಕಿಯೊಬ್ಬಳು ಮನವಿ ಮಾಡಿಕೊಂಡಿದ್ದಾಳೆ.

ಸೋಮವಾರಪೇಟೆ ತಾಲ್ಲೂಕಿನ ಗುಮ್ಮನಕೊಲ್ಲಿ‌ ನಿವಾಸಿ ಪ್ರಭಾ ಎಂಬವರು, ಕೊರೊನಾ ಸೋಂಕಿಗೀಡಾಗಿದ್ದರು. ಚಿಕಿತ್ಸೆ ಫಲಿಸದೇ ಮೇ 16 ರಂದು‌ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದರು. ಬಳಿಕ ಆಸ್ಪತ್ರೆ ಸಿಬ್ಬಂದಿ ಪ್ರಭಾ ಅವರ ಮೊಬೈಲ್ ಹಿಂದಿರುಗಿಸಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಪ್ರಭಾರ ಪುತ್ರಿ ಹೃತಿಕ್ಷ ಡಿ.ಸಿ ಹಾಗೂ ಶಾಸಕರಿಗೆ ಬಹಿರಂಗ ಪತ್ರ ಬರೆದಿದ್ದು, ಇದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಲಾಗಿದೆ.

ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ತಾಯಿಯ ನೆನಪುಗಳು ಆ ಮೊಬೈಲ್‌ನಲ್ಲಿದೆ. ಯಾರಾದರು ತೆಗೆದುಕೊಂಡಿದ್ರೆ ಅಥವಾ ಯಾರಿಗಾದ್ರು ಮೊಬೈಲ್ ಸಿಕ್ಕಿದ್ರೆ ದಯವಿಟ್ಟು ಕೊಡಿ. ಆನ್ ಲೈನ್ ಕ್ಲಾಸಿಗೂ ನನಗೆ ಮೊಬೈಲ್ ಇಲ್ಲ. ದಯವಿಟ್ಟು ನಮ್ಮ ಮೊಬೈಲ್ ದೊರಕಿಸಿಕೊಡಿ ಎಂದು ಹೃತಿಕ್ಷ ಕೇಳಿಕೊಂಡಿದ್ದಾಳೆ. ಬಾಲಕಿಯ ಮನವಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

The post ‘ಅಮ್ಮನ ನೆನಪು ಆ ಮೊಬೈಲ್​ನಲ್ಲಿದೆ, ಯಾರಿಗಾದ್ರು ಸಿಕ್ಕಿದ್ರೆ ಕೊಡಿ’ -ತಾಯಿ ಕಳೆದುಕೊಂಡ ಬಾಲಕಿಯ ಮನವಿ appeared first on News First Kannada.

Source: newsfirstlive.com

Source link