ಅಮ್ಮನ ವಿಷಯಕ್ಕೆ ಕಣ್ಣೀರು ಹಾಕಿದ ಇಶಿತಾ; ಮುರುಗ ಅವರ ರಿಯಾಕ್ಷನ್​ ಹೇಗಿತ್ತು ಗೊತ್ತಾ..?

ಅಮ್ಮನ ವಿಷಯಕ್ಕೆ ಕಣ್ಣೀರು ಹಾಕಿದ ಇಶಿತಾ; ಮುರುಗ ಅವರ ರಿಯಾಕ್ಷನ್​ ಹೇಗಿತ್ತು ಗೊತ್ತಾ..?

ರಾಜಾ ರಾಣಿ ಶೋ ಕೇವಲ ರಿಯಾಲಿಟಿ ಶೋ ಎನ್ನುವುದಕ್ಕಿಂತ ಭಾವನೆಗಳ ಸಮಾಗಮ ಸಂಬಂಧಗಳನ್ನು ಕಟ್ಟಿಕೊಡುವ ವೇದಿಕೆ ಎಂಬುವುದು ಸ್ಪರ್ಧಿಗಳ ಅಭಿಪ್ರಾಯ. ಇನ್ನೂ ಈಗಾಗಲೇ ಪ್ರಾರಂಭವಾದ ಕಾರ್ಯಕ್ರಮ ಈ ವಾರ ನಗು ಅಳುವಿನಿಂದ ಕೂಡಿತ್ತು.
ಟಾಸ್ಕ್​ಗಳ ವಿಚಾರಕ್ಕೆ ಬಂದರೇ ನಿನ್ನೆಯ ಎಪಿಸೋಡ್​ನಲ್ಲಿ ಕೊಟ್ಟ ಚಾಲೆಂಜ್​ ಮನಸುಗಳ ಮಾತು ಮಧುರ. ಈ ಚಾಲೆಂಜ್​ನಲ್ಲಿ ಸ್ಪರ್ಧಿಗಳು ಮನಸ್ಸು ಬಿಚ್ಚಿ ಮಾತನಾಡಿದ್ರು. ಇಷ್ಟು ದಿನ ತಮ್ಮ ಸಂಗಾತಿಗಳಿಗೆ ಹೇಳುವುದಕ್ಕೆ ಆಗದಿರುವ ವಿಷಯಗಳನ್ನು ಈ ವೇದಿಕೆ ಮೇಲೆ ಹೇಳಿದ್ರು.

ಮೊದಲು ಇಶಿತಾ ಹಾಗೂ ಮುರುಗ ಅವರ ಸರದಿ ಇತ್ತು. ನಗುತ್ತ ಮಾತು ಶುರು ಮಾಡಿದ ಈ ಜೋಡಿ, ನನಗೆ ತಾಳಿಕಟ್ಟುವ ಕ್ಷಣದಲ್ಲಿ ನೀನು ಮುತ್ತು ಕೊಡಲಿಲ್ಲ. ಇದನ್ನು ನಾನು ನೀರಿಕ್ಷಿಸಿದ್ದೆ ಎಂದು ಇಶಿತಾ ಮುರಗ ಅವರಿಗೆ ತಮ್ಮ ಕಂಪ್ಲೆಂಟ್​ ಲಿಸ್ಟ್​ ಹೇಳ್ತಾರೆ.

ಇದಕ್ಕೆ ಮುರುಗ ನಗುಮೂಗದಲ್ಲಿಯೇ, ಇಲ್ಲಾ ಅವತ್ತು ಎಷ್ಟು ಟೆನ್ಷನ್​ ಇತ್ತು ಅಂತಾ ನಿಂಗೆ ಗೊತ್ತು. ಎಲ್ಲಾ ಹಿರಿಯರು ಇದ್ರು. ಅದು ಮಾಡಿ, ಇದು ಮಾಡಿ, ಮುಹೂರ್ತ ಮೀರ್ತಿದೆ ಅಂತೆಲ್ಲಾ ಹೇಳ್ತಿದ್ರು. ಈ ಗಲಾಟೆಯಲ್ಲಿ ನಾನು ಮರೆತು ಹೋದೆ ಎಂದು ಕ್ಯೂಟ್​ ಆಗಿಯೇ ಸಾರಿ ಕೇಳ್ತಾರೆ.

ಇದಕ್ಕೆ ಇಶಿತಾ, ನಾನು ತುಂಬಾ ನೀರಿಕ್ಷೆ ಮಾಡಿದ್ದೆ, ಸರಿ ಆಯ್ತು ಬಿಡು ಈಗ ಮದುವೆಯಾಗಿ ಆಲ್​ರಡಿ ಒಂದುವರೆ ವರ್ಷಾ ಆಯ್ತು ಅಂತಾರೆ.

ಆದ್ರೇ ಇಲ್ಲಿ ಇನ್ನೊಂದು ಮಾತು ಹೇಳಿ ಅವರು ಅಳಲು ಆರಂಭಿಸುತ್ತಾರೆ. ಆ ಮಾತು ಅವರ ಅಮ್ಮ. ಹೌದು, ಮುರುಗ ಅವರು ಇಶಿತಾ ಅವರ ಅಮ್ಮನಿಗೆ ಟೈಮ್​ ಕೋಡುವುದಿಲ್ಲ ಎಂಬುವುದು ಇಶಿತಾ ಅವರ ನೋವಾಗಿತ್ತು. ಇಶಿತಾ ತಮ್ಮ ಅಮ್ಮನ ಬಗ್ಗೆ ಮಾತನಾಡುತ್ತ ಕಣ್ಣಿರಿಟ್ಟರು.

ಇತ್ತ ಅವರನ್ನು ಸಮಾಧಾನ ಮಾಡೋಕೆ ಆಗದೇ, ಸ್ಪಂದಿಸುವುದಕ್ಕೆ ಆಗದೇ ಮುರುಗ ಕೂಡಾ ಕಣ್ಣೀರಿಟ್ಟು, ಇಶಿತಾ ಅವರಿಗೆ ಪ್ರಾಮಿಸ್​ ಮಾಡ್ತಾರೆ. ಇನ್ನು ಯಾವತ್ತೂ ಈ ತರಹ ಆಗುವುದಿಲ್ಲ. ನಾನು ಅಮ್ಮನ್ನಾ ತುಂಬಾ ಚನ್ನಾಗಿ ನೋಡ್ಕೋತಿನಿ ಅಂತಾರೆ.

ನಂತರ ಇಶಿತಾ ಹಾಗೂ ಮುರುಗ ಅವರ ನಡುವೆ ಇದ್ದ ಡೋರ್​ನ್ನು ಒಪನ್​ ಮಾಡಿದ ಇಶಿತಾ, ಮುರುಗ ಅವರನ್ನು ತಬ್ಬಿ ಒಬ್ಬರಿಗೊಬ್ಬರು ಸಾಂತ್ವಾನ ಹೇಳಿದ್ರು.

ಬಳಿಕ ಈ ಜೋಡಿಗಳನ್ನು ಕ್ಯಾಂಡಲ್​ ಲೈಟ್​ ಡಿನ್ನರ್​ ಸೆಟ್​ಪ್​ ಮಾಡಿ ಅಲ್ಲಿ ಕರೆದುಕೊಂಡುಹೋದ್ರು. ಇಶಿತಾ ಹಾಗೂ ಮುರುಗ ಒಂದು ಒಳ್ಳೆ ಹಾಡಿಗೆ ಸ್ಟೆಪ್ಸ್​ ಹಾಕಿದ್ರು.. ಬಳಿಕಾ ಮುರುಗ ಮನಬಿಚ್ಚಿ ಮಾತನಾಡಿದ್ರು. ಮುರುಗ ಅವರ ಮನದಾಳದ ಮಾತು ಕೇಳಿ ಇಶೀತಾ ಕಣ್ಣಿರಿಟ್ರು. ನಂತ್ರ ಒಂದು ರೋಸ್​ ಕೊಡುವ ಮೂಲಕ ಮುರುಗ ಸಖತ್​ ಆಗಿ ಪ್ರೊಪೊಸ್​ ಮಾಡಿದ್ರು.

ಕೊನೆಯಲ್ಲಿ ಜಡ್ಜ​ಸ್​ಗಳದಾದ ಸೃಜನ್​ ಲೋಕೇಶ್​ ಹಾಗೂ ತಾರಾ ಇಬ್ಬರ ಮಾತು ಕಥೆಯನ್ನು ಕೇಳಿ, ನಿಮ್ಮಬ್ಬರ ಬಾಂಡಿಂಗ್​ ತುಂಬಾ ಇಷ್ಟಾಯ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ರು.

The post ಅಮ್ಮನ ವಿಷಯಕ್ಕೆ ಕಣ್ಣೀರು ಹಾಕಿದ ಇಶಿತಾ; ಮುರುಗ ಅವರ ರಿಯಾಕ್ಷನ್​ ಹೇಗಿತ್ತು ಗೊತ್ತಾ..? appeared first on News First Kannada.

Source: newsfirstlive.com

Source link