ಅಮ್ಮ ಮಂಗ-ಮಗು ನಾಯಿಮರಿ; ಬಲು ಅಪರೂಪದ ಜೋಡಿಯಿದು! | A monkey rearing a puppy as its own baby, watch this adorable videoಎರಡು ಭಿನ್ನ ಪ್ರಬೇಧದ ಪ್ರಾಣಿಗಳ ನಡುವಿನ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಕಂಡು ಜನ ದಂಗಾಗಿದ್ದಾರೆ ಮತ್ತು ಅಷ್ಟೇ ಸಂತೋಷ ಕೂಡ ಪಡುತ್ತಿದ್ದಾರೆ. ನಾಯಿಮರಿಯನ್ನು ಮಾಳಿಗೆ ಮೇಲೆ ಕೋತಿ ಎತ್ತಿಕೊಂಡು ಹೋಗಿ ಹಾಲುಣಿಸುತ್ತಿರುವ ದೃಶ್ಯ ಹೃದಯಸ್ಪರ್ಶಿಯಾಗಿದೆ.

TV9kannada Web Team


| Edited By: Arun Belly

Aug 23, 2022 | 6:51 PM
ಗದಗ: ಬಹಳ ಅಪರೂಪದ ತಾಯಿ ಮಗುವಿನ ಜೋಡಿಯಿದು ಮಾರಾಯ್ರೇ. ಗದಗ (Gadag) ನಗರದ ವಿವೇಕಾನಂದ ಬಡಾವಣೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಕೋತಿಯೊಂದು (monkey) ಒಂದು ನಾಯಿಮರಿಯನ್ನು (puppy) ತಾನೇ ಹೆತ್ತ ಮಗುವೇನೋ ಎಂಬಂತೆ ಆರೈಕೆ ಮಾಡುತ್ತಿದೆ. ಕಳೆದರೆಡು ದಿನಗಳಿಂದ ಬಡಾವಣೆಯಲ್ಲಿ ಎರಡು ಭಿನ್ನ ಪ್ರಬೇಧದ ಪ್ರಾಣಿಗಳ ನಡುವಿನ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ಕಂಡು ಜನ ದಂಗಾಗಿದ್ದಾರೆ ಮತ್ತು ಅಷ್ಟೇ ಸಂತೋಷ ಕೂಡ ಪಡುತ್ತಿದ್ದಾರೆ. ನಾಯಿಮರಿಯನ್ನು ಮಾಳಿಗೆ ಮೇಲೆ ಕೋತಿ ಎತ್ತಿಕೊಂಡು ಹೋಗಿ ಹಾಲುಣಿಸುತ್ತಿರುವ ದೃಶ್ಯ ಹೃದಯಸ್ಪರ್ಶಿಯಾಗಿದೆ.

TV9 Kannada


Leave a Reply

Your email address will not be published.