IPL ಮೆಗಾ ಹರಾಜಿಗೆ ದಿನ ಹತ್ತಿರವಾಗ್ತಿದ್ದಂತೆ ಆಟಗಾರರ ಖರೀದಿ ಲೆಕ್ಕಾಚಾರ ಜೋರಾಗಿದೆ. ದೇಶ-ವಿದೇಶಗಳ ಸ್ಟಾರ್ ಆಟಗಾರರಿಗೆ ಬೇಡಿಕೆ ಹೆಚ್ಚಾಗಿದ್ದು, ಯುವ ಆಟಗಾರರಿಗೂ ಮಣೆ ಹಾಕೋದಕ್ಕೂ ಫ್ರಾಂಚೈಸಿಗಳು ಸಿದ್ಧತೆ ಮಾಡಿಕೊಂಡಿವೆ. ಅದರಲ್ಲೂ ಈ ಒಬ್ಬ ಆಟಗಾರನ ಮೇಲಂತೂ ಕೋಟಿ ಕೋಟಿ ಬಂಡವಾಳ ಹೂಡೋಕೆ ಭಾರೀ ತಯಾರಿ ನಡೆದಿದೆ.
IPL ಆರಂಭಕ್ಕೆ ಹಲವು ತಿಂಗಳೇ ಇದ್ದರೂ, ಅದರ ಫೀವರ್ ಈಗಾಗಲೇ ಶುರುವಾಗಿದೆ. ಮೆಗಾ ಆಕ್ಷನ್ನಲ್ಲಿ ಸ್ಟಾರ್ ಆಟಗಾರರು ಯಾವ ತಂಡಕ್ಕೆ ಸೇಲಾಗ್ತಾರೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಮಾಜಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ರನ್ನ ಈ ಬಾರಿಯ ಮೆಗಾ ಹರಾಜಿನ ಬಿಗ್ ಬುಲ್ ಎಂದೇ ಹೇಳಲಾಗ್ತಿದೆ.
ನೂತನ ಫ್ರಾಂಚೈಸಿಗಳ ಆಫರ್ ತಿರಸ್ಕರಿಸಿದ ಅಯ್ಯರ್..?
ನೂತನ ಫ್ರಾಂಚೈಸಿಗಳಾದ ಲಖನೌ ಮತ್ತು ಅಹ್ಮದಾಬಾದ್ ನೀಡಿದ ಆಫರ್ ಅನ್ನ ಶ್ರೇಯಸ್ ಅಯ್ಯರ್ ತಿರಸ್ಕರಿಸಿದ್ದಾರಂತೆ. ಇಂಜುರಿ ಕಾರಣ 14ನೇ ಆವೃತ್ತಿಯ IPLನ ಅರ್ಧ ಆವೃತ್ತಿಗೆ ಮಿಸ್ ಆಗಿದ್ರು. ಇದು ನಾಯಕತ್ವಕ್ಕೆ ಕುತ್ತು ತಂದಿತ್ತು. ಪರಿಣಾಮ 2ನೇ ಹಂತದ IPLಗೆ ಮರಳಿದ್ರೂ, ಪಂತ್ಗೆ ಪಟ್ಟ ಕಟ್ಟಲಾಗಿತ್ತು. ಇದೀಗ ಹೊಸ ಫ್ರಾಂಚೈಸಿಗಳು ಆಫರ್ ನೀಡಿದ್ರೂ, ನಾಯಕತ್ವ ನೀಡಲ್ಲ ಅಂತ ಹೇಳಿವೆ. ಹೀಗಾಗಿ ಅಯ್ಯರ್, ಹರಾಜಿನ ಕಣದಲ್ಲಿಕ್ಕಿಳಿದಿದ್ದಾರೆ.
ಮೆಗಾ ಹರಾಜಿನಲ್ಲಿ ಪಾಲ್ಗೊಳ್ತಾರಂತೆ ಶ್ರೇಯಸ್ ಅಯ್ಯರ್
ನೂತನ ಫ್ರಾಂಚೈಸಿಗಳ ಆಫರ್ ತಿರಸ್ಕರಿಸಿರುವ ಶ್ರೇಯಸ್, ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಡೆಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಹೊಂದಿರುವ ಅಯ್ಯರ್, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲವಾಗಲಿದ್ದಾರೆ. ಹೀಗಾಗಿ ಈ ಬಾರಿ ದುಬಾರಿ ಮೊತ್ತಕ್ಕೆ ಸೇಲಾಗೋದು ಪಕ್ಕಾ. ನಾಯಕತ್ವದ ಕಾರಣಕ್ಕಾಗಿಯೇ ನೂತನ ಫ್ರಾಂಚೈಸಿಗಳ ಆಫರ್ ತಿರಸ್ಕರಿಸಿದ್ದಾರೆ. ಹಾಗಾಗಿ ಕ್ಯಾಪ್ಟನ್ಗಾಗಿ ಹುಡುಕಾಟ ನಡೆಸ್ತಿರೋ, ಫ್ರಾಂಚೈಸಿಗಳು ಅಯ್ಯರ್ ಮೇಲೆ ಕೋಟಿ ಕೋಟಿ ಸುರಿಯೋದ್ರಲ್ಲಿ ಅನುಮಾನವೇ ಇಲ್ಲ.
ಅಯ್ಯರ್ಗಾಗಿ ಸ್ಪರ್ಧೆಗಿಳಿಯಲಿವೆ RCB, KKR, ಪಂಜಾಬ್
ಹರಾಜಿನಲ್ಲಿ ಈ ಮೂರು ಫ್ರಾಂಚೈಸಿಗಳು ಅಯ್ಯರ್ ಖರೀದಿಗೆ ಸಖತ್ ಫೈಟ್ ನಡೆಸಲಿವೆ. RCB ನಾಯಕತ್ವದಿಂದ ಕೊಹ್ಲಿ ಇಳಿದಿದ್ರೆ, ಇಯಾನ್ ಮಾರ್ಗನ್ನನ್ನ KKR ಉಳಿಸಿಕೊಂಡಿಲ್ಲ. ಇನ್ನು ಪಂಜಾಬ್ ತಂಡದಿಂದ ರಾಹುಲ್ ಕೂಡ ಹೊರಬಂದಿದ್ದಾರೆ. ಹೀಗಾಗಿ ಈ ಮೂರು ತಂಡಗಳಿಗೂ ನೂತನ ಕ್ಯಾಪ್ಟನ್ ಅಗತ್ಯ ಇದ್ದು, ಹಾಗಾಗಿ ನೇರ ಪೈಪೋಟಿ ನಡೆಯಲಿದೆ. ಅಷ್ಟೆ ಅಲ್ಲ SRH ಕೂಡ ಪೈಪೋಟಿಗಿಳಿಯೋ ಸಾಧ್ಯತೆ ಇದೆ.
ಒಟ್ನಲ್ಲಿ ಸಮರ್ಥ ನಾಯಕತ್ವದ ಗುಣ ಹಾಗೂ ಉತ್ತಮ ಬ್ಯಾಟ್ಸ್ಮನ್ ಆಗಿರುವ ಶ್ರೇಯಸ್, ಯಾವುದೇ ತಂಡಕ್ಕೆ ಹೋದ್ರೂ ಬಲ ಹೆಚ್ಚೋದ್ರಲ್ಲಿ ಅನುಮಾನವಿಲ್ಲ. ಹೀಗಾಗಿ ಹೆಚ್ಚು ಮೊತ್ತಕ್ಕೆ ಬಿಡ್ ಆಗೋದಂತೂ ಪಕ್ಕಾ ಆಗಿದ್ದು, ಯಾವ ತಂಡ ಖರೀದಿಸುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
The post ಅಯ್ಯರ್ಗೆ ಭಾರೀ ಡಿಮ್ಯಾಂಡ್.. ಕೋಟಿ ಕೋಟಿ ಸುರಿಯಲು ಮುಂದಾದ ಪ್ರಾಂಚೈಸಿ ಯಾರು? appeared first on News First Kannada.