ಅಯ್ಯೋ ಎಂಥೆಂಥಾ ಕಳ್ಳರು..! ಮೊಬೈಲ್ ಕದಿಯಲು ಆಸ್ಪತ್ರೆಗೆ ದಾಖಲಾಗಿ ಸಿಕ್ಕಿಬಿದ್ದದ್ದೇ ಇಂಟರೆಸ್ಟಿಂಗ್


ಚಿತ್ರದುರ್ಗ: ಚಾಲಾಕಿ ಕಳ್ಳನೊಬ್ಬ ಆಸ್ಪತ್ರೆಯಲ್ಲಿ ಮೊಬೈಲ್​ ಕದಿಯಲು ರೋಗಿಯ ಅವಾತರವೇತ್ತಿದ ಘಟನೆ ಜಿಲ್ಲೆಯ ಹಿರಿಯೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಖದೀಮನೊಬ್ಬ ಮೊಬೈಲ್ ಕಳ್ಳತನ ಮಾಡಲು ರೋಗಿಯ ಸೋಗಿನಲ್ಲಿ ಆಸ್ಪತ್ರೆಗೆ ಬಂದಿದ್ದಾನೆ. ಸಹಜವಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ಅಂತ ಬರೋರು ಅಡ್ಮಿಟ್​​ ಆಗೋದು ಕಾಮನ್. ಅದೇ ರೀತಿ ವಾರ್ಡ್​ ಒಂದರಲ್ಲಿ ಬೆಡ್​ ಪಡೆದು ಕಳ್ಳ ದಾಖಲಾಗಿದ್ದಾನೆ. ಆದರೆ ಮುಂಜಾನೆಯಾಗೋದ್ರಲ್ಲಿ ತನ್ನ ಕರಾಮತ್ತು ತೋರಿಸಿ ಬಾಯಿ ಮೇಲೆ ಬೆರಳು ಇಡೋ ಹಾಗೆ ಮಾಡಿದ್ದಾನೆ.

ವಾರ್ಡನಲ್ಲಿ ದಾಖಲಾಗಿದ್ದ ಖತರ್ನಾಕ್​ ಖದೀಮ ಬೆಳಗಾಗೋದ್ರಲ್ಲಿ ಪಕ್ಕದಲ್ಲಿದ್ದ ಯೋಗೀಶ್​ ಎಂಬುವವರ ಮೊಬೈಲ್​ ಕದ್ದು ಪರಿಯಾಗಿದ್ದಾನೆ. ಮುಂಜಾನೆ ಮೊಬೈಲ್​ ಕಾಣದಿದ್ದಕ್ಕೆ ಸಿಸಿಟಿವಿ ಪರಿಶೀಲನೆ ನಡೆಸಿದಾಗ ರೋಗಿ ಕಮ್​ ಕಳ್ಳನ ಕರಾಮತ್ತು ಬೆಳಕಿಗೆ ಬಂದಿದೆ.

News First Live Kannada


Leave a Reply

Your email address will not be published. Required fields are marked *