ಅಯ್ಯೋ.. ನನಗೆ ಬಿಟ್ ಕಾಯನ್ ಅಂದ್ರೇನೇ ಗೊತ್ತಿಲ್ಲ -ವಾಟಾಳ್ ನಾಗರಾಜ್


ಮೈಸೂರು: ಅಯ್ಯೋ.. ನನಗೆ ಬಿಟ್ ಕಾಯನ್ ಅಂದ್ರೇನೇ ಗೊತ್ತಿಲ್ಲ. ಅದೇನಿದ್ರೂ ದರೋಡೆಕೋರರಿಗೆ ಮಾತ್ರ ಗೊತ್ತು. ಅದರ ಸ್ವರೂಪವನ್ನೇ ಅಥೈಸಿಕೊಳ್ಳಲು ಆಗಲಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆ ಮೈಸೂರಿನ ಆರ್ ಗೇಟ್ ಬಳಿ ಸಾರ್ವಜನಿಕರಿಗೆ ಉಚಿತವಾಗಿ ಕಡಲೆಕಾಯಿ ನೀಡುವ ಮೂಲಕ ವಿನೂತನ ರೀತಿಯಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಬಿಟ್​ ಕಾಯಿನ್​ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ವಾಟಾಳ್​ ನಾಗರಾಜ್​​, ಪ್ರಕರಣವನ್ನ ಸಿಬಿಐಗೆ ವಹಿಸಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ಯಾರೇ ಶಾಮೀಲಾಗಿದ್ರೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ವಿಧಾನಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ನನಗೆ ಒಂದು ಸ್ಥಾನ ಬಿಟ್ಟುಕೊಡಬೇಕು. ಹಿಂದಿನಿಂದಲೂ ನಾನು ಕಾಂಗ್ರೆಸ್​ಗೆ ಬೆಂಬಲಿಸಿದ್ದೇನೆ. ಎಸ್.ಎಂ ಕೃಷ್ಣ, ರಾಜಶೇಖರ ಮೂರ್ತಿ, ಧೃವನಾರಾಯಣ್ ಅವರಿಗೆ ಮತ ಹಾಕಿದ್ದೀನಿ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ನನ್ನನ್ನ ಪರಿಷತ್​​ಗೆ ನಾಮನಿರ್ದೇಶನ ಮಾಡಲು ಮೈಸೂರು ಭಾಗದ ಜನರು ಒತ್ತಾಯ ಮಾಡಿದ್ರು. ಈಗಾಗೀ ಮೈಸೂರಿನ ಎರಡು ಸ್ಥಾನಗಳಲ್ಲಿ ನನಗೆ ಒಂದು ಸ್ಥಾನವನ್ನ ಬೆಂಬಲಿಸಬೇಕು. ನಾನು 60 ವರ್ಷಗಳಿಂದ ಕನ್ನಡ ಪರ ಹೋರಾಟಗಾರ ಮಾಡ್ತಿದ್ದು, ನಾನು ಕಾಂಗ್ರೆಸ್ ನಿಂದ ಟಿಕೆಟ್ ಕೇಳುವುದು ಸೂಕ್ತವಲ್ಲ. ಆದ್ದರಿಂದ ನನಗೆ ಬೆಂಬಲ ನೀಡಿದರೇ ಅವರಿಗೆ ಗೌರವ ಸಿಗುತ್ತದೆ. ಈ ಬಗ್ಗೆ ಶೀಘ್ರವೇ ನಾನು ಕಾಂಗ್ರೆಸ್​​​ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಇದರಿಂದ ಅವರ ಗೌರವ, ಶಕ್ತಿ ಎರಡೂ ಹೆಚ್ಚಾಗುತ್ತದೆ ಎಂದರು.

News First Live Kannada


Leave a Reply

Your email address will not be published. Required fields are marked *