ಗದಗ: ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದ್ದು, ಸೋಂಕು ಗ್ರಾಮೀಣ ಪ್ರದೇಶದಲ್ಲೂ ತನ್ನ ಕೌರ್ಯವನ್ನು ತೋರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್​​ಡೌನ್ ಜಾರಿ ಮಾಡಿದೆ. ಆದರೆ ಮನೆಯಿಂದ ಹೊರಗೆ ಬರದಂತೆ ಕಠಿಣ ನಿಯಮಗಳು ವಿಧಿಸಿದ್ದರೂ, ಜನರು ಕ್ಷುಲ್ಲಕ ಕಾರಣಗಳನ್ನು ನೀಡಿ ಪೊಲೀಸರ ಕೈಗೆ ಸಿಕ್ಕಿ ಬಿಳುತ್ತಿದ್ದಾರೆ.

ಇದೇ ರೀತಿ ಗದಗ ನಗರದಲ್ಲಿಯೂ ವ್ಯಕ್ತಿಯೋರ್ವ ಕೈಯಲ್ಲಿ ಕೋಳಿ ಹಿಡಿದು ಮನೆಯಿಂದ ಹೊರ ಬಂದಿದ್ದು, ಪೊಲೀಸರು ಆತನನ್ನು ತಡೆದ ವೇಳೆ ಅಚ್ಚರಿಯ ಕಾರಣ ನೀಡಿದ್ದಾನೆ. ತನ್ನ ಕೋಳಿಗೆ ಆರೋಗ್ಯ ಸರಿ ಇಲ್ಲ, ಭೇದಿ ಆಗುತ್ತಿದೆ. ಆದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಪೊಲೀಸರಿಗೆ ಹೇಳಿದ್ದು, ವ್ಯಕ್ತಿಯ ಹೇಳಿದ ಕಾರಣ ಕೇಳಿ ಪೊಲೀಸರು ಬಿದ್ದು ಬಿದ್ದು ನಕ್ಕಿದ್ದಾರೆ.

ನಗರದ ಟಾಂಗಾ ಕೂಟದ ಬಳಿ ಘಟನೆ ನಡೆದಿದ್ದು, ತನ್ನ ಐನಾತಿ ಐಡಿಯಾದೊಂದಿಗೆ ಪೊಲೀಸರನ್ನ ಯಾಮಾರಿಸಲು ಬಂದ ವ್ಯಕ್ತಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಆದರೆ ಕಾರಣ ಪೊಲೀಸರಲ್ಲಿ ನಗು ತರಿಸಿದ್ದು, ಆತನನ್ನು ಕೆಲ ಸಮಯ ವಿಚಾರಣೆ ನಡೆಸಿ ಲಾಕ್​​ಡೌನ್​ ನಿಯಮಗಳನ್ನು ಮುರಿಯದಂತೆ ಎಚ್ಚರಿಕೆ ನೀಡಿ ಮನೆಗೆ ವಾಪಸ್ ಕಳುಹಿಸಿದ್ದಾರೆ.

The post ‘ಅಯ್ಯೋ.. ನನ್ ಕೋಳಿಗೆ ಭೇದಿ.. ಆಸ್ಪತ್ರೆಗೆ ಹೋಗ್ತಿದ್ದೇನೆ ಸಾರ್..!’ ಮುಂದೇನಾಯ್ತು..? appeared first on News First Kannada.

Source: newsfirstlive.com

Source link