ಅಯ್ಯೋ ಹೆಂಡತಿ ಹೊಡೀತಾಳೆ! ಕಾಪಾಡಿ ನನ್ನನ್ನು ಎಂದು ಪ್ರಧಾನಿ ಮೋದಿಗೆ ಮೊರೆಯಿಟ್ಟ ಬೆಂಗಳೂರಿನ ಪತಿರಾಯ – Bangalore husband complained to Prime Minister office about Harassment Wife beating him Bangalore News


ಅಯ್ಯೋ ಪಾಪ.. ಈ ಗಂಡನ ಪಾಡು ಯಾರಿಗೂ ಬರಬಾರದು. ಈತನನ್ನು 2 ವರ್ಷದಿಂದ ಹೆಂಡತಿ ಹೊಡೆಯುತ್ತಿದ್ದಾಳಂತೆ. ಹೀಗಂತ 2 ವರ್ಷದ ಹಿಂದೆ ಬೆಂಗಳೂರು ಪೊಲೀಸರಿಗೆ ಮತ್ತು ಈಗ ಪ್ರಧಾನಿ ಮೋದಿಗೆ ಆತ ದೂರಿದ್ದಾರೆ.

ಅಯ್ಯೋ ಹೆಂಡತಿ ಹೊಡೀತಾಳೆ! ಕಾಪಾಡಿ ನನ್ನನ್ನು ಎಂದು ಪ್ರಧಾನಿ ಮೋದಿಗೆ ಮೊರೆಯಿಟ್ಟ ಬೆಂಗಳೂರಿನ ಪತಿರಾಯ

ಅಯ್ಯೋ, ನನ್ನ ಹೆಂಡತಿ ಹೊಡೀತಾಳೆ! ಕಾಪಾಡಿ ನನ್ನನ್ನು ಎಂದು ಪ್ರಧಾನಿ ಮೋದಿಗೆ ಮೊರೆಯಿಟ್ಟ ಬೆಂಗಳೂರಿನ ಪತಿರಾಯ ಏನು ಮಾಡಿದ ನೋಡಿ?

ಬೆಂಗಳೂರು: ಪತಿ-ಪತ್ನಿಯರ ನಡುವೆ ಜಗಳ ಸಾಮಾನ್ಯ. ಪತಿ (Husband) ಪತ್ನಿಗೆ (Wife) ಥಳಿಸುವುದು, ಅವಳು ನನ್ನ ಮಾತು ಕೇಳುವುದಿಲ್ಲ ಎಂದು ಗಂಡ ಅಲವತ್ತುಕೊಳ್ಳುವುದು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಇಲ್ಲಿ ಪಾತ್ರಗಳು ಬದಲಾಗಿವೆ. ಹೆಂಡತಿ ಹೊಡೀತಾಳೆ ಸ್ವಾಮಿ. ನನ್ನ ಮಾತನ್ನೇ ಕೇಳುವುದಿಲ್ಲ ಎಂದು ಪತಿರಾಯನೇ ಬೊಬ್ಬಿಡುತ್ತಿದ್ದಾನೆ. ಇಂತಹ ಪ್ರಕರಣಗಳು ಬಹಳಷ್ಟು ಬಾರಿ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮುಂದೆ ಹೋಗುತ್ತದೆ. ಹೆಚ್ಚಿನ ಪ್ರಕರಣಗಳು ಅಲ್ಲಿ ನಿರ್ಣಯವಾಗುತ್ತದೆ. ಅಥವಾ ಒಟ್ಟಿಗೆ ಇರಲು ಭಾವನಾತ್ಮಕ ಸಲಹೆಯೂ ನೀಡುತ್ತಾರೆ. ಆದರೆ.. ಇಲ್ಲೊಂದು ವಿಚಿತ್ರ ನಡೆದಿದೆ. ಪ್ರಕರಣ ಏನು ಎಂದು ತಿಳಿದರೆ ನಿಮ್ಮನ್ನು ನಗಿಸುವುದು ಖಂಡಿತ.

ಇದೊಂದು ರೀತಿ ಹರಾಸ್​ಮೆಂಟ್ ಪ್ರಕರಣ (Harassment). ಆದರೆ ಗಂಡ ಹೆಂಡತಿಗೆ ಕಿರುಕುಳ ನೀಡುತ್ತಾನೆ ಎಂದು ನೀವು ಭಾವಿಸಿದರೆ ಅದು ತಪ್ಪು. ಇಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಪತಿಗೆ ಪತ್ನಿ ಕಿರುಕುಳ ನೀಡಲಾರಂಭಿಸಿದ್ದಾಳೆ ಎಂದು ಸಂತ್ರಸ್ತ ದೂರಿದ್ದಾರೆ. ಮತ್ತು ಆಕೆಯಿಂದ ತನ್ನನ್ನು ರಕ್ಷಿಸಲು, ಮುಕ್ತವಾಗಿಸಲು ಪ್ರಧಾನಿ ಕಚೇರಿಗೆ (PMO) ಟ್ಯಾಗ್​ ಮಾಡಿ, ಪ್ರಧಾನಿ ಮೋದಿಗೆ ದೂರು ನೀಡಿದ್ದಾರೆ.

ತನ್ನ ಹೆಂಡತಿ ತನಗೆ ಕಿರುಕುಳ ನೀಡುತ್ತಿದ್ದಾಳೆ ಎಂಬುದು ಆತನ ದೂರು. ಸಾಮಾಜಿಕ ಮಾಧ್ಯಮ ಟ್ವಿಟ್ಟರ್​ ಮೂಲಕ ಪಿಎಂಒ, ಕಾನೂನು ಸಚಿವ ಕಿರಣ್ ರಿಜುಜು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿ, ಅಲವತ್ತುಕೊಂಡಿದ್ದಾರೆ. ಈ ಮಧ್ಯೆ ಗಂಡನ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು (Bangalore City Police) ಅವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆ ಪೋಸ್ಟ್ ಈಗ ವೈರಲ್ ಆಗಿದೆ.

ಬೆಂಗಳೂರಿನ ಯದುನಂದನ್ ಆಚಾರ್ಯ ಅವರು ತಮ್ಮ ಪತ್ನಿ ವಿರುದ್ಧ ಪಿಎಂಒಗೆ ದೂರು ನೀಡಿದ್ದಾರೆ. ತನ್ನ ಪತ್ನಿ ಪದೇ ಪದೇ ತನಗೆ ಕಿರುಕುಳ, ಹಲ್ಲೆ, ಹಿಂಸೆ ಮಾಡುತ್ತಿದ್ದಾಳೆ ಎಂದು ಟ್ವಿಟ್ಟರ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಆಕೆಯಿಂದ ತನಗೆ ಜೀವ ಬೆದರಿಕೆ ಇದೆ ಎಂದೂ ಆತ ಆತಂಕ ವ್ಯಕ್ತಪಡಿಸಿದ್ದಾರೆ. ತನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

“ಯಾರಾದರೂ ನನಗೆ ಸಹಾಯ ಮಾಡಬಹುದೇ? ನನ್ನ ಹೆಂಡತಿ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದಳು. ಕೈಬೆರಳುಗಳು ಕಟ್ ಆಗಿಬವೆ ನೋಡಿ ಎಂದು ಫೋಟೋ ಸಹಿತ ಹಾಕಿದ್ದಾರೆ. ನೀವು ಹೇಳುತ್ತಿರುವ ನಾರಿ ಶಕ್ತಿ ಇದೇನಾ? ಇದಕ್ಕಾಗಿ ನಾನು ಅವಳ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಬಹುದೇ? ಎಂದು ಯದುನಂದನ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ, ಅಲವತ್ತುಕೊಂಡಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.