ಮೈಸೂರು: ಅರಮನೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ, ಮೈಸೂರು ಅರಸು ಮಂಡಳಿ ಕಾರ್ಯದರ್ಶಿಯಾಗಿದ್ದ ನಂದೀಶ್​ ಅರಸ್​ ಕೊರೊನಾದಿಂದ ಮೃತಪಟ್ಟಿದ್ದಾರೆ.

ಕಳೆದ ಐದು ದಿನಗಳ ಹಿಂದೆ ನಂದೀಶ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ನಂದೀಶ್​ ಅರಸ್​, ಮೈಸೂರಿನ ಹಲವು ಸಂಘಟನೆ ಹಾಗೂ ಪ್ರಗತಿಪರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ರು. ಅದರಲ್ಲೂ ಮೈಸೂರು ಅರಮನೆ ಉಳಿಸೋ ವಿಚಾರದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

The post ಅರಮನೆ ಉಳಿಸಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಂದೀಶ್ ಅರಸ್​ ಕೊರೊನಾಗೆ ಬಲಿ appeared first on News First Kannada.

Source: newsfirstlive.com

Source link