ಅರಳಿಮರ ಎಲೆಯ ಮೇಲೆ ಪುನೀತ್ ರಾಜಕುಮಾರ್ ಚಿತ್ರ ಬರೆದು ತನ್ನ ಪ್ರೀತಿ ಮತ್ತು ಅಭಿಮಾನ ವ್ಯಕ್ತಪಡಿಸಿದ ಕಲಾವಿದ | This leaf artist expresses his love for Puneeth Rajkumar by drawing his picture on peepal leaf


ಯುವಕರ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಒಂದು ವಾರ ಮೇಲಾಯ್ತು. ಅಭಿಮಾನಿಗಳು ಅವರ ಸಮಾಧಿಗೆ ಹೋಗಿ ನಮನ ಸಲ್ಲಿಸುವುದು ಮುಂದುವರಿದಿದೆ. ಇತ್ತ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಮನೆಗೆ ಸೆಲಿಬ್ರಿಟಿಗಳು ಭೇಟಿ ನೀಡಿ ಅಪ್ಪು ಅವರ ಹೆಂಡತಿ ಮಕ್ಕಳಿಗೆ ಸಾಂತ್ವನ ಹೇಳುತ್ತಿದ್ದಾರೆ. ಅಪ್ಪುಗಿದ್ದ ಅಭಿಮಾನಿಗಳು ಅಪಾರ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರಿಗೂ ಅವರು ನೆಚ್ಚಿನ ಹಿರೋ. ಮಕ್ಕಳಿಗೆ ಅದ್ಹೇಗೆ ಅಪ್ಪು ಎಂದರೆ ಅಷ್ಟೊಂದು ಪ್ರೀತಿ ಅನ್ನೋದು ಅರ್ಥವಾಗದ ವಿಷಯ. ಆಫ್ ಕೋರ್ಸ್ ಅವರು ಸದಭಿರುಚಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದರು ಮತ್ತು ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಅವರ ಚಿತ್ರಗಳನ್ನು ನೋಡಬಹುದು. ಇದನ್ನೆಲ್ಲ ಯಾಕೆ ಹೇಳಬೇಕಾಗಿದೆ ಅಂದರೆ ಅಪ್ಪು ಅಭಿಮಾನಿಗಳು ಅವರ ಮೇಲಿದ್ದ ಅಭಿಮಾನ ಮತ್ತು ಪ್ರೀತಿಯನ್ನು ಬೇರೆ ಬೇರೆ ಬಗೆಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿಗೆ ಕಲಾವಿದರೊಬ್ಬರು ಕೆಲವೇ ನಿಮಿಷಗಳಲ್ಲಿ ಪುನೀತ್ ರಾಜಕುಮಾರ ಅವರ ಚಿತ್ರ ಬಿಡಿಸಿದ್ದನ್ನು ನಿಮಗೆ ತೋರಿಸಿದ್ದೇವೆ. ಈ ಬಾರಿ ಮತ್ತೊಬ್ಬ ವಿಶಿಷ್ಟ ಕಲಾವಿದನ ಪ್ರತಿಭೆಯನ್ನು ನಿಮಗೆ ತೋರಿಸುತ್ತಿದ್ದೇವೆ. ಇವರು ಸಹ ಪುನೀತ್ ಅವರ ಅಭಿಮಾನಿ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ?

ಓಕೆ, ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವ ಹಾಗೆ ಈ ಅನಾಮಧೇಯ ಕಲಾವಿದ ಅರಳಿಮರದ ಎಲೆಯ ಮೇಲೆ ಅಪ್ಪು ಚಿತ್ರ ಬರೆದಿದ್ದಾರೆ. ಲೀಫ್ ಆರ್ಟ್ ನಮ್ಮ ದೇಶದಲ್ಲಿ ಹೆಚ್ಚು ಜನಪ್ರಿಯವಲ್ಲದಿದ್ದರೂ ಈ ಕಲೆಯಲ್ಲಿ ತೊಡಗಿಸಿಕೊಂಡಿರುವ ಹಲವಾರು ಕಲಾವಿದರು ನಮಗೆ ಕಾಣಸಿಗುತ್ತಾರೆ. ಎಲೆಗಳ ಮೇಲೆ ಚಿತ್ರ ಬರೆಯಲು ತಾಳ್ಮೆಯೊಂದಿಗೆ ಶ್ರದ್ಧೆಯೂ ಬೇಕು. ಈ ಕಲಾವಿದ ಅಪ್ಪು ಮೇಲಿನ ತನ್ನ ಪ್ರೀತಿಯನ್ನು ಹೀಗೆ ತೋರಿದ್ದಾರೆ.

ಇದನ್ನೂ ಓದಿ:   Digital Payments: ಡಿಜಿಟಲ್ ಪಾವತಿ ಜನಪ್ರಿಯತೆಗೆ ಆಸಕ್ತಿಕರವಾದ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

TV9 Kannada


Leave a Reply

Your email address will not be published. Required fields are marked *