ಬೆಂಗಳೂರು: ಅರವಿಂದ ಬೆಲ್ಲದ್ ಗೆ ಜೈಲಿನಿಂದ ಯುವರಾಜ ಸ್ವಾಮಿ ಕರೆ ವಿಚಾರವಾಗ ನಗರ ಪೊಲೀಸ್ ಆಯಕ್ತ ಕಮಲ್ ಪಂತ್​ ಕರೆ ಬಂದಿರೋ ಬಗ್ಗೆ ತನಿಖೆ ಮಾಡಲಾಗುತ್ತೆ ಎಂದಿದ್ದಾರೆ.

ಡಿಜಿ, ಐಜಿಪಿ ಕಚೇರಿಯಿಂದ ನಮಗೆ ಪತ್ರ ಬಂದಿದೆ.. ತನಿಖೆ ನಡೆಸುವಂತೆ ಸೂಚನೆ ಬಂದಿದೆ.. ಪತ್ರದ ಸೂಚನೆ ಮೇಲೆ ಕರೆ ಬಂದಿರೋ ಬಗ್ಗೆ ತನಿಖೆ ಮಾಡಲಾಗುತ್ತೆ.

ಅರವಿಂದ್ ಬೆಲ್ಲದ್, ಶಾಸಕ

ನಿನ್ನೆ ಜೈಲಿನಿಂದ ಸ್ವಾಮಿ ಯುವರಾಜ ಕರೆ‌ಮಾಡಿದ್ದ ಬಗ್ಗೆ ಹು.ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಆರೋಪ ಮಾಡಿದ್ದರು. ತನ್ನ ಫೋನ್ ಟ್ಯಾಪಿಂಗ್ ಆಗಿರೋ ಬಗ್ಗೆಯೂ ಬೆಲ್ಲದ್ ಅನುಮಾನ ವ್ಯಕ್ತಪಡಿಸಿದ್ದರು. ಜೈಲಿನಿಂದ ಕರೆ ಬಂದಿರೋ ಬಗ್ಗೆ ಸ್ಪೀಕರ್, ಡಿಜಿ, ಐಜಿಪಿ, ಗೃಹಸಚಿವರಿಗೆ ಪತ್ರವನ್ನೂ ಬರೆದಿದ್ದರು ಎನ್ನಲಾಗಿದೆ.

The post ಅರವಿಂದ್​ ಬೆಲ್ಲದ್​ಗೆ ಸ್ವಾಮಿ ಫೋನ್; ಪೊಲೀಸ್​​ ಕಮಿಷನರ್ ಕಮಲ್ ಪಂತ್ ಹೇಳಿದ್ದೇನು? appeared first on News First Kannada.

Source: newsfirstlive.com

Source link