ಅರವಿಂದ್‌ ಹೀಗೆಲ್ಲಾ ಕೀಟಲೆ ಮಾಡ್ತಾರೆ ಅಂತಾ ಗೊತ್ತಿರಲಿಲ್ಲ!

ಅರವಿಂದ್‌ ಹೀಗೆಲ್ಲಾ ಕೀಟಲೆ ಮಾಡ್ತಾರೆ ಅಂತಾ ಗೊತ್ತಿರಲಿಲ್ಲ!

ಮನೆಯಿಂದ ಹೊರಬಂದ್ಮೇಲೆ ಮಾವಿನ ಹಣ್ಣು ಬೇಕು ಬೇಕು ಅಂತಾ ಹಠ ಮಾಡ್ತಿದ್ದ ಶುಭಾ ಪೂಂಜಾ ಹೊರಬಂದ್ಮೇಲೆ ಸಿಕ್ಕಾಪಟ್ಟೆ ತಿಂದ್ಬಿಟ್ಟಿದ್ದಾರೆ. ಅದಕ್ಕೆ ಏನೋ ಈಗ ಮಾವಿನ ಹಣ್ಣು ಬೇಕು ಅಂತಾನೇ ಹೇಳ್ತಿಲ್ಲ. ಅದೊಂಥರಾ ಒಳ್ಳೇದೇ. ಬಿಗ್‌ಬಾಸ್‌ಗೆ ಮಾವಿನ ಹಣ್ಣು ತರಿಸೋ ಪ್ರಮೇಯವೇನೂ ಇಲ್ಲ. ಮಾವಿನ ಹಣ್ಣಿನ ಮಹಿಮೆಯೋ ಏನೋ.. ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ಢಮ್ ಢಮಾರ್ ಅಂತಾ ಮಾತನಾಡ್ತಿದ್ದಾರೆ.

ಚಂದ್ರಚೂಡ್‌ಗೆ ಮಾತಾನಾಡೋ ಟೈಮ್‌ನಲ್ಲಿ ಇಂಟರ್‌ವ್ಯೂ ವಿಚಾರಗಳ ಬಗ್ಗೆ ರೀಕಾಲ್ ಮಾಡ್ತಿದ್ರು.
ನೀವು ಹಾಗೂ ಪ್ರಶಾಂತ್ ಯಾಕೇ ಹಾಗೆ ಮಾತನಾಡಿದ್ದೀರಿ? ಮನೆಯಲ್ಲಿ ನಡೆದಿದ್ದು ಇಲ್ಲಿಗೆ ಬಿಡಬೇಕು. ಹೊರಗಡೆ ನಾವೆಲ್ಲಾ ಫ್ರೆಂಡ್ಸ್​ ಅಂತಾ ಹೇಳಿದ್ರು. ಶುಭಾ ಮಾತಿಗೆ ಚಕ್ರವರ್ತಿ ನಾನು ಹಾಗೆ ಯಾರ ಬಗ್ಗೆ ಲಘುವಾಗಿ ಮಾತನಾಡಿಲ್ಲ ಅಂತಾ ಸ್ಪಷ್ಟನೆ ಕೊಟ್ರು.

ಇನ್ನೂ, ಚಾಲೆಂಜರ್ಸ್​ ಹಾಗೂ ಲೀಡರ್ಸ್​ ತಂಡದ ತಲಾ ಮೂವರು ಕಂಟೆಸ್ಟೆಂಟ್​ಗಳು ಡೈನಿಂಗ್​ ಏರಿಯಾದಲ್ಲಿ ಇಟ್ಟಿದ್ದಾ ಚೇರ್​ ಮೇಲೆ ಕುಳಿತ್ತಿದ್ರು. ಮೊದಲು ವೈಷ್ಣವಿ, ನಂತರ ನಿಧಿ ಮಿಡ್‌ನೈಟ್‌ ಪ್ರಿಯಾಂಕಾ ತಿಮ್ಮೇಶ್‌ ಔಟ್ ಆದರು. ಕೊನೆಗೆ ಉಳಿದಿರೋದು ಲ್ಯಾಗ್ ಮಂಜು ಅಂಡ್ ಪ್ರಶಾಂತ್. ಈ ಇವರಿಬ್ಬರ ಪೈಕಿ ಯಾರು ಗೆಲ್ಲುತ್ತಾರೆ ಅನ್ನೋದು ಇವತ್ತು ಗೊತ್ತಾಗ್ಲಿದೆ.

ಅರವಿಂದ್ ಕೆ.ಪಿ. ಕೀಟಲೆ ಮಾಡೋದನ್ನ ಯಾವಾಗ ಕಲಿತರೋ ಏನೋ.. ಎಲ್ಲರೂ ಮಲಗಿರುವಾಗ ಡಿಸ್ಟರ್ಬ್ ಮಾಡೋಣ ಅಂತಾ ಡಿಸೈಡ್ ಮಾಡಿದ್ರು. ಅವ್ರು ವೈಷ್ಣವಿ ಬೆಡ್‌ ಹತ್ತಿರ ಹೋಗಿ ಅವ್ರಿಗೆ ಕೀಟಲೆ ಮಾಡಿದರು. ಅದು ಅವ್ರಿಗೆ ಗೊತ್ತಾಯ್ತು. ಆಮೇಲೂ ಸುಮ್ಮನಾಗ್ಲಿಲ್ಲ. ಸೀದಾ ಹೋಗಿ ಮಲಗಿದ್ದ ದಿವ್ಯಾ ಉರುಡುಗ ಕೀಟಲೆ ಮಾಡಿದರು. ಪಾಪಾ ಗಾಢ ನಿದ್ರೆಯಲ್ಲಿದ್ದ ದಿವ್ಯಾ ನಿದ್ರಾಭಂಗವಾಯ್ತು. ಹಾಗಂತಾ ದಿವ್ಯಾ ಬೇಜಾರ್ ಮಾಡಿಕೊಳ್ಳಿಲ್ಲ. ಅವಿ ಯಾಕೆ ಇಷ್ಟೊಂದು ಕೀಟಲೆ ಕಲಿತುಬಿಟ್ಟಿದ್ದಾರೆ ಅಂತಾ ಒಳಗೊಳಗೆ ಖುಷಿಪಟ್ಟುಕೊಂಡು ಯೋಚ್ನೆ ಮಾಡ್ತಿದ್ರು.

The post ಅರವಿಂದ್‌ ಹೀಗೆಲ್ಲಾ ಕೀಟಲೆ ಮಾಡ್ತಾರೆ ಅಂತಾ ಗೊತ್ತಿರಲಿಲ್ಲ! appeared first on News First Kannada.

Source: newsfirstlive.com

Source link