ಬೆಂಗಳೂರು: ಸಂಪುಟ ಸಭೆಯಲ್ಲಿ ಇಂದು ಅರಣ್ಯ ಸಚಿವ ಅರವಿಂದ್ ಲಿಂಬಾವಳಿ ಮೇಲೆ ಸಿಎಂ ಬಿ.ಎಸ್​. ಯಡಿಯೂರಪ್ಪ ಏಕಾಏಕಿ ಗರಂ ಆಗಿದ್ದರಂತೆ. ಸಾರ್ವಜನಿಕ ವರ್ಗಾವಣೆಯಲ್ಲಿ ಸಚಿವರಿಗೆ ಅವಕಾಶ ಕೊಡಿ ಎಂದು ಲಿಂಬಾವಳಿ ಪ್ರಸ್ತಾಪಿಸಿದ್ದಕ್ಕೆ ಸಿಎಂ ಏಕಾಏಕಿ ಕೋಪಗೊಂಡರು ಎನ್ನಲಾಗಿದೆ.

ಸಾರ್ವಜನಿಕ ವರ್ಗಾವಣೆಯಲ್ಲಿ ಸಚಿವರಿಗೆ ಅವಕಾಶ ಕೊಡಿ ಎನ್ನುತ್ತಲೇ.. ಅದಕ್ಕೆಲ್ಲಾ ಅವಕಾಶವಿಲ್ಲ.. ಎಲ್ಲಾ ತನ್ನಿ ನಾವೇ ಮಾಡ್ತೇವೆ ಎಂದು ಸಿಎಂ ಹೇಳಿದ್ದಾರಂತೆ.. ಆಗ ಕೆಲ ಸಚಿವರು ಕೂಡ ನಮಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಏಪ್ರಿಲ್-ಮೇ ನಲ್ಲಿ ಸಾರ್ವಜನಿಕ ವರ್ಗಾವಣೆ ನಡೆಯಬೇಕಿತ್ತು. ತಮಗೆ ಅಧಿಕಾರಿಗಳ ವರ್ಗಾವಣೆ ಮಾಡಲು ಅವಕಾಶ ಕೊಡಿ ಎಂದು ಲಿಂಬಾವಳಿ ಹೇಳಿದ್ದೇ ಬಿಎಸ್​ವೈ ಕೋಪಕ್ಕೆ ಕಾರಣ ಎನ್ನಲಾಗಿದೆ.

The post ಅರವಿಂದ್ ಲಿಂಬಾವಳಿ ವಿರುದ್ಧ ಗರಂ ಆದ ಬಿಎಸ್​ವೈ: ಸಂಪುಟ ಸಭೆಯಲ್ಲಿ ನಡೆದಿದ್ದೇನು..? appeared first on News First Kannada.

Source: newsfirstlive.com

Source link