ಅರಸೀಕೆರೆಯಲ್ಲಿ ಬಿಜೆಪಿಯ 2 ಗುಂಪುಗಳ ನಡುವೆ ಮಾರಾಮಾರಿ; ಅಶಾಂತಿಗೆ ಎನ್​ಆರ್ ಸಂತೋಷ್ ಕಾರಣ ಎಂದ ವಿಜಿಕುಮಾರ್ | BJP Members Vijikumar NR Santosh Kumar fight conflict Karnataka Politics


ಅರಸೀಕೆರೆಯಲ್ಲಿ ಬಿಜೆಪಿಯ 2 ಗುಂಪುಗಳ ನಡುವೆ ಮಾರಾಮಾರಿ; ಅಶಾಂತಿಗೆ ಎನ್​ಆರ್ ಸಂತೋಷ್ ಕಾರಣ ಎಂದ ವಿಜಿಕುಮಾರ್

ಬಿಜೆಪಿ ಧ್ವಜ (ಪ್ರಾತಿನಿಧಿಕ ಚಿತ್ರ)

ಹಾಸನ: ಅರಸೀಕೆರೆ ತಾಲೂಕಿನಲ್ಲಿ ಅಶಾಂತಿಗೆ ಎನ್.ಆರ್. ಸಂತೋಷ್​ ಕಾರಣ ಎಂದು ಅರಸೀಕೆರೆ ತಾಲೂಕು ಬಿಜೆಪಿ ಉಪಾಧ್ಯಕ್ಷ ವಿಜಿಕುಮಾರ್​ ಆರೋಪ ಮಾಡಿದ್ದಾರೆ. ಅರಸೀಕೆರೆಯಲ್ಲಿ ಬಿಜೆಪಿಯ 2 ಗುಂಪುಗಳ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿ ಮಾರಾಮಾರಿಯಲ್ಲಿ ಗಾಯಗೊಂಡವರಿಗೆ ಹಿಮ್ಸ್​ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ವೇಳೆ ಸಂತೋಷ್​ ವಿರುದ್ಧ ವಿಜಿಕುಮಾರ್​ ವಾಗ್ದಾಳಿ ನಡೆಸಿದ್ದಾರೆ. ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜಕೀಯ ಕಾರ್ಯದರ್ಶಿ ಆಗಿದ್ದ ಎನ್​.ಆರ್ ಸಂತೋಷ್ ಅಶಾಂತಿಗೆ ಕಾರಣ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.

ಅರಸೀಕೆರೆಯಲ್ಲಿ ಪ್ರಚಾರ ಸಭೆಯಲ್ಲಿ ಮಾರಾಮಾರಿ ನಡೆದಿತ್ತು. ವಿಜಿಕುಮಾರ್, ಸಂತೋಷ್ ಬೆಂಬಲಿಗರ ನಡುವೆ ಮಾರಾಮಾರಿ ನಡೆಸಿದ್ದಾರೆ. ಸಂತೋಷ್​ನದು ಏನೂ ನಡೆಯುತ್ತಿಲ್ಲವೆಂದು ಹಲ್ಲೆ ಮಾಡಿಸಿದ್ದಾರೆ. ಎಲ್ಲೂ ನೆಲೆಯಿಲ್ಲವೆಂದು ಇಲ್ಲಿಗೆ ಬಂದಿದ್ದಾನೆ ಸಂತೋಷ್. ಅವರಿಗೆ ನಾಯಕರು ಬೆಲೆ ಕೊಡದಿದ್ದಾಗ ಹಲ್ಲೆ ಮಾಡಿಸಿದ್ದಾರೆ. ಬಿಜೆಪಿಯ 150 ಜನರ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿಸಿದ್ದಾರೆ. ಜಾತಿಗಳ ನಡುವೆ ಹೊಡೆದಾಡಿಸುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನು ಖಂಡಿಸಲು ಹೋದವರ ಮೇಲೆ ದಾಳಿ ಮಾಡಿಸಿದ್ದಾರೆ. ಇಂದು ನಮ್ಮ ಶಕ್ತಿ ಕೇಂದ್ರದ ಅಧ್ಯಕ್ಷರ ಮೇಲೆ ಹಲ್ಲೆಯಾಗಿದೆ. ನಮ್ಮ ಕಾರ್ಯಕರ್ತರು ಎನ್.ಆರ್.ಸಂತೋಷ್​ನನ್ನು ಒಪ್ಪುತ್ತಿಲ್ಲ. ಹಾಗಾಗಿ ಜನರನ್ನು ಬಿಟ್ಟು ಸಂತೋಷ್ ಹಲ್ಲೆ ಮಾಡಿಸಿದ್ದಾರೆ. ನಗರಸಭೆಯ ಅನರ್ಹ ಜೆಡಿಎಸ್​ ಸದಸ್ಯರು ಹಲ್ಲೆಮಾಡಿದ್ದಾರೆ. ಇತ್ತೀಚೆಗೆ ಜೆಡಿಎಸ್​ ತೊರೆದು ಬಿಜೆಪಿ ಸೇರಿದ್ದವರಿಂದ ಹಲ್ಲೆ ಮಾಡಲಾಗಿದೆ. ಸಂತೋಷ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. ಹಾಸನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಜಿಕುಮಾರ್​ ಹೇಳಿಕೆ ನೀಡಿದ್ದಾರೆ.

ಪರಿಷತ್​​ ಚುನಾವಣಾ ಪ್ರಚಾರ ಸಭೆಯಲ್ಲಿ ಮಾರಾಮಾರಿ ನಡೆದಿದೆ. ಬಿಜೆಪಿ ಪ್ರಚಾರ ಸಭೆಯಲ್ಲಿ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಈ ಬಗ್ಗೆ, ಟಿವಿ9ಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳದಲ್ಲಿ ನಾನು ಇರುವ ವರೆಗೂ ಯಾವುದೇ ಗಲಾಟೆ ನಡೆದಿಲ್ಲ. ನಾನು ತೆರಳಿದ ಬಳಿಕ ಕಾರ್ಯಕರ್ತರು ಗಲಾಟೆ ಆಗಿದೆ. ನಾವು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದು ಟಿವಿ9ಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಪರಿಷತ್​​ ಚುನಾವಣಾ ಪ್ರಚಾರ ಸಭೆಯಲ್ಲಿ ಮಾರಾಮಾರಿ ನಡೆದಿದೆ. ಬಿಜೆಪಿ ಪ್ರಚಾರ ಸಭೆಯಲ್ಲಿ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ವೇದಿಕೆಯಲ್ಲಿ ಭಾಷಣ ಮಾಡುವ ವಿಚಾರಕ್ಕೆ ಗಲಾಟೆ ಉಂಟಾಗಿದೆ. ಹಾಸನ ಜಿಲ್ಲೆ ಅರಸೀಕೆರೆ ನಗರದಲ್ಲಿ ಘಟನೆ ನಡೆದಿದೆ. ಸಭೆ ಬಳಿಕ ಪರಸ್ಪರ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ರಂಗೇರಿದೆ ವಿಜಯಪುರ- ಬಾಗಲಕೋಟೆ ಪರಿಷತ್ ಚುನಾವಣೆ ಅಖಾಡ; ಕಾಂಗ್ರೆಸ್​ಗೆ ಬಂಡಾಯದ ಬಿಸಿ, ಬಿಜೆಪಿಗೆ ಗೆಲ್ಲೋ ತವಕ

ಇದನ್ನೂ ಓದಿ: ಎ ಮಂಜು ವಿರುದ್ಧ ಬಿಜೆಪಿ ಶಿಸ್ತು ಕ್ರಮ: ನನಗೆ ನೋಟಿಸ್ ಕೊಟ್ಟವನು ಅವಿವೇಕಿ; ವೇದಿಕೆ ಮೇಲೆಯೇ ಕಣ್ಣೀರಿಟ್ಟ ಮಾಜಿ ಸಚಿವ

TV9 Kannada


Leave a Reply

Your email address will not be published. Required fields are marked *