ಅರುಣಾಚಲ ಪ್ರದೇಶದ ಎಲ್​​ಎಸಿ ಬಳಿ ಭಾರತ-ಚೀನಾ ಸೈನಿಕರ ಜಟಾಪಟಿ | Indian and Chinese troops engaged in another face off last week in Line of Actual Control of Arunachal Pradesh.

ಅರುಣಾಚಲ ಪ್ರದೇಶದ ಎಲ್​​ಎಸಿ ಬಳಿ ಭಾರತ-ಚೀನಾ ಸೈನಿಕರ ಜಟಾಪಟಿ

ಅರುಣಾಚಲ ಪ್ರದೇಶದ ಬಳಿ ಭಾರತ-ಚೀನಾ ಸೈನಿಕರ ಸಂಘರ್ಷ

ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆ (LAC)ಯ ಬಳಿ ಕಳೆದವಾರ ಮತ್ತೆ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿದೆ. ಪೀಪಲ್ಸ್​ ಲಿಬರೇಶನ್​ ಆರ್ಮಿಯ ಸುಮಾರು 200ಸೈನಿಕರನ್ನು ಭಾರತ ಸೇನೆ ಗಡಿಯ ಬಳಿ ತಡೆಹಿಡಿದಿದೆ ಎಂದು ಇದೀಗ ವರದಿಯಾಗಿದೆ. ಭಾರತ-ಚೀನಾ ಗಡಿಯ ಬಳಿ ಎರಡೂ ದೇಶಗಳ ಸೈನಿಕರು ಎಂದಿನಂತೆ ಗಸ್ತು ತಿರುಗುತ್ತಿದ್ದ ವೇಳೆ ಈ ಸಣ್ಣಮಟ್ಟದ ಸಂಘರ್ಷ ಉಂಟಾಗಿದೆ. ಚೀನಾ ಸೈನಿಕರು ಗಡಿಗೆ ತುಂಬ ಹತ್ತಿರ ಬಂದಿದ್ದೇ ಇದಕ್ಕೆ ಕಾರಣ ಎಂದೂ ಹೇಳಲಾಗಿದೆ.  ಬಳಿಕ ಸೇನೆಗಳ ಕಮಾಂಡರ್​ಗಳು ಮಧ್ಯಪ್ರವೇಶಿಸಿ, ಸಮಸ್ಯೆ ಬಗೆಹರಿಸಿದ್ದಾರೆ. 

ಕೆಲ ತಾಸುಗಳ ಕಾಲ ಎರಡೂ ದೇಶಗಳ ಸೈನಿಕರ ನಡುವೆ ಜಟಾಪಟಿ ನಡೆದಿತ್ತು. ಬಳಿಕ ಶಿಷ್ಟಾಚಾರದ ಬಗ್ಗೆ ಅವರಿಗೆ ತಿಳಿಸಿ ಹೇಳಿ ಸಮಾಧಾನ ಮಾಡಲಾಗಿದೆ. ಯಾವುದೇ ದೇಶದ ಯೋಧರಿಗೂ ಗಾಯವಾಗಿಲ್ಲ ಎಂದು ಸೇನಾಮೂಲಗಳಿಂದ ಮಾಹಿತಿ ಸಿಕ್ಕಿದೆ.  ಚೀನಾದ ಪ್ರಚೋದನಾಕಾರಿ ವರ್ತನೆ ಮತ್ತು ಏಕಪಕ್ಷೀಯವಾಗಿ ತೆಗೆದುಕೊಂಡ ಕ್ರಮಗಳಿಂದಾಗಿ ಈ ಪ್ರದೇಶದಲ್ಲಿ ಶಾಂತಿ ಕದಡಿತು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ ತಿಳಿಸಿದ್ದಾರೆ.  ಹಾಗೇ, ಚೀನಾ ದ್ವಿಪಕ್ಷೀಯ ಒಪ್ಪಂದಗಳ ನಿಯಮಗಳನ್ನು, ಶಿಷ್ಟಾಚಾರಗಳನ್ನು ಸಂಪೂರ್ಣವಾಗಿ ಅನುಸರಿಸುವ ಮೂಲಕ ಪೂರ್ವ ಲಡಾಖ್​ನಲ್ಲಿ ಈಗಿರುವ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಎಂಬುದು ನಮ್ಮ ನಿರೀಕ್ಷೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಅದೃಷ್ಟ ಖುಲಾಯಿಸುತ್ತೆ ಅಂತಾ ಕೃಷ್ಣಯ್ಯ ಶೆಟ್ಟಿ ವಾಸವಿದ್ದ ಬಾಡಿಗೆ ಮನೆಯಲ್ಲಿ ಬಿಎಸ್‌ವೈ ಆಪ್ತ ಉಮೇಶ್ ವಾಸ: ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ!

ಶವ ಸಂಸ್ಕಾರಕ್ಕೆ ಜಾಗ ಇಲ್ಲ; ಹೂತಿದ್ದ ಮಹಿಳೆ ಶವ ಹೊರತೆಗೆದು ವೃದ್ಧನ ಅಂತ್ಯಸಂಸ್ಕಾರ ಮಾಡಿದ ಗ್ರಾಮಸ್ಥರು

 

TV9 Kannada

Leave a comment

Your email address will not be published. Required fields are marked *