ಅರುಣಾಚಲ ಸಮೀಪದಲ್ಲೇ ಚೀನಾ ಬುಲೆಟ್​​ ಟ್ರೈನ್​​.. ಡ್ರ್ಯಾಗನ್​​ ರಾಷ್ಟ್ರದ ಮತ್ತೊಂದು ತಂತ್ರ!

ಅರುಣಾಚಲ ಸಮೀಪದಲ್ಲೇ ಚೀನಾ ಬುಲೆಟ್​​ ಟ್ರೈನ್​​.. ಡ್ರ್ಯಾಗನ್​​ ರಾಷ್ಟ್ರದ ಮತ್ತೊಂದು ತಂತ್ರ!

ಭಾರತದೊಂದಿಗೆ ಗಡಿ ತಗಾದೆಯನ್ನು ಜೀವಂತಾಗಿಸುವ ಪ್ರಯತ್ನದಲ್ಲಿರುವ ಚೀನಾ ಈಗ ಟಿಬೆಟ್​​ನಲ್ಲಿ  ಇನ್ನೊಂದು ರಣ ತಂತ್ರ ರೂಪಿಸಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಪೂರ್ವ ಲಡಾಖ್​​ನಲ್ಲಿ ಸೈನ್ಯವನ್ನು ಮುನ್ನುಗಿಸಿ ಬೆನ್ನಿಗೆ ಚೂರಿ ಹಾಕಿದ್ದ ಚೀನಾ, ಸದ್ಯ ಸೈನ್ಯವನ್ನು ವೇಗವಾಗಿ ಗಡಿ ಪ್ರದೇಶಗಳಿಗೆ ತೆರಳುವಂತೆ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಅರುಣಾಚಲ ಪ್ರದೇಶಕ್ಕೆ ಸಮೀಪವಿರುವ ಟಿಬೆಟ್​​ ಭೂ-ಪ್ರದೇಶದಲ್ಲಿ ವಿದ್ಯುದ್ದೀಕೃತ ಬುಲೆಟ್​ ಟ್ರೈನ್​​ಗಳನ್ನು ಪ್ರಾರಂಭಿಸಿದೆ. ಇದರಿಂದ ಸೇನೆಯನ್ನು ತ್ವರಿತವಾಗಿ ಗಡಿ ಪ್ರದೇಶಕ್ಕೆ ಸಾಗಿಸಲು ಸಾಧ್ಯವಾಗಲಿದೆ.

ಟಿಬೆಟ್​​​ ರಾಜಧಾನಿ ಹಸಾದಿಂದ ನಿಯಿಂಗ್ಚಿ ಪ್ರದೇಶಕ್ಕೆ ಬುಲೆಟ್​​ ಟ್ರೈನ್​ ಸೇವಗಳನ್ನು ಆರಂಭ ಮಾಡಿದ್ದು, ಸುಮಾರು 435.5 ಕಿಮೀ ಉದ್ದದ ಹೈಸ್ಪೀಡ್​ ರೈಲ್ವೆ ಟ್ರ್ಯಾಕ್ ನಿರ್ಮಾಣ ಮಾಡಿದೆ. ಈ ಪ್ರದೇಶದಲ್ಲಿ ಚೀನಾ ನಿರ್ಮಿಸುತ್ತಿರುವ ಎರಡನೇ ರೈಲ್ವೆ ಲೈನ್ ಇದಾಗಿದೆ. ಸದ್ಯ ಬುಲೆಟ್​ ಟ್ರೈನ್​ ಸೇವೆ ಆರಂಭ ಮಾಡಿರುವ ಕಾರಣ ಚೆಂಗ್ಡೂ ನಿಂದ ಲಾಸಾಗೆ 13 ಗಂಟೆಗಳಲ್ಲಿ ಪ್ರಯಾಣ ಮಾಡಬಹುದು. ಈ ಹಿಂದೆ ಇದಕ್ಕೆ 48 ಗಂಟೆಗಳು ಅಗತ್ಯವಿತ್ತು ಮಾಧ್ಯಮಗಳು ವರದಿ ಮಾಡಿದೆ.

ಈಗಾಗಲೇ ಚೀನಾ, ಭಾರತದ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್​ ಭಾಗ ಎಂದು ವಾದ ಮಾಡುತ್ತಿದೆ. ಆದ್ದರಿಂದಲೇ ಈ ಭಾಗದಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ. ಈ ಹಿಂದೆಯೂ ಕೂಡ ಚೀನಾ ಅರುಣಾಚಲ ಪ್ರದೇಶದ ಸಮೀಪ ಗ್ರಾಮವೊಂದನ್ನ ನಿರ್ಮಾಣ ಮಾಡಿತ್ತು. ಆದರೆ ಈ ಗ್ರಾಮವನ್ನು ತಮ್ಮ ಪ್ರದೇಶದಲ್ಲೇ ನಿರ್ಮಾಣ ಮಾಡಿಕೊಂಡಿರುವುದಾಗಿ ಚೀನಾ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿತ್ತು.

The post ಅರುಣಾಚಲ ಸಮೀಪದಲ್ಲೇ ಚೀನಾ ಬುಲೆಟ್​​ ಟ್ರೈನ್​​.. ಡ್ರ್ಯಾಗನ್​​ ರಾಷ್ಟ್ರದ ಮತ್ತೊಂದು ತಂತ್ರ! appeared first on News First Kannada.

Source: newsfirstlive.com

Source link