– ಸಿನಿಮಾದಲ್ಲಿ ನಟಿಸಲು ಚಾನ್ಸ್ ಕೊಡುತ್ತೇನೆ ಎಂದು ಪರಿಚಯ
-ಫೇಸ್‍ಬುಕ್‍ನಲ್ಲಿ ನಂದಿನಿ ಹೆಸರಿನ ಮೂಲಕವಾಗಿ ಮಹಿಳೆ ಪರಿಚಯ

ಬೆಂಗಳೂರು: 25 ಕೋಟಿ ಹಗರಣದಲ್ಲಿ ಸಿಲುಕಿಕೊಂಡಿರುವ ಮಹಿಳೆ ಅರುಣಾ ಕುಮಾರಿ ವಂಚಕಿ. ಆಕೆಯಿಂದ ಈ ಹಿಂದೆ ಮೋಸ ಹೋಗಿದ್ದೆ ಎಂದು ಉದ್ಯಮಿ ನಾಗವರ್ಧನ್ ಹೇಳಿದ್ದಾರೆ.

ಪ್ರೆಸ್‍ಕ್ಲಬ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಉಮಾಪತಿಗೆ ಮಹಿಳೆ ಫ್ರಾಡ್ ಮಾಡಿದ್ದಾರೆ. ಈ ಮಹಿಳೆ ತುಂಬಾ ಫ್ರಾಡ್. 2015 ಸೆಪ್ಟಂಬರ್‍ನಲ್ಲಿ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದರು. ನಮಗೆ ಮೊದಲು ನಂದಿತಾ ಎನ್ನುವ ಹೆಸರಿನ ಮೂಲಕವಾಗಿ ಪರಿಚಯವಾಗಿದ್ದಳು. ಆದರೆ ದರ್ಶನ್ ಸರ್ ಪ್ರಕರಣದಲ್ಲಿ, ಹೆಸರು ಬದಲಾವಣೆಯಾಗಿದೆ. ಸಿನಿಮಾದಲ್ಲಿ ಆಫರ್ ಕೊಡುತ್ತೇನೆ, ತಂದೆ ನಂದಿನಿ ಡೈರಿಯಲ್ಲಿ ಕೆಲಸ ಮಾಡ್ತಾರೆ ಎಂದು ಮಹಿಳೆ ನನ್ನ ಬಳಿ ಹೇಳಿಕೊಂಡಿದ್ದರು ಎಂದು ತಿಳಿಸಿದರು.

ಸಿನಿಮಾನಲ್ಲಿ ಚಾನ್ಸ್ ಕೊಡಿಸ್ತೀನಿ ಅಂತಾ ಆಫರ್ ಕೊಟ್ಟಿದ್ದರು. ನಂತರ ನಿಮ್ಮನ್ನೇ ಹೀರೋ ಮಾಡುತ್ತೇನೆ ಎಂದು ಹೇಳಿದ್ದಳು. ನಂತರ ಕನಕಪುರ ರಸ್ತೆಯಲ್ಲಿ ಪ್ರಾಪರ್ಟಿ ಇದೆ. 10-12 ಕೋಟಿ ಕನ್‍ಸ್ಟ್ರಕ್ಷನ್ ಪ್ರಾಜೆಕ್ಟ್ ಕೊಡಿಸ್ತೇನೆ ಎಂದು ಹೇಳಿದ್ದರು. ಆಮೇಲೆ ಕನ್‍ಸ್ಟ್ರಕ್ಷನ್ ತಂದ್ರು, ನಮ್ಮಕ್ಕನಿಂದ ಥ್ರೆಟ್ ಇದೆ. ತೆಲುಗು ಫಿಲಂ ರಿಮೇಕ್ ಮಾಡುತ್ತೇನೆ ಅಂತ ಹೇಳಿದ್ದಳು. ನನ್ನ ಜೊತೆ ಮೊದಲು ಫ್ರೆಂಡ್ ಶಿಪ್ ಬೆಳೆಸಿದಳು. ನಂತರ ಸಿನೆಮಾ ಆಫರ್ ಕೊಟ್ಟು 6 ಲಕ್ಷ ವಂಚನೆ ಮಾಡಿದ್ದಾಳೆ. ನನ್ನ ಹತ್ರ ಇರುವ ಚಿನ್ನವನ್ನ ಪಡೆದಿದ್ದಳು. ಸ್ಯಾಟ್ ಲೈಟ್ ಥ್ರೂ ಮೊಬೈಲ್ ವೈರಸ್ ಬರುತ್ತದೆ ಅಂತ ಕಥೆ ಕಟ್ಟಿ ನನ್ನ ಬಳಿ ಚಿನ್ನ ಕಸಿದುಕೊಂಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ.

ಅರುಣಾಕುಮಾರಿ ಸ್ಪಷ್ಟತೆಯಿಂದ, ನೇರವಾಗಿ ಮಾತನಾಡೋದ್ರಿಂದ ಮೊದಲು ಅನುಮಾನ ಬರಲಿಲ್ಲ. ನನ್ನ ಸ್ನೇಹಿತರ ಕಡೆಯಿಂದಲೂ ಆರ್ಥಿಕ ಸಹಾಯ ಮಾಡಿದ್ದೇನು. ನಮ್ ಸ್ನೇಹಿತರ ಜೊತೆ 1 ಲಕ್ಷ ಹಣ ಕೊಡಿಸಿದ್ದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ 2016 ರಲ್ಲಿ ಅರುಣಾಕುಮಾರಿ ಮೇಲೆ ದೂರು ನೀಡಿದ್ದೇವೆ ಎಂದರು.

ಅರುಣಾಕುಮಾರಿಯಿಂದ ನನ್ನ ಸ್ನೇಹಿತರು ಕಟ್‍ಡೌನ್ ಆದರು. ಪರಿಚಯದ ತದನಂತ್ರ ನನ್ನ ಎಲ್ಲಾ ಸ್ನೇಹಿತರನ್ನ ಕಟ್ ಡೌನ್ ಮಾಡೋಕೆ ಶುರು ಮಾಡಿದರು. ಪರಿಚಯ ಆಗುತ್ತಿದ್ದಂತೆ, ಫ್ಯಾಮಿಲಿ ಸ್ನೇಹಿತರ ಬಗ್ಗೆ ತಿಳ್ಕೊಳ್ತಾಳೆ ಇವತ್ತು ದರ್ಶನ್ ಉಮಾಪತಿಯವರ ವಿಚಾರದಲ್ಲೂ ಇದೇ ಆಗುತ್ತಿದೆ. ನಾಗೇಂದ್ರ ಪ್ರಸಾದ್ ಮತ್ತು ನಾನು ಮಾತು ಬಿಡೋಕೆ ಅವಳೇ ಕಾರಣಳಾಗಿದ್ದಾಳೆ ಎಂದು ಆರೋಪ ಮಾಡಿದರು.

The post ಅರುಣಾ ಕುಮಾರಿ ತುಂಬಾ ಫ್ರಾಡ್: ಉದ್ಯಮಿ ನಾಗವರ್ಧನ್ appeared first on Public TV.

Source: publictv.in

Source link