ಅರುಣ್​ ಸಾಗರ್​ ಪುತ್ರಿಯ ‘ಕೆಜಿಎಫ್​ 2’ ಸಾಂಗ್​ ಸೂಪರ್​ ಹಿಟ್​; ಒಂದು ದಿನದೊಳಗೆ 4.7 ಮಿಲಿಯನ್​ ವೀಕ್ಷಣೆ | The Monster Song from KGF Chapter 2 movie by Arun Sagar daughter Aditi Sagar


ಅರುಣ್​ ಸಾಗರ್​ ಪುತ್ರಿಯ ‘ಕೆಜಿಎಫ್​ 2’ ಸಾಂಗ್​ ಸೂಪರ್​ ಹಿಟ್​; ಒಂದು ದಿನದೊಳಗೆ 4.7 ಮಿಲಿಯನ್​ ವೀಕ್ಷಣೆ

ಅದಿತಿ ಸಾಗರ್​, ಅರುಣ್​ ಸಾಗರ್​, ಯಶ್​

‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾಗೆ ಪ್ರೇಕ್ಷಕರಿಂದ ಫುಲ್​ ಮಾರ್ಕ್ಸ್​ ಸಿಕ್ಕಿದೆ. ಈ ಚಿತ್ರದ ಪ್ರತಿ ವಿಭಾಗದ ಕೆಲಸವನ್ನೂ ಜನರು ಕೊಂಡಾಡಿದ್ದಾರೆ. ಹಿನ್ನೆಲೆ ಸಂಗೀತ, ಸಾಹಸ, ಛಾಯಾಗ್ರಹಣ, ಸೆಟ್​ಗಳು, ಕಲಾವಿದರ ನಟನೆ ಹೀಗೆ ಎಲ್ಲರಿಗೂ ಭರ್ಜರಿ ಕ್ರೆಡಿಟ್​ ಸಿಕ್ಕಿದೆ. ಅದೇ ರೀತಿ ರವಿ ಬಸ್ರೂರು ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಹಾಡುಗಳು ಕೂಡ ಸಖತ್​ ಫೇಮಸ್​ ಆಗಿವೆ. ಯೂಟ್ಯೂಬ್​ನಲ್ಲಿ ‘ಕೆಜಿಎಫ್​ 2’ ಚಿತ್ರದ ಹಾಡುಗಳು ಕೋಟ್ಯಂತರ ಬಾರಿ ವೀಕ್ಷಣೆ ಕಂಡಿವೆ. ಈಗ ಪ್ರಮೋಷನಲ್​ ಹಾಡನ್ನು (The Monster Song) ಬಿಡುಗಡೆ ಮಾಡಲಾಗಿದೆ. ಇದು ಅಭಿಮಾನಿಗಳ ಪಾಲಿಗೆ ಒಂದು ರೀತಿಯ ಸರ್ಪ್ರೈಸ್​. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಎಂಡ್​ ಕ್ರೆಡಿಟ್ಸ್​ ವೇಳೆ ಬರುವ ಈ ಹಾಡನ್ನು ಈಗ ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಲಾಗಿದೆ. ಈ ಹಾಡಿಗೆ ಅರುಣ್​ ಸಾಗರ್​ ಪುತ್ರಿ ಅದಿತಿ ಸಾಗರ್​ (Aditi Sagar) ಅವರು ಸಾಹಿತ್ಯ ಬರೆದು, ಧ್ವನಿ ನೀಡಿದ್ದಾರೆ. ಒಂದೇ ದಿನದಲ್ಲಿ 4.7 ಮಿಲಿಯನ್​, ಅಂದರೆ 46 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿರುವುದು ಈ ಹಾಡಿನ ಹೆಚ್ಚುಗಾರಿಕೆ.

‘ಕೆಜಿಎಫ್​’ ಸಿನಿಮಾದಲ್ಲಿ ಯಶ್​ ನಿಭಾಯಿಸಿರುವ ರಾಕಿ ಭಾಯ್​ ಪಾತ್ರವನ್ನು ‘ಮಾನ್​ಸ್ಟರ್​’ ಎಂದು ಬಣ್ಣಿಸಲಾಗುತ್ತದೆ. ಈಗ ರಿಲೀಸ್​ ಆಗಿರುವ ‘The Monster Song..’ ಕೂಡ ಅದ್ದೂರಿ ಆಗಿದೆ. ಇದಕ್ಕೆ ಸಾಹಿತ್ಯ ಬರೆಯಲು ಮತ್ತು ಧ್ವನಿ ನೀಡಲು ಅವಕಾಶ ಕೊಟ್ಟಿದ್ದಕ್ಕಾಗಿ ಯಶ್​, ಪ್ರಶಾಂತ್​ ನೀಲ್​ ಮತ್ತು ಇಡೀ ‘ಕೆಜಿಎಫ್​ 2’ ತಂಡಕ್ಕೆ ಅದಿತಿ ಸಾಗರ್​ ಅವರು ಧನ್ಯವಾದ ಅರ್ಪಿಸಿದ್ದಾರೆ.

‘ಈ ಹಾಡನ್ನು ಬರೆಯಲು ನನಗೆ ಪ್ರೋತ್ಸಾಹ ನೀಡಿದ ಯಶ್​ ಅಣ್ಣನಿಗೆ ಧನ್ಯವಾದಗಳು. ಇಂಥ ಕಲಾಕೃತಿಯ ಭಾಗ ಆಗುವ ಅವಕಾಶ ನೀಡಿದ ವಿಜಯ್​ ಕಿರಗಂದೂರು, ಪ್ರಶಾಂತ್​ ನೀಲ್​, ರವಿ ಬಸ್ರೂರು ಅವರಿಗೆ ಧನ್ಯವಾದಗಳು’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಅದಿತಿ ಸಾಗರ್​ ಬರೆದುಕೊಂಡಿದ್ದಾರೆ. ಈ ಹಿಂದೆ ಕೂಡ ಗಾಯನದ ಮೂಲಕ ಅದಿತಿ ಗುರುತಿಸಿಕೊಂಡಿದ್ದರು. ಅವರ ಕಂಠದಲ್ಲಿ ಮೂಡಿಬಂದಿದ್ದ ‘ಫ್ರೆಂಚ್​ ಬಿರಿಯಾನಿ’ ಸಿನಿಮಾದ ‘ಹೋಲ್ಡ್​ ಆನ್​ ಬೆಂಗಳೂರು..’ ಹಾಡು ಸಖತ್​ ಫೇಮಸ್​ ಆಗಿತ್ತು.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿವೆ. ‘ಸುಲ್ತಾನ..’, ‘ಗಗನ ನೀ..’, ‘ಮೆಹಬೂಬ..’ ಗೀತೆಗಳು ಜನಮನ ಗೆದ್ದಿವೆ. ಈಗ ‘The Monster Song..’ ಕೂಡ ಅತ್ಯುತ್ತಮ ಸ್ಪಂದನೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದ ಗೆಲುವಿನಲ್ಲಿ ಹಾಡುಗಳ ಪಾತ್ರಗಳ ಕೂಡ ಮಹತ್ವದ್ದಾಗಿದೆ. ‘ಕೆಜಿಎಫ್​ 2’ ಗೆಲುವಿನಿಂದ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಬೇಡಿಕೆ ಹೆಚ್ಚಿದೆ.

ಗಲ್ಲಾ ಪೆಟ್ಟಿಗೆಯಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಅಬ್ಬರಿಸುತ್ತಿದೆ. ಬಿಡುಗಡೆಯಾಗಿ 12 ದಿನ ಕಳೆದಿದ್ದರೂ ಕೂಡ ಈ ಚಿತ್ರದ ಹವಾ ಕಮ್ಮಿ ಆಗಿಲ್ಲ. ಎಲ್ಲ ಭಾಷೆಯಲ್ಲೂ ಈ ಚಿತ್ರಕ್ಕೆ ಭರ್ಜರಿ ಕಮಾಯಿ ಆಗಿದೆ. ಹಿಂದಿ ವರ್ಷನ್​ನಿಂದಲೇ ಬರೋಬ್ಬರಿ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಆಗಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

TV9 Kannada


Leave a Reply

Your email address will not be published. Required fields are marked *