– ಅರುಣ್ ಸಿಂಗ್ ಭೇಟಿಗೆ ಸಮಯ ಕೇಳಿಲ್ಲವೆಂದು ಸ್ಪಷ್ಟನೆ

ವಿಜಯಪುರ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಸಿಎಂ ಬದಲಾವಣೆಯ ಕುರಿತು ಪರ, ವಿರೋಧ ಚರ್ಚೆ ಕೂಡ ನಡೆದಿದೆ. ಇದರ ಮಧ್ಯೆ ನಾಯಕತ್ವ ಬದಲಾವಣೆ ಕುರಿತು ಮಾತನಾಡುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೈಲೆಂಟಾಗಿದ್ದು, ಯಾರ ಕೈಗೂ ಸಿಗುತ್ತಿಲ್ಲ. ಇದೆಲ್ಲದರ ಮಧ್ಯೆ ಇಂದು ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಅರುಣ್ ಸಿಂಗ್ ಭೇಟಿಗೆ ಅವಕಾಶ ಕೇಳಿಲ್ಲ ಎಂದಿದ್ದಾರೆ.

ಈ ಕುರಿತು ಫೆಸ್ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಯತ್ನಾಳ್, ನಾನು ಅರುಣ್ ಸಿಂಗ್ ಅವರನ್ನು ಭೇಟಿ ಮಾಡಲು ಸಮಯ ಕೇಳಿಲ್ಲ. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಮಾಡಬೇಡಿ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅರುಣ್ ಸಿಂಗ್ ಭೇಟಿ ಮಾಡುವವರ ಲಿಸ್ಟ್ ನ್ನು ಸಹ ಹಂಚಿಕೊಂಡಿದ್ದಾರೆ. ಈ ಮೂಲಕ ರೆಬೆಲ್ ಶಾಸಕರು ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಅವರು ಹಂಚಿಕೊಂಡಿದ್ದ ಫೋಟೋದಲ್ಲಿ ಸಚಿವರಾದ ಶ್ರೀರಾಮುಲು, ಆರ್.ಅಶೋಕ್ ಹಾಗೂ ಬಿಜೆಪಿ ನಾಯಕರಾದ ರಾಜ್‍ಕುಮಾರ್ ಪಾಟೀಲ್ ಸೇಡಂ, ಕೆ.ಜಿ.ಬೋಪಯ್ಯ, ನೆಹರು ಓಲೇಕಾರ್, ಅಪ್ಪಚ್ಚು ರಂಜನ್, ಅಭಯ್ ಪಾಟೀಲ್, ಅರವಿಂದ್ ಬೆಲ್ಲದ್, ಪ್ರೀತಂ ಗೌಡ, ಬೆಳ್ಳಿ ಪ್ರಕಾಶ್, ಉದಯ್ ಗರುಡಾಚಾರ್, ಹರತಾಳು ಹಾಲಪ್ಪ, ಸೋಮಶೇಖರ್ ರೆಡ್ಡಿ, ಶಂಕರ್‍ಗೌಡ ಪಾಟೀಲ್, ಸಿದ್ದು ಸವದಿ, ಜ್ಯೋತಿ ಗಣೇಶ್, ಪೂರ್ಣಿಮಾ, ಗೂಳಿಹಟ್ಟಿ ಶೇಖರ್, ಅರುಣ್ ಕುಮಾರ್ ಪ್ರದೀಪ್ ಶೆಟ್ಟರ್, ಮಹೇಶ್ ಕುಮಟಳ್ಳಿ, ಮಸಾಲಾ ಜಯರಾಂ, ರಾಜೇಶ್ ಗೌಡ, ಬಸವರಾಜ್ ದಡೆಸಗೂರ್, ನಂದೀಶ್ ರೆಡ್ಡಿ, ರಘುಪತಿ ಭಟ್, ಅಭಯ್ ಪಾಟೀಲ್, ಎಚ್.ವಿಶ್ವನಾಥ್, ವೈ.ಎ.ನಾರಾಯಣಸ್ವಾಮಿ, ಸುನಿಲ್ ಕುಮಾರ್ ಕಾರ್ಕಳ, ರೂಪಾಲಿ ನಾಯಕ್ ಸೇರಿದಂತೆ ಅನೇಕರ ಹೆಸರಿರುವ ಪಟ್ಟಿಯನ್ನು ಸ್ವತಃ ಯತ್ನಾಳ್ ಬಿಡುಗಡೆ ಮಾಡಿದ್ದರು. ಆದರೆ ಬಳಿಕ ಈ ಪಟ್ಟಿಗಳ ಫೋಟೋವನ್ನು ಅವರು ಡಿಲೀಟ್ ಮಾಡಿದ್ದಾರೆ.

ಅರುಣ್ ಸಿಂಗ್ ಭೇಟಿಗೆ ಯತ್ನಾಳ್ ಅವಕಾಶ ಕೇಳಿದ್ದರು. ಆದರೆ ಅರುಣ್ ಸಿಂಗ್ ಅವರು ಅವಕಾಶ ನೀಡಿಲ್ಲ ಎಂಬ ಸುದ್ದಿ ಹರದಾಡುತ್ತಿತ್ತು. ಈ ಬಗ್ಗೆ ಸ್ವತಃ ಯತ್ನಾಳ್ ಅವರು ಸ್ಪಷ್ಟನೆ ನೀಡಿದ್ದಾರೆ.

The post ಅರುಣ್ ಸಿಂಗ್ ಭೇಟಿಗೆ ತಯಾರಿರುವವರ ಪಟ್ಟಿ ಬಿಡಡುಗಡೆ ಮಾಡಿದ ಯತ್ನಾಳ್ appeared first on Public TV.

Source: publictv.in

Source link