ಬೆಂಗಳೂರು: ನೇರವಾಗಿ ಅರುಣ್ ಸಿಂಗ್ ಸಭೆಗೆ ಹೋಗ್ತೀನಿ, ಅಲ್ಲಿ ನಾನು ಏನ್​ ಹೇಳಬೇಕೋ ಅದನ್ನ ನಾನು ಹೇಳ್ತೀನಿ ಅಂತ ಸಿ.ಪಿ.ಯೋಗೇಶ್ವರ್ ಹೇಳಿಕೆ ಕೊಟ್ಟಿದ್ದಾರೆ.

ಅರುಣ್ ಸಿಂಗ್ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು.. ಸಭೆಯಲ್ಲಿ ನಾನು ಏನು ಹೇಳಬೇಕೋ ಅದನ್ನ ಹೇಳ್ತೀನಿ. ಎಲ್ಲಾ ಸರಿ ಹೋಗಬಹುದು. ರಾಜಕೀಯವಾಗಿ ನಾನು ಏನೂ ಮಾತಾಡಲ್ಲ. ಎಲ್ಲವನ್ನೂ ಅರುಣ್ ಸಿಂಗ್ ಮುಂದೆ ಹೇಳ್ತೀನಿ. ನಾನು ದೆಹಲಿಗೆ ಹೋಗಿರಲಿಲ್ಲ. ವಯಕ್ತಿಕ ಕೆಲಸಕ್ಕೆ ಹೈದ್ರಾಬಾದ್​ಗೆ ತೆರಳಿದ್ದೆ. ಯಾವ ನಾಯಕರನ್ನು ನಾನು ಭೇಟಿಯಾಗಿಲ್ಲ ಅಂತ ಸಚಿವ ಯೋಗೇಶ್ವರ್ ಹೇಳಿದ್ದಾರೆ.

The post ‘ಅರುಣ್ ಸಿಂಗ್ ಸಭೆಯಲ್ಲಿ ಏನ್ ಹೇಳಬೇಕೋ ಅದನ್ನ ನಾನು ಹೇಳ್ತೀನಿ’ appeared first on News First Kannada.

Source: newsfirstlive.com

Source link