ಅರೆರೆ ಇದೇನಿದು..! ನಾಳೆ ಕತ್ರಿನಾ, ವಿಕ್ಕಿ ಕೋರ್ಟ್​ ಮ್ಯಾರೇಜ್​​.. ಡಿ.7ಕ್ಕೆ ಮತ್ತೊಮ್ಮೆ ಮದುವೆ


ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಹಾಗೂ ನಟ ವಿಕ್ಕಿ ಕೌಶಲ್​​​​ ಜೋಡಿ ಮದುವೆ ವಿಚಾರಕ್ಕೆ ಭಾರೀ ಸುದ್ದಿಯಾಗುತ್ತಿದ್ದಾರೆ. ಈ ಜೋಡಿ ನಾಳೆ ಮುಂಬೈನಲ್ಲಿ ಕೋರ್ಟ್‌ ಮ್ಯಾರೇಜ್‌ ಆಗಲಿದೆ ಎನ್ನಲಾಗುತ್ತಿದೆ. ವಿಶೇಷ ವಿವಾಹ ಕಾಯ್ದೆ 1954 ಯಡಿ ಅಧಿಕಾರಿಗಳ ಸಮ್ಮುಖದಲ್ಲಿ ಈ ಕೋರ್ಟ್​ಮ್ಯಾರೇಜ್​​ ನಡೆಯಲಿದ್ದು, ಕುಟುಂಬಸ್ಥರು ಮಾತ್ರ ಪಾಲ್ಗೊಳ್ಳಲಿದ್ದಾರಂತೆ.

ಇನ್ನು, ಕೋರ್ಟ್​ ಮದುವೆ ಬಳಿಕ ಮತ್ತೊಮ್ಮೆ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ಆಗಲಿದೆ ಈ ಜೋಡಿ. ಈ ಮದುವೆ ಸಮಾರಂಭಕ್ಕೆ ಕುಟುಂಬದವರು ಮತ್ತು ಸ್ನೇಹಿತರು ಭಾಗಿಯಾಗಲಿದ್ದಾರೆ. ಬಾಲಿವುಡ್​​​​​​ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರಂತೆ.

ಇದೇ ಡಿಸೆಂಬರ್ 7ನೇ ತಾರೀಖಿನಿಂದ 9ವರೆಗೆ ಮದುವೆ ನಡೆಯಲಿದೆ. ಈ ಅದ್ದೂರಿ ಮದುವೆಯಲ್ಲಿ ಬಾಲಿವುಡ್​​ ಅನೇಕ ಗಣ್ಯರು ಹಾಜರಾಗಲಿದ್ದಾರೆ. ಆದರೀಗ, ಗೆಸ್ಟ್​ಗಳಿಗೆ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕಂಡೀಷನ್ಸ್​ ಹಾಕಿದ್ದಾರಂತೆ. ಅಲ್ಲದೇ ಅಗ್ರೀಮೆಂಟ್​​ ಮಾಡಿಕೊಂಡು ಮದುವೆಗೆ ಬನ್ನಿ ಎಂದು ಕರೆದಿದ್ದಾರಂತೆ.

News First Live Kannada


Leave a Reply

Your email address will not be published. Required fields are marked *