ಅರೆಸ್ಟ್​ ಮಾಡಲು ಬರುವ ಪೊಲೀಸರನ್ನು ಎದುರಿಸಲು ಈ ಹಾಟ್​ ಅವತಾರದಲ್ಲಿ ಸಜ್ಜಾದ ಕಂಗನಾ | Another day another FIR. Just in case they come to arrest me Kangana Ranaut Hot look goes viral

ಅರೆಸ್ಟ್​ ಮಾಡಲು ಬರುವ ಪೊಲೀಸರನ್ನು ಎದುರಿಸಲು ಈ ಹಾಟ್​ ಅವತಾರದಲ್ಲಿ ಸಜ್ಜಾದ ಕಂಗನಾ

ಕಂಗನಾ

ಕಂಗನಾ ರಣಾವತ್​ ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಅವರು ಮಾಡಿಕೊಳ್ಳುವ ಕಾಂಟ್ರವರ್ಸಿಗಳು ಒಂದೆರಡಲ್ಲ. ಯಾವುದೇ ವಿಚಾರಗಳನ್ನು ಹೇಳಲು ಅವರು ಹಿಂಜರಿಯುವುದಿಲ್ಲ. ಕೆಲ ವಿಚಾರಗಳಲ್ಲಿ ಅವರು ಅತಿರೇಕವಾಗಿ ಆಡಿದ್ದೂ ಇದೆ. ಇತ್ತೀಚೆಗೆ ಅವರು ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ‘1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ, ಅದು ಭಿಕ್ಷೆ. 2014ರಲ್ಲಿ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು‌’ ಎಂದು ಕಂಗನಾ ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಕಂಗನಾ ವಿರುದ್ಧ ಸಾಕಷ್ಟು ಎಫ್​ಐಆರ್​ಗಳು ದಾಖಲಾಗುತ್ತಿವೆ. ಈ ವಿಚಾರವನ್ನು ಇಟ್ಟುಕೊಂಡು ಕಂಗನಾ ವ್ಯಂಗ್ಯವಾಡಿದ್ದಾರೆ.

‘1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ, ಅದು ಭಿಕ್ಷೆ. ದೇಶಕ್ಕೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ ಮೋದಿ ಗೆದ್ದ ಬಳಿಕ’ ಎಂದು ಕಂಗನಾ ಹೇಳಿರುವ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ತಾವು ಹೇಳಿದ ಮಾತು ತಪ್ಪಾದರೆ ಪದ್ಮಶ್ರೀ ಪ್ರಶಸ್ತಿ ವಾಪಸ್​ ಕೊಡುವುದಾಗಿ ಕಂಗನಾ ಹೇಳಿದ್ದರು. ಆದರೆ ಅವರು ಕ್ಷಮೆಯಾಚಿಸಿಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್​ ನಾಯಕರು ಸಿಟ್ಟಾಗಿದ್ದಾರೆ. ಹೀಗಾಗಿ, ದೇಶದ ಬೇರೆಬೇರೆ ಕಡೆಗಳಲ್ಲಿ ಅವರ ವಿರುದ್ಧ ದೂರು ದಾಖಲಾಗುತ್ತಿದೆ. ಆದರೆ, ಕಂಗನಾ ಇದಕ್ಕೆಲ್ಲ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ ಕಂಗನಾ. ಹಾಟ್​ ಅವತಾರ ತಾಳಿ ಕೈಯಲ್ಲಿ ವೈನ್​ ಗ್ಲಾಸ್ ಹಿಡಿದಿರುವ ಫೋಟೋ ಪೋಸ್ಟ್ ಮಾಡಿರುವ ಕಂಗನಾ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಮತ್ತೊಂದು ದಿನ ಮತ್ತೊಂದು ಎಫ್‌ಐಆರ್. ಅವರು ನನ್ನನ್ನು ಬಂಧಿಸಲು ಬಂದರೆ.. ಈ ರೀತಿ ಮೂಡ್​ ಇದೆ’ ಎಂದು ಬರೆದುಕೊಂಡಿದ್ದಾರೆ. ಈ ಫೋಸ್ಟ್​ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.

‘ದೇಶಕ್ಕಾಗಿ ಹೋರಾಡಿದವರನ್ನು ಹಿಡಿದುಕೊಡಲಾಯ್ತು. ಹೋರಾಡುವ ಬಿಸಿ ರಕ್ತ ಇಲ್ಲದವರು ಅಂಥ ಕೆಲಸ ಮಾಡಿದರು. ಅವರು ಅಧಿಕಾರದ ದಾಹ ಇಟ್ಟುಕೊಂಡ ಕುತಂತ್ರಿಗಳಾಗಿದ್ದರು. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ನೀಡಿ, ಅದರಿಂದ ಸ್ವಾತಂತ್ರ್ಯ ಸಿಗತ್ತೆ ಎಂದು ಅವರೇ ನಮಗೆ ಹೇಳಿಕೊಟ್ಟಿದ್ದು. ಆ ರೀತಿ ಪಡೆಯುವುದು ಭಿಕ್ಷೆಯೇ ಹೊರತು, ಸ್ವಾತಂತ್ರ್ಯವಲ್ಲ. ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳಿ’ ಎಂಬುದಾಗಿಯೂ ಕಂಗನಾ ಈ ಮೊದಲು ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಗಾಂಧೀಜಿ ಹೋರಾಟವನ್ನು ಕೀಳಾಗಿ ಕಂಡ ಕಂಗನಾರನ್ನು ಸ್ವಚ್ಛ ಭಾರತ ಅಭಿಯಾನಕ್ಕೆ ಬಳಸಿಕೊಳ್ಳಿ: ಕೆಪಿವೈಸಿಸಿ ಅಧ್ಯಕ್ಷ ರಕ್ಷಾ ರಾಮಯ್ಯ

TV9 Kannada

Leave a comment

Your email address will not be published. Required fields are marked *