ಅರೆ..ಇದೇನಿದು ಡೊನಾಲ್ಡ್​ ಟ್ರಂಪ್ ಭೇಟಿಯಾಗಿದ್ದೇಕೆ ಬಿಜೆಪಿ ನಾಯಕ ಪ್ರಭಾಕರ್ ಕೋರೆ?


ನವದೆಹಲಿ: ರಾಜ್ಯಸಭಾ ಸದಸ್ಯ, ಬಿಜೆಪಿ ಹಿರಿಯ ನಾಯಕ ಪ್ರಭಾಕರ್ ಕೋರೆ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಅವರನ್ನ ಭೇಟಿಯಾಗಿದ್ದಾರೆ.

ಅಮೆರಿಕದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕೋರೆ ಅವರು ಟ್ರಂಪ್ ಅವರನ್ನ ಭೇಟಿಯಾಗಿದ್ದಾರೆ. ಉದ್ಯಮಿ, ಶಿಕ್ಷಣತಜ್ಞರಾದ ರವಿಶಂಕರ್ ಭೂಪ್ಲಾಪುರ್​ ಅವರು ಇತ್ತೀಚೆಗೆ ತಮ್ಮ ಮಗಳನ್ನ ಮದುವೆ ಮಾಡಿದರು. ಮಗಳಾದ ಮನಲಿ ಅವರು ಅಂಕಿತ್ ಅನ್ನೋರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.

ಈ ಮದುವೆ ಸಮಾರಂಭದಲ್ಲಿ ಪ್ರಭಾಕರ್ ಕೋರೆ ಟ್ರಂಪ್ ಅವರನ್ನ ಭೇಟಿ ಮಾಡಿದ್ದಾರೆ. ಈ ಬಗ್ಗೆ ಕೋರೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *