ಭಾರತದ ರಾಷ್ಟ್ರಪಿತ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧಿಯವರ ಜೀವನ ಮತ್ತು ಪರಂಪರೆ ಬಗ್ಗೆ ಸಾರುವ 5 ಪೌಂಡ್ನ ಹೊಸ ಕಾಯಿನ್ ಒಂದನ್ನು ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ರಿವೀಲ್ ಮಾಡಿದರು. ದೀಪಾವಳಿ ಹಬ್ಬದ ಅಂಗವಾಗಿ ಗಾಂಧಿ ಸ್ಮರಣಾರ್ಥ 5 ಪೌಂಡ್ ನಾಣ್ಯ ರಿವೀಲ್ ಮಾಡಿದ ರಿಷಿ ಸುನಕ್, ಇದು ಜಗತ್ತಿನ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಪ್ರಭಾವಿ ನಾಯಕನಿಗೆ ನೀಡುತ್ತಿರುವ ಗೌರವ ಎಂದರು.
ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಹಲವು ರೀತಿಯ ಗಾಂಧಿ ಸ್ಮರಣಾರ್ಥ 5 ಪೌಂಡ್ ನಾಣ್ಯ ಬಿಡುಗಡೆ ಮಾಡಲಾಗಿದೆ. ಇದರ ಮೇಲೆ ಗಾಂಧಿಯವರ ಮೈ ಲೈಫ್ ಈಸ್ ಮೈ ಮೆಸೇಜ್ ಜೊತೆಗೆ ನ್ಯಾಷನಲ್ ಫ್ಲವರ್ ಕಮಲವನ್ನು ಮುದ್ರಿಸಲಾಗಿದೆ. ಈ ನಾಣ್ಯವನ್ನು ಹೀನಾ ಗ್ಲೋವರ್ ಡಿಸೈನ್ ಮಾಡಿದ್ದಾರೆ.