ಅರೇ ಇದೇನಿದು?! ಗೃಹ ಸಚಿವ ಆರಗ ಜ್ಞಾನೇಂದ್ರರನ್ನ ಭೇಟಿಯಾಗಿದ್ಯಾಕೆ ರಮೇಶ್​ ಅರವಿಂದ್​..?


ರಮೇಶ ಅರವಿಂದ್​ ಮತ್ತು ರಚಿತಾರಾಮ್​ ನಟನೆಯ ‘100’ ಚಿತ್ರವನ್ನ ವೀಕ್ಷಿಸಲು ಆಗಮಿಸುವಂತೆ ಚಿತ್ರತಂಡ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಆಹ್ವಾನ ನೀಡಿದೆ.

ಇಂದು ಗೃಹ ಸಚಿವರ ನಿವಾಸದಲ್ಲಿ ಭೇಟಿ ಮಾಡಿದ ನಟ ರಮೇಶ್​ ಅರವಿಂದ್​ ಚಿತ್ರತಂಡ ನವೆಂಬರ್​ 19 ರಂದು ರಿಲೀಸ್​​ ಆಗಲಿರುವ ಚಿತ್ರವನ್ನು ವೀಕ್ಷಿಸಲು ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.

 

100 ಚಿತ್ರ ರಮೇಶ್​ ನಟನೆ ಮತ್ತು ನಿರ್ದೇಶನದ ಚಿತ್ರವಾಗಿದ್ದು ಅವರ ಕೆರಿಯರ್​ನ 102 ನೇ ಚಿತ್ರವಾಗಿದೆ. ಸಸ್ಪೆನ್ಸ್​ ಥ್ರಿಲ್ಲರ್​ ಕಥಾ ಹಂದರ ಹೊಂದಿರೋ ಈ ಸಿನಿಮಾ ವಿಭಿನ್ನವಾಗಿ ಮೂಡಿ ಬಂದಿದ್ದು ಪ್ರೇಕ್ಷರನ್ನು ರಂಜಿಸುವಲ್ಲಿ ಯಶಸ್ವಿಯಾಗಲಿದೆ ಎಂಬುದು ಚಿತ್ರತಂಡದ ಮಾತು. ರಮೇಶ್​ ರೆಡ್ಡಿ ನಿರ್ಮಿಸಿರುವ ಈ ಸಿನಿಮಾಗೆ ಪೊಲೀಸ್​ ಸಹಾಯವಾಣಿ 100 ಅಂತ ಹೆಸರಿಟ್ಟಿರೋದು ವಿಶೇಷವಾಗಿದ್ದು ಕನ್ನಡ ಮತ್ತು ತೆಲಗು ಭಾಷೆಗಳಲ್ಲಿ ತೆರೆಕಾಣಲಿದೆ.

News First Live Kannada


Leave a Reply

Your email address will not be published. Required fields are marked *