ಬೆಂಗಳೂರು: ಕೇಂದ್ರೋದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನ ಇಂದು ಅರ್ಥಪೂರ್ಣವಾಗಿ ಆಚರಿಸಿತು. ದೇಶದಾದ್ಯಂತ ಇರುವ ತನ್ನ ಎಲ್ಲಾ ಘಟಕಗಳ ಸಿಬ್ಬಂದಿ ಹಾಗೂ ಕುಟುಂಬ ವರ್ಗಗಳ ಸಾವಿರಾರು ಜನರು Zoom ಆ್ಯಪ್ ಮತ್ತು Youtube ಮುಖೇನ ಏಕಕಾಲಕ್ಕೆ ಸೇರಿ ಯೋಗ ಮಾಡುವುದರ ಮೂಲಕ ಆಚರಿಸಿತು.

ಈ ವೇಳೆ ಮಾತನಾಡಿದ ಬಿ.ಇ.ಎಲ್ ಚೇರ್ಮನ್ ಎಂ.ವಿ ಗೌತಮ್.. ಕೋವಿಡ್ ಮಹಾಮರಿಯಿಂದ ಸಾಕಷ್ಟು ಜನರು ಸಾವನ್ನಪ್ಪಿದರು. ತುಂಬಾ ಜನರಿಗೆ ಆಮ್ಲಜನಕದ ತೊಂದರೆ ಉಂಟಾಯಿತು. ಪ್ರಾಣಾಯಾಮ ಮಾಡೋದ್ರಿಂದ ಆಮ್ಲಜನಕದ ಕೊರತೆ ಎಂದೂ ಕಾಡಲ್ಲ. ಈ ಕಾರಣಕ್ಕೆ ನಾನು ನಮ್ಮ ಪೂರ್ವಜರಿಗೆ ಧನ್ಯವಾದ ತಿಳಿಸಲು ಈ ಸಂದರ್ಭದಲ್ಲಿ ಇಚ್ಛಿಸುತ್ತೇನೆ ಎಂದರು.

ಕೇಂದ್ರೋದ್ಯಮವಾದ ಬಿ.ಇ.ಎಲ್ ಸಂಸ್ಥೆಯಲ್ಲಿ ಎಲ್ಲರನ್ನೂ ಸಂತೋಷವಾಗಿ ಆರೋಗ್ಯವಾಗಿ ಇಡುವ ಕಡೆ ಸದಾ ಕಾರ್ಯೋನ್ಮುಖರಾಗಿದ್ದೇವೆ. ಸಂತೋಷದಿಂದಿರುವ ಸಿಬ್ಬಂದಿ ಸಂಸ್ಥೆಗೆ, ಮುಂದೆ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಲು ಕಾರಣವಾಗುತ್ತಾನೆ. ಯೋಗ ದಿನ ಆರಂಭವಾದ ದಿನದಿಂದ ಪ್ರತಿ ವರ್ಷ ಆಚರಿಸುತ್ತಿದ್ದೇವೆ ಎಂದರು.

ನಾನು ಎಲ್ಲರಿಗೂ ಈ ಸಂದರ್ಭದಲ್ಲಿ ವಿನಂತಿಸುತ್ತೇನೆ, ಪ್ರತಿದಿನ ಯೋಗ ಮಾಡಿದರೆ ಆರೋಗ್ಯವಾಗಿರಲು ಚಟುವಟಿಕೆಯಿಂದ ಇರಲು ಕಾರಣವಾಗುತ್ತದೆ. ದೇಶದಲ್ಲಿರುವ ಬಿ.ಇ.ಎಲ್ ತನ್ನ ಎಲ್ಲಾ ಘಟಕಗಳ ಸಿಬ್ಬಂದಿ ಹಾಗೂ ಕುಟುಂಬ ವರ್ಗಗಳ ಸಾವಿರಾರು ಜನ ಸೇರಿ ಆನ್​ಲೈನ್ ಮುಖಾಂತರ ಏಕಕಾಲಕ್ಕೆ ಸೇರಿ ಯೋಗ ಮಾಡುವುದರ ಮುಖೇನ ಆಚರಿಸಿದರು ಎಂದು ಹೇಳಿದ್ರು.

ಬೆಂಗಳೂರಿನ ಅಧಿಕಾರಿಗಳ ಒಕ್ಕೂಟದಲ್ಲಿ ಆಚರಿಸಲಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಎಂ ವಿ ಗೌತಮ್, ಬೆಂಗಳೂರು ಸಂಕೀರ್ಣದ ನಿರ್ದೇಶಕರಾದ ವಿನಯ ಕುಮಾರ್ ಕತ್ಯಾಲ್, ಮಾನವ ಸಂಪನ್ಮೂಲ ನಿರ್ದೇಶಕರಾದ ಕೆ.ಎಂ ಶಿವಕುಮಾರನ್, ಪ್ರಧಾನ ವ್ಯವಸ್ಥಾಪಕರಾದ ಆರ್.ಪಿ ಮೋಹನ್ ಹಾಗೂ ಸಂಸ್ಥೆಯು ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಸಂಸ್ಥೆ ವತಿಯಿಂದ ಕೋವಿಡ್ ಪೀಡಿತರಿಗೆ ಯೋಗ ಥೆರಪಿಯನ್ನು ನಿರಂತರವಾಗಿ ನೀಡಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಬಿ.ಇ.ಎಲ್ ಸಂಸ್ಥೆಯ ಉನ್ನತಾಧಿಕಾರಿಗಳು ತಿಳಿಸಿದರು.

The post ಅರ್ಥಪೂರ್ಣವಾಗಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದ BEL ಸಂಸ್ಥೆ appeared first on News First Kannada.

Source: newsfirstlive.com

Source link