ಅರ್ಥೂರ್ ಜೈಲಿಗೆ ಬಂದು ಮಗನಿಗೆ ಮಾನಸಿಕ ಧೈರ್ಯ ತುಂಬಿದ ಗೌರಿ ಖಾನ್  

ನವದೆಹಲಿ: ಪುತ್ರ ಆರ್ಯನ್ ಖಾನ್​ರನ್ನ ನೋಡಲು ಶಾರೂಖ್ ಪತ್ನಿ ಗೌರಿ ಖಾನ್ ಇಂದು ಬೆಳಗ್ಗೆ ಮುಂಬೈನ ಅರ್ಥೂರ್​ ಜೈಲಿಗೆ ಆಗಮಿಸಿದ್ದರು. ಕಳೆದ ವಾರ ಶಾರೂಖ್ ಖಾನ್ ಆಗಮಿಸಿ ಮಗನಿಗೆ ಧೈರ್ಯ ತುಂಬಿ ಹೋಗಿದ್ದರು. ಇದೀಗ ತಾಯಿ, ಜೈಲಿಗೆ ಭೇಟಿ ನೀಡಿ ಮಾತುಕತೆ ನಡೆಸಿ ವಾಪಸ್ ಆಗಿದ್ದಾರೆ.

ಡ್ರಗ್​ ಕೇಸ್​ನಲ್ಲಿ ಎನ್​ಸಿಬಿ ಅಧಿಕಾರಿಗಳು ಆರ್ಯನ್ ಖಾನ್​ರನ್ನ ಅಕ್ಟೋಬರ್ 3 ರಂದು ಬಂಧಿಸಿದ್ದಾರೆ. ಜಾಮೀನು ನಿರೀಕ್ಷೆಯಲ್ಲಿ ಆರ್ಯನ್ ಖಾನ್​ಗೆ, ಮುಂಬೈನ ಎನ್​ಡಿಪಿಎಸ್​ ವಿಶೇಷ ಕೋರ್ಟ್​ ಆದೇಶ ದೊಡ್ಡ ಶಾಕ್ ನೀಡಿದೆ.

ಜಾಮೀನು ಅರ್ಜಿ ಅಲ್ಲಿ ವಜಾ ಆಗುತ್ತಿದ್ದಂತೆಯೇ ಆರ್ಯನ್ ಖಾನ್, ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕಳೆದ 22 ದಿನಗಳಿಂದ ಆರ್ಯನ್​ ಖಾನ್ ನ್ಯಾಯಾಂಗ ಬಂಧನ ಮತ್ತು ಎನ್​ಸಿಬಿ ಕಸ್ಟಡಿಯಲ್ಲಿದ್ದಾರೆ. ಸದ್ಯ ಆರ್ಯನ್ ಖಾನ್ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

News First Live Kannada

Leave a comment

Your email address will not be published. Required fields are marked *