ಅರ್ಧಕ್ಕೆ ಪ್ರಯಾಣ ನಿಲ್ಲಿಸಿದ ‘ನಿನ್ನಿಂದಲೇ’- ಕಾರಣವೇನು?


ಸೀರಿಯಲ್​ ಲೋಕದಲ್ಲಿ ಗಟ್ಟಿ ನೆಲೆ ಕಾಣುವುದೂ ಅಷ್ಟು ಸುಲಭವಲ್ಲ. ಪ್ರೇಕ್ಷಕರನ್ನ ಹಿಡಿದಿಡಲು ಪ್ರತಿ ಕ್ಷಣ ಸಾಹಸ ಪಡ್ಬೇಕು. ಒಂಚೂರು ಆ ಕಡೆ ಈ ಕಡೆಯಾದ್ರೂ ಆ ವಾರದ ಟಿಆರ್​ಪಿ ಲೆಕ್ಕಾಚಾರದಲ್ಲಿ ಧಾರಾವಾಹಿಗಳು ನೆಲಕಚ್ಚಿ ಬಿಡುತ್ತವೆ. ಈಗ ಅಂತಹದ್ದೇ ಸುಳಿಗೆ ಸಿಕ್ಕಿ ಹಾಕಿಕೊಂಡಿದೆ ನಿನ್ನಿಂದಲೇ ಸೀರಿಯಲ್​.

ಹೌದು, ಮೊನ್ನೆ ಮೊನ್ನೆಯಷ್ಟೆ ಲಾಂಚ್​ ಆಗಿದ್ದ ಧಾರಾವಾಹಿ ಈಗ ವೈಂಡಪ್​ ಆಗ್ತಾಯಿದೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನ್ನಿಂದಲೇ ಸೀರಿಯಲ್​ ಲೀಡ್​ ಪಾತ್ರದಲ್ಲಿ ಈ ಮೊದಲು ಆಕೃತಿ ಎಂಬ ಧಾರಾವಾಹಿ ಮೂಲಕ ಜನಪ್ರಿಯರಾಗಿದ್ದ ಚಿತ್ರಶ್ರೀ ಸುರೇಶ್​ ಈ ಧಾರಾವಾಹಿಯ ನಾಯಕಿ ಅನನ್ಯ ಪಾತ್ರವನ್ನ ನಿರ್ವಹಿಸುತ್ತಿದ್ದರೇ ನಾಯಕನ ಪಾತ್ರಕ್ಕೆ ನಟ ದೀಪಕ್​ ಮಹಾದೇವ್ ಬಣ್ಣ ಹಚ್ಚಿದ್ದಾರೆ.​​​​

ಹೀರೋ ವಿದೇಶದಿಂದ ಕಾರಣಾಂತರಗಳಿಂದ ಭಾರತಕ್ಕೆ ವಾಪಸ್ಸಾದಾಗ ಅವನ ಕುಟುಂಬ ಹಾಗೂ ಕಥೆಯ ನಾಯಕಿ ಕುಟುಂಬದ ನಡುವೆ ಕೆಲ ಭಿನ್ನಾಭಿಪ್ರಾಯಗಳಿದ್ದು ಅದೆಲ್ಲವನ್ನು ಅರಿತ ನಾಯಕ ವರುಣ್​ ತನ್ನ ಸಮಸ್ಯೆಗಳಿಂದ ಹೊರ ಬಂದು ಎರಡು ಕುಟುಂಬಗಳ ನಡುವೆ ಬಾಂಧವ್ಯ ಬೆಸೆಯಲು ಪ್ರಯತ್ನಿಸುತ್ತಾನೆ. ಈ ನಡುವೇ ನಾಯಕಿ ಅನನ್ಯಾಳನ್ನ ಮದುವೆಯಾಗುತ್ತಾನೆ ವರಣ್​..ನಂತರ ಅವರ ದಾಂಪತ್ಯದ ಆಗೂ ಹೋಗುಗಳ ನಡುವೆ ಕತೆ ಸಾಗುತ್ತಿರುತ್ತದೆ.

ಕಿರುತೆರೆ, ಹಿರಿತೆರೆಯಲ್ಲಿ ಹೆಸರು ಮಾಡಿರುವ ನಟ ರಾಜೇಶ್​ ನಟರಂಗ ಅವರ ಧ್ವನಿ ಕ್ರಿಯೇಷನ್​ನಡಿ ಮೂಡಿ ಬಂದಿದ್ದ ನಿನ್ನಿಂದಲೇ ಧಾರಾವಾಹಿ ವೈಂಡಪ್​ ಆಗುತ್ತಿದ್ದು, ಜನರ ಮನ ಗೆಲ್ಲುವಲ್ಲಿ ವಿಫಲವಾಗಿದೆ.

ಇದನ್ನೂ ಓದಿ:ಹಿಟ್ಲರ್ ಕಲ್ಯಾಣ ಹೊಸ ವಿಲನ್​ ಎಂಟ್ರಿ; ಇವರು ಯಾರು ಅಂತಾ ಗೊತ್ತಾ?

The post ಅರ್ಧಕ್ಕೆ ಪ್ರಯಾಣ ನಿಲ್ಲಿಸಿದ ‘ನಿನ್ನಿಂದಲೇ’- ಕಾರಣವೇನು? appeared first on News First Kannada.

News First Live Kannada


Leave a Reply

Your email address will not be published. Required fields are marked *