ಐಪಿಎಲ್ ಅಂದ್ರೆ ಮಿಲಿಯನ್ ಡಾಲರ್ ಟೂರ್ನಿ… ಇಲ್ಲಿ ಪ್ರತಿಯೊಂದು ಫ್ರಾಂಚೈಸಿ, ಸಾವಿರಾರು ಕೋಟಿಗೆ ಬೆಲೆಬಾಳುತ್ತವೆ. ಇನ್ನು ತಂಡಗಳನ್ನ ಪ್ರತಿನಿಧಿಸುವ ಆಟಗಾರರೂ, ಕೋಟಿ ವೀರರೇ. ಆದ್ರೆ ಕೆಲ ಕೋಟಿ ವೀರರು, ಈ ಬಾರಿ ಐಪಿಎಲ್​​ನಲ್ಲಿ ಭಾರೀ ನಿರಾಸೆ ಮೂಡಿಸಿದ್ದಾರೆ. ಫ್ರಾಂಚೈಸಿ ಮತ್ತು ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯನ್ನ ಹುಸಿಗೊಳಿಸಿದ್ದಾರೆ.

ಇಂಡಿಯನ್​ ಪ್ರೀಮಿಯರ್ ಲೀಗ್ ಸೀಸನ್-14ಕ್ಕೆ, ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸಿಕೊಂಡಿತ್ತು. ತಮ್ಮ ತಂಡಗಳನ್ನ ಮತ್ತಷ್ಟು ಬಲಿಷ್ಟಗೊಳಿಸಲು ಫ್ರಾಂಚೈಸಿಗಳು, ಕೋಟಿ ಕೋಟಿ ಹಣವನ್ನ ಸ್ಟಾರ್ ಆಟಗಾರರ ಮೇಲೆ ಸುರಿದವು. ಹೌದು..! ದುಡ್ಡಿನ ಬಗ್ಗೆ ಚಿಂತಿಸದೆ ಭಾರೀ ನಿರೀಕ್ಷೆಯೊಂದಿಗೆ ಸ್ಟಾರ್​ ಆಟಗಾರರನ್ನ ಖರೀದಿಸಿದ ಮಾಲೀಕರು, ಕೊನೆಗೆ ನಿರಾಸೆ ಅನುಭವಿಸಬೇಕಾಯ್ತು. ಕಾರಣ, ಮಿಲಿಯನ್ ಡಾಲರ್​ ಆಟಗಾರರು, ಫ್ಲಾಪ್ ಶೋ..

ಕೋಟಿವೀರರ ಫ್ಲಾಪ್ ಶೋ…​

ಕೈಲ್ ಜೇಮಿಸನ್

ವೇಗಿ

ರಾಯಲ್ ಚಾಲೆಂಜರ್ಸ್​

15 ಕೋಟಿ ರೂ

ನ್ಯೂಜಿಲೆಂಡ್ ತಂಡದ ವೇಗಿ ಕೈಲ್ ಜೇಮಿಸನ್​​ರನ್ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, 15 ಕೋಟಿ ರೂಪಾಯಿ ಕೊಟ್ಟು ಹರಾಜಿನಲ್ಲಿ ಖರೀದಿಸಿತು. ಕಿವೀಸ್ ಪರ ವೈಟ್​ಬಾಲ್ ಕ್ರಿಕೆಟ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಜೇಮಿಸನ್, ಆರ್​ಸಿಬಿ ಫ್ರಾಂಚೈಸಿ ಮಾಲೀಕರು ಮನಗೆದ್ರು. ಆದ್ರೆ ಐಪಿಎಲ್​ನಲ್ಲಿ ನ್ಯೂಜಿಲೆಂಡ್ ವೇಗಿಯ ಆಟ, ನಡೆಯಲಿಲ್ಲ. 7 ಪಂದ್ಯಗಳಲ್ಲಿ 9 ವಿಕೆಟ್ ಪಡೆದ ಜೇಮಿಸನ್, 9.20 ಎಕಾನಮಿಯಲ್ಲಿ ದುಬಾರಿ ರನ್​ ನೀಡಿದ್ದಾರೆ.

ಕೋಟಿವೀರರ ಫ್ಲಾಪ್ ಶೋ…​

ಜೇ ರಿಚರ್ಡ್​​ಸನ್

ವೇಗಿ

ಪಂಜಾಬ್ ಕಿಂಗ್ಸ್​

14 ಕೋಟಿ ರೂ

ಬಿಗ್​ಬ್ಯಾಶ್​ ಟಿ-ಟ್ವೆಂಟಿ ಲೀಗ್​ನಲ್ಲಿ ಪರ್ತ್​ ಸ್ಕಾರ್ಚರ್ಸ್​ ಪರ ಮಿಂಚಿದ್ದ ವೇಗಿ ಜೇ ರಚರ್ಡ್​​​ಸನ್, ಬರೋಬ್ಬರಿ 14 ಕೋಟಿ ರೂಪಾಯಿಗೆ ಪಂಜಾಬ್​​​ ಕಿಂಗ್ಸ್​ಗೆ ಮಾರಾಟವಾದ್ರು. ಆದ್ರೆ ಟಿ-ಟ್ವೆಂಟಿ ಸ್ಪೆಷಲಿಸ್ಟ್​ ವೇಗಿ ರಿಚರ್ಡ್​​ಸನ್, ತಮ್ಮ ಮೇಲಿನ ನಂಬಿಕೆಯನ್ನ ಉಳಿಸಿಕೊಳ್ಳಲಿಲ್ಲ. ಆಡಿದ 3 ಪಂದ್ಯಗಳಲ್ಲಿ 3 ವಿಕೆಟ್ ಕಬಳಿಸಿದ ರಿಚರ್ಡ್​ಸನ್, 10.63ರ ಎಕಾನಮಿಯಲ್ಲಿ ರನ್​ ನೀಡಿದ್ದಾರೆ. ಪಂಜಾಬ್​ನ ಅತ್ಯಂತ ದುಬಾರಿ ಬೌಲರ್​​ ಆದ್ರು, ಆಸ್ಟ್ರೇಲಿಯಾ ವೇಗಿ.

ಕೋಟಿವೀರರ ಫ್ಲಾಪ್ ಶೋ…​

ರಿಲೆ ಮೆರೆಡಿತ್

ವೇಗಿ

ಪಂಜಾಬ್ ಕಿಂಗ್ಸ್​

8 ಕೋಟಿ ರೂ

ಪಂಜಾಬ್​ನ ಮತ್ತೋರ್ವ ವೇಗಿ ರಿಲೆ ಮೆರಿಡಿತ್ ಸಹ, ಐಪಿಎಲ್​ನಲ್ಲಿ ಫ್ಲಾಪ್ ಬೌಲಿಂಗ್ ಪರ್ಫಾಮೆನ್ಸ್ ನೀಡಿದ್ರು. 8 ಕೋಟಿಗೆ ಪಂಜಾಬ್ ಕಿಂಗ್ಸ್​ ಪಾಲಾದ ಮೆರಿಡಿತ್ ಮೇಲೆ, ಕಿಂಗ್ಸ್​ ಮಾಲೀಕರಿಗೆ ಭಾರೀ ನಿರೀಕ್ಷೆ ಇತ್ತು. ಬಿಗ್​ಬ್ಯಾಶ್ ಲೀಗ್​ನಲ್ಲಿ ಹೊಬರ್ಟ್​​ ಹರಿಕೇನ್ಸ್​ ತಂಡವನ್ನ ಪ್ರತಿನಿಧಿಸಿದ್ದ ಮೆರಿಡಿತ್, ತನ್ನ ಕನ್ಸಿಸ್ಟೆಂಟ್ ಪೇಸ್​​​ ಮತ್ತು ಬೌನ್ಸ್ರ್​ಗಳಿಂದ ಬ್ಯಾಟ್ಸ್​ಮನ್​ಗಳ ಹೆಲ್ಮೆಟ್ ಪುಡಿ ಪುಟಿ ಮಾಡಿದ್ರು. ಆದ್ರೆ ರಿಚರ್ಡ್​​ಸನ್​ರಂತೆ ಮೆರಿಡಿತ್, ಐಪಿಎಲ್​ನಲ್ಲಿ ಸಕ್ಸಸ್​ ಕಾಣಲು ಸಾಧ್ಯವಾಗಲಿಲ್ಲ. ಆಡಿದ 5 ಪಂದ್ಯಗಳಲ್ಲಿ ಮೆರಿಡಿತ್ 4 ವಿಕೆಟ್ ಪಡೆದ್ರು. ಇನ್ನು ಈ ಆಸಿಸ್ ವೇಗಿಯ ಎಕಾನಮಿ 10…

ಕೋಟಿವೀರರ ಫ್ಲಾಪ್ ಶೋ…​

ಟಾಮ್ ಕರನ್

ಆಲ್​ರೌಂಡರ್

ಡೆಲ್ಲಿ ಕ್ಯಾಪಿಟಲ್ಸ್

5.25 ಕೋಟಿ ರೂ

ಐಪಿಎಲ್​ ಹರಾಜಿನಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್ ವಿರುದ್ಧ ಜಿದ್ದಿಗೆ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್, ಇಂಗ್ಲೀಷ್ ಆಲ್​ರೌಂಡರ್​ ಟಾಪ್ ಕರನ್​ರನ್ನ 5.25 ಕೋಟಿ ರೂಪಾಯಿಗೆ ಖರೀದಿಸಿತು. ಇಂಗ್ಲೆಂಡ್ ಸೀನಿಯರ್ ಟೀಮ್ ಹಾಗೇ ಡೊಮೆಸ್ಟಿಕ್ ಟೂರ್ನಿಗಳಲ್ಲಿ ಮಿಂಚಿದ್ದ ಕರನ್, ಈ ಬಾರಿ ಐಪಿಎಲ್​​ನಲ್ಲಿ ಬ್ಯಾಟ್-ಬಾಲ್ ಎರಡರಲ್ಲೂ ಅಟ್ಟರ್​ ಫ್ಲಾಪ್ ಶೋ ನೀಡಿದ್ರು. ಈ ಹಿಂದೆ ಕೊಲ್ಕತ್ತಾ, ರಾಜಸ್ಥಾನ್ ಫ್ರಾಂಚೈಸಿಗಳನ್ನ ಪ್ರತಿನಿಧಿಸಿದ್ದ ಟಾಮ್ ಕರನ್, ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ..

ಕೋಟಿವೀರರ ಫ್ಲಾಪ್ ಶೋ…​

ಶಿವಂ ದುಬೆ

ಆಲ್​ರೌಂಡರ್

ರಾಜಸ್ಥಾನ್ ರಾಯಲ್ಸ್​

4.40 ಕೋಟಿ ರೂ

ಮುಂಬೈ ಆಲ್​ರೌಂಡರ್​​ ಶಿವಂ ದುಬೆ, ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಹರಾಜಿನಲ್ಲಿ ಈ ಆಲ್​ರೌಂಡರ್​​​ನನ್ನ ಖರೀದಿ ಮಾಡಲು, ರಾಜಸ್ಥಾನ್, ಹೈದ್ರಾಬಾದ್ ಮತ್ತು ಡೆಲ್ಲಿ ಫ್ರಾಂಚೈಸಿಗಳು ಪೈಪೋಟಿ ನಡೆಸಿತ್ತು. ಆದ್ರೆ ರಾಜಸ್ಥಾನ್ ರಾಯಲ್ಸ್​, ಮುಂಬೈಕರ್​ಗೆ 4.40 ಕೋಟಿ ನೀಡಿ ಖರೀದಿಸಿತು. 6 ಪಂದ್ಯಗಳಲ್ಲಿ ಕೇವಲ 145 ರನ್​ಗಳಿಸಿದ ದುಬೆ, ಆರ್​ಆರ್​ ತಂಡದ ಇಂಪ್ಯಾಕ್ಟ್​ ಪ್ಲೇಯರ್​ ಆಗಲೇ ಇಲ್ಲ.

ಇವರಷ್ಟೇ ಅಲ್ಲ.. ಮುಂಬೈನ ಆಡಂ ಮಿಲ್ನೆ, ನಾಥನ್ ಕೌಲ್ಟರ್​-ನೈಲ್, ಪಂಜಾಬ್​ನ ಮಾಸಿಸ್ ಹೆನ್ರಿಕ್ಸ್​ ಸೇರಿದಂತೆ, ಸೂಪರ್​ಸ್ಟಾರ್​ ಆಟಗಾರರು ಕೋಟಿ ಕೋಟಿ ಹಣ ಪಡೆದು, ಫ್ಲಾಪ್ ಲಿಸ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

The post ಅರ್ಧಕ್ಕೇ ನಿಂತ ಐಪಿಎಲ್​ನಲ್ಲಿ ಕೋಟಿವೀರರ ಫ್ಲಾಪ್​ಶೋ appeared first on News First Kannada.

Source: newsfirstlive.com

Source link