ಐಪಿಎಲ್​ ಟೂರ್ನಿಗೆ ಈಗ ಬ್ರೇಕ್​ ಬಿದ್ದಿದೆ. ಆದ್ರೆ, ನಡೆದ 29 ಪಂದ್ಯಗಳು ಸಾಲಿಡ್ ಅಭಿಮಾನಿಗಳನ್ನ ರಂಜಿಸುವಲ್ಲಿ ಯಶಸ್ವಿಯಾಗಿವೆ. ಅದರಲ್ಲೂ ಈ ಐವರು ಆಟಗಾರಂತೂ ಫ್ಯಾನ್ಸ್​ಗೆ ಸಖತ್​ ಟ್ರೀಟ್​​ ನೀಡುವಲ್ಲಿ ಯಶಸ್ಸು ಕಂಡಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ ಎಂದಾಕ್ಷಣ ಮೊದಲಿಗೆ ನೆನಪಾಗೋದು ಅಬ್ಬರದ ಬ್ಯಾಟಿಂಗ್. ಬೌಂಡರಿ ಸಿಕ್ಸರ್​​ಗಳ ಅಬ್ಬರವಿಲ್ಲದೇ ಐಪಿಎಲ್​ ಅನ್ನ ಉಹಿಸಿಕೊಳ್ಳೋದು ಅಭಿಮಾನಿಗಳಿಗೆ ಸಾಧ್ಯವಿಲ್ಲ. ಈ ಆವೃತ್ತಿಗೆ ಸದ್ಯ ಅಲ್ಪ ವಿರಾಮ ಬಿದ್ದಿದ್ರೂ, ಸಿಕ್ಕ ಅವಕಾಶದಲ್ಲಿ ಮಿಂಚಿರುವ ಈ ಆಟಗಾರರು ಸಿಕ್ಸರ್​​ ಕಿಂಗ್​ಗಳಾಗಿ ಹೊರ ಹೊಮ್ಮಿದ್ದಾರೆ. ಅದರಲ್ಲೂ ಇನ್ನಿಂಗ್ಸ್​​ವೊಂದರಲ್ಲಿ ಇವರ ಪರಾಕ್ರಮಕ್ಕೆ ಬೌಂಡರಿ ಗೆರೆ ದಾಟಿದ ಬಾಲ್​ಗಳ ಲೆಕ್ಕಾಚಾರ ಇಂತಿದೆ.

ಟೂರ್ನಿಯಲ್ಲಿ ಪೊ‘ಲಾರ್ಡ್​’ ಇನ್ನಿಂಗ್ಸ್​ನ ಸಿಕ್ಸರ್​ ಕಿಂಗ್​..!
ಅನಿರ್ದಿಷ್ಟಾವಧಿಗೆ ಮುಂದೂಡಲಾಗಿರುವ ಟೂರ್ನಿಯಲ್ಲಿ ಸದ್ಯ ವಿಂಡೀಸ್​ ದಾಂಡಿಗ ಕಿರನ್​ ಪೊಲಾರ್ಡ್​​ಗೆ ಇನ್ನಿಂಗ್ಸ್​ನ ಸಿಕ್ಸರ್​ ಕಿಂಗ್​ ಪಟ್ಟ. ಚೆನ್ನೈ ಸೂಪರ್​ ಕಿಂಗ್ಸ್​​ VS ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯ ರೋಚಕತೆ ಪಡೆದಿದ್ದೇ ಪೊಲಾರ್ಡ್​ ಮನಮೋಹಕ ಬ್ಯಾಟಿಂಗ್​ನಿಂದ. ಅಂದು ಜೇಟ್ಲಿ ಅಂಗಳದಲ್ಲಿ ಅಬ್ಬರಿಸಿದ್ದ ಪೊಲಾರ್ಡ್​ ಬರೊಬ್ಬರಿ 8 ಸಿಕ್ಸರ್​ ಸಿಡಿಸಿದ್ರು. ಇದು ಈ ಆವೃತ್ತಿಯಲ್ಲಿ ಇನ್ನಿಂಗ್ಸ್​​ವೊಂದರಲ್ಲಿ ಒಬ್ಬ ಬ್ಯಾಟ್ಸ್​ಮನ್​ ಸಿಡಿಸಿದ ಅತಿ ಹೆಚ್ಚು ಸಿಕ್ಸರ್ಸ್​.

SRH ಎದುರು 8 ಸಿಕ್ಸ್​​, ಬಟ್ಲರ್​​ಗೆ 2ನೇ ಸ್ಥಾನ..!
ಸನ್​ ರೈಸರ್ಸ್​ ಹೈದ್ರಾಬಾದ್​ ವಿರುದ್ಧದ ಪಂದ್ಯದಲ್ಲಿ ಸಾಲಿಡ್​ ಬ್ಯಾಟಿಂಗ್​ ನಡೆಸಿದ ಇಂಗ್ಲೀಷ್ ಬ್ಯಾಟ್ಸ್​ಮನ್​ ಜಾಸ್​ ಬಟ್ಲರ್​​ ಆ ಇನ್ನಿಂಗ್ಸ್​ನಲ್ಲಿ ಸಿಡಿಸಿದ್ದು 8 ಸಿಕ್ಸರ್​​. ಬರೋಬ್ಬರಿ 193.75ರ ಸರಾಸರಿಯಲ್ಲಿ ಬಟ್ಲರ್​ ಅಂದು ಅಭಿಮಾನಿಗಳಿಗೆ ರಸದೌತಣ ಬಡಿಸಿದ್ರು. ಈ 8 ಸಿಕ್ಸರ್​​ಗಳ ನೆರವಿನೊಂದಿಗೆ ಚೊಚ್ಚಲ ಐಪಿಎಲ್​ ಶತಕವನ್ನೂ ಸಿಡಿಸಿದ್ರು.

ಮುಂಬೈ ವಿರುದ್ಧ ರಾಯುಡು ಅಬ್ಬರ, ಸಿಡಿದಿದ್ದು 7 ಸಿಕ್ಸ್​​..!
ಮುಂಬೈ – ಚೆನ್ನೈ ನಡುವಿನ ಪಂದ್ಯದ ಸೆಕೆಂಡ್​ ಹಾಫ್​ನಲ್ಲಿ ಪೊಲಾರ್ಡ್​​ ಘರ್ಜನೆ ಆದ್ರೆ, ಮೊದಲಾರ್ಧದಲ್ಲಿ ರಂಜಿಸಿದ್ದು ಅಂಬಟಿ ರಾಯುಡು. ಅಂದು 27 ಎಸೆತಗಳಲ್ಲಿ ಬರೋಬ್ಬರಿ 72 ರನ್​ ಸಿಡಿಸಿದ್ದ ಕ್ಲಾಸೀ ಬ್ಯಾಟ್ಸ್​ಮನ್,​ ಅದೊಂದೆ ಇನ್ನಿಂಗ್ಸ್​​ನಲ್ಲಿ 7 ಸಿಕ್ಸರ್​​ ಚಚ್ಚಿದ್ರು.

ಪಂಜಾಬ್​ ಚೇಸಿಂಗ್​ ಫೈಟ್​​ನಲ್ಲಿ ಸಂಜು ಪರಾಕ್ರಮ..!
ನಾಯಕತ್ವದ ಹೊಣೆ ಹೊತ್ತು ಟೂರ್ನಿ ಆರಂಭಿಸಿದ್ದ ಸಂಜು ಸ್ಯಾಮ್ಸನ್​ಗೆ ಮೊದಲ ಪಂದ್ಯದಲ್ಲೇ ಅಗ್ನಿ ಪರೀಕ್ಷೆ ಎದುರಾಗಿತ್ತು. ಮೊದಲು ಬ್ಯಾಟಿಂಗ್​ ನಡೆಸಿದ್ದ ಪಂಜಾಬ್ ಸವಾಲಿನ ಟಾರ್ಗೆಟ್​​​ ನೀಡಿತ್ತು. ನಾಯಕತ್ವದ ಪರೀಕ್ಷೆ, ಬಿಗ್​ ಟಾರ್ಗೆಟ್​​ ಚೇಸ್​ ಮಾಡೋ ಸವಾಲು ಈ ಎರಡರ ಒತ್ತಡದ ನಡುವೆಯೂ ನಿರಾಯಾಸವಾಗಿ ಬ್ಯಾಟ್ಸ್​ ಬೀಸಿದ್ದ ಸಂಜು ಶತಕ ಸಿಡಿಸಿ ಮಿಂಚಿದ್ರು. ಅಂದಿನ ಇನ್ನಿಂಗ್ಸ್​ನಲ್ಲಿ 7 ಸಿಕ್ಸರ್​​ಗಳೂ ಸೇರಿದ್ವು.

ರಸೆಲ್​ ಮಸಲ್​ ಪವರ್​ಗೆ ಬೆಸ್ತು ಬಿದ್ದ ಚೆನ್ನೈ ಬೌಲರ್ಸ್​​​..!
14ನೇ ಆವೃತ್ತಿಯ ಚೆನ್ನೈ-ಕೊಲ್ಕತ್ತಾ ನಡುವಿನ ಲೀಗ್​ ಟೂರ್ನಿಯನ್ನ ಅಭಿಮಾನಿಗಳು ಮರೆಯೋದು ಕಷ್ಟ ಸಾಧ್ಯ ಬಿಡಿ. ಚೆನ್ನೈನ ಸವಾಲಿಗೆ ಪ್ರತಿ ಸವಾಲು ಎಂಬಂತೆ ಪ್ಯಾಟ್​​ ಕಮಿನ್ಸ್​, ಆ್ಯಂಡ್ರೆ ರಸೆಲ್​ ಹೋರಾಡಿದ ರೀತಿ ಇಡೀ ಪಂದ್ಯಕ್ಕೆ ಹೈವೋಲ್ಟೆಜ್​ ಟಚ್​ ನೀಡಿತ್ತು. ಅಂತ್ಯದಲ್ಲಿ ಚೆನ್ನೈ ಪಂದ್ಯ ಜಯಿಸಿದ್ರೂ, ಮಸೆಲ್​ ಪವರ್​​ ತೋರಿಸಿದ್ದ ರಸೆಲ್​ ಅಭಿಮಾನಿಗಳ ಮನ ಗೆದ್ದಿದ್ರು. 22 ಎಸೆತಗಳಲ್ಲಿ 54 ರನ್​​ ಸಿಡಿಸಿದ್ದ ರಸೆಲ್​ ಇನ್ನಿಂಗ್ಸ್​ನಲ್ಲಿ 6 ಸಿಕ್ಸರ್​ ಒಳಗೊಂಡಿದ್ವು.

ಇವರಷ್ಟೇ ಅಲ್ಲ.. ಕೆಎಲ್​ ರಾಹುಲ್​, ದೇವದತ್​ ಪಡಿಕ್ಕಲ್​, ಪ್ಯಾಟ್ ಕಮಿನ್ಸ್​, ದೀಪಕ್​ ಹೂಡ, ಎಬಿ ಡಿವಿಲಿಯರ್ಸ್​ ಟಾಪ್​ 10 ಆಟಗಾರರ ಪಟ್ಟಿಯಲ್ಲಿದ್ದಾರೆ. ಆದ್ರೆ, ಟೂರ್ನಿ ಅರ್ಧಕ್ಕೆ ನಿಂತ ಪರಿಣಾಮ ವಿಂಡೀಸ್​ ದಾಂಡಿಗ ಪೋಲಾರ್ಡ್ ಸದ್ಯ 14ನೇ ಆವೃತ್ತಿಯ ಸಿಕ್ಸರ್​​ ಕಿಂಗ್​​.

The post ಅರ್ಧಕ್ಕೇ ನಿಂತ 14ನೇ ಆವೃತ್ತಿಯ ಐಪಿಎಲ್​ ಟೂರ್ನಿಗೆ ಇವರೇ ಸಿಕ್ಸರ್​​ ಕಿಂಗ್ಸ್​! appeared first on News First Kannada.

Source: newsfirstlive.com

Source link