ಅರ್ಧಶತಕ ಸಿಡಿಸಿ ಕ್ಯಾಪ್ಟನ್​ ರೋಹಿತ್​ಗೆ​ ನಮಸ್ಕರಿಸಿದ ಸೂರ್ಯಕುಮಾರ್ ಯಾದವ್


ಇಂಡೋ-ವಿಂಡೀಸ್​ ಅಂತಿಮ ಟಿ-20 ಪಂದ್ಯದಲ್ಲಿ ಟೀಮ್​ ಇಂಡಿಯಾ ಅದ್ಭುತ ಪ್ರದರ್ಶನ ತೋರಿದೆ. ಆರಂಭದಲ್ಲೇ ಟೀಮ್​ ಇಂಡಿಯಾ ಪ್ರಮುಖ ನಾಲ್ಕು ವಿಕೆಟ್​ಗಳನ್ನು ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಸೂರ್ಯಕುಮಾರ್​​ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿ ತಂಡಕ್ಕೆ ಆಸರೆಯಾದರು.

ಕಣಕ್ಕಿಳಿದ ಆರಂಭದಿಂದಲೇ ಸಿಕ್ಸರ್​ಗಳ ಸುರಿಮಳೆಗೈದ ಸೂರ್ಯಕುಮಾರ್​​, ಭರ್ಜರಿ 7 ಸಿಕ್ಸರ್​ ಮತ್ತು ಒಂದು ಬೌಂಡರಿ ನೆರವಿನಿಂದ 31 ಎಸೆತಗಳಲ್ಲಿ 65 ರನ್​ಗಳ ಅಮೋಘ ಕೊಡುಗೆ ನೀಡಿದರು. ಅಂತಿಮ ಓವರ್​​​ನ ಎರಡನೇ ಎಸೆತದಲ್ಲಿ ಸಿಕ್ಸರ್​​ ಸಿಡಿಸಿ ಕೇವಲ 28 ಎಸೆತಗಳಲ್ಲಿ ವೃತ್ತಿ ಜೀವನದ 4ನೇ ಅರ್ಧಶತಕವನ್ನೂ ಪೂರೈಸಿಕೊಂಡರು.

ಆದರೆ ಅರ್ಧಶತಕ ಸಿಡಿಸಿದ ಸಂದರ್ಭದಲ್ಲಿ ಸೂರ್ಯಕುಮಾರ್​​​ ಸಂಭ್ರಮಾಚಣೆ ಎಲ್ಲರ ಗಮನ ಸೆಳೆದಿದೆ. ಸಿಕ್ಸರ್​​ ಮೂಲಕ ಹಾಪ್​ ಸೆಂಚುರಿ ಸಿಡಿಸಿದ ಬಳಿಕ ಬ್ಯಾಟ್​ ಅನ್ನು ಮೇಲಕ್ಕೆತ್ತಿ ಡಗೌಟ್​​ನಲ್ಲಿದ್ದ ಆಟಗಾರರಿಗೆ ತೋರಿಸಿದರು. ಬಳಿಕ ಕೈ ಮುಗಿದು ತಲೆಬಾಗಿ ರೋಹಿತ್​ ಶರ್ಮಾಗೆ ನಮಸ್ಕರಿಸಿದ್ದು ವಿಶೇಷವಾಗಿತ್ತು. ಇದಕ್ಕೆ ಡಗೌಟ್​ನಿಂದಲೇ ಪ್ರತಿಕ್ರಿಯಿಸಿದ ರೋಹಿತ್​​, ನಗುತ್ತಾ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

News First Live Kannada


Leave a Reply

Your email address will not be published. Required fields are marked *