ಕೆಲವು ಆಸ್ತಿಗಳನ್ನು ಆರೋಪಿಗಳು ನಗದು ಕೊಟ್ಟು ಖರೀದಿಸಿದ್ದಾರೆ. ಇದಕ್ಕಾಗಿ ಬಳಸಿದ ಹಣದ ಮೂವ ಯಾವುದು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ.

ಅರ್ಪಿತಾ ಮುಖರ್ಜಿ
ಕೊಲ್ಕತ್ತಾ: ಶಾಲಾ ಶಿಕ್ಷಕರ ನೇಮಕಾತಿ ಹಗರಣದ ಆರೋಪಿ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಹೆಸರಲ್ಲಿ 31 ಜೀವ ವಿಮೆ ಪಾಲಿಸಿ ಇದೆ. ಈ ಪಾಲಿಸಿಗಳ ನಾಮಿನಿ ಪಾರ್ಥ ಚಟರ್ಜಿ ಆಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಅರ್ಪಿತಾ ಮತ್ತು ಪಾರ್ಥ ಚಟರ್ಜಿ 2012 ಜನವರಿ 1ರಂದು ಎಪಿಎ ಯುಟಿಲಿಟಿ ಸರ್ವೀಸಸ್ನಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಆರೋಪಿಗಳ ಈ ಪಾಲುದಾರಿಕೆಯ ಸಂಸ್ಥೆಯ ಹೆಸರಿಗೆ ಆಸ್ತಿಯನ್ನು ತರಲಾಗಿತ್ತು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಕೆಲವು ಆಸ್ತಿಗಳನ್ನು ಆರೋಪಿಗಳು ನಗದು ಕೊಟ್ಟು ಖರೀದಿಸಿದ್ದಾರೆ. ಇದಕ್ಕಾಗಿ ಬಳಸಿದ ಹಣದ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ.