ಬೆಂಗಳೂರು: ಬಿಐಎಎಪಿಎ ಅಧ್ಯಕ್ಷರಾಗಿ ಎ.ರವಿ ನೇಮಕವಾಗಿರೋದನ್ನ ಪ್ರಶ್ನಿಸಿ ಪಿಐಎಲ್ ಸಲ್ಲಿಕೆಯಾಗಿದ್ದು ಇದಕ್ಕೆ ಸಚಿವ ಆರ್. ಅಶೋಕ್ ಮತ್ತು ಶಾಸಕ ಎಸ್​.ಆರ್. ವಿಶ್ವನಾಥ್ ಅವರನ್ನ ಪ್ರತಿವಾದಿಗಳನ್ನಾಗಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ನಿಗದಿತ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಎ.ರವಿ ಅವರನ್ನ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ(ಬಿಐಎಎಪಿಎ)ಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಎ. ರವಿ ನೇಮಕಕ್ಕೆ ಶಾಸಕ, ಸಚಿವರಿಂದ ಶಿಫಾರಸು ಮಾಡಲಾಗಿದೆ ಎನ್ನಲಾಗಿದ್ದು, ಹೀಗಾಗಿ ಅವರನ್ನ ಪ್ರತಿವಾದಿಯಾಗಿಸಿ ಎಂದು ಹೈಕೋರ್ಟ್ ಹೇಳಿದೆ.

ಇಬ್ಬರ ಶಿಫಾರಸು ಪತ್ರ ಆಧರಿಸಿ ಸಿಎಂರಿಂದ ಎ. ರವಿ ನೇಮಕವಾಗಿದೆ ಎನ್ನಲಾಗಿದೆ. ಎ. ರವಿ ಆರ್.ಅಶೋಕ್ ಅವರ ಸೋದರ ಸಂಬಂಧಿ ಎಂದು ಹೇಳಲಾಗಿದೆ. ಒಬ್ಬರ ಹೆಸರನ್ನೇ ಏಕೆ ಶಿಫಾರಸು ಮಾಡಲಾಯಿತು.? ಅರ್ಹತೆ ಇರುವ ಬೇರೆ ವ್ಯಕ್ತಿಗಳನ್ನೇಕೆ ಪರಿಗಣಿಸಲಿಲ್ಲ.? ನೇಮಕಕ್ಕೆ‌ ಅರ್ಹತೆ, ಪ್ರಕ್ರಿಯೆ ಅನ್ವಯವಾಗುವುದಿಲ್ಲವೇ.? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದ್ದು, ಇದಕ್ಕೆ ಪ್ರತಿಕ್ರಿಯಿಸುವಂತೆ ನಿರ್ದೇಶಿಸಿದೆ.

The post ಅರ್ಹರಲ್ಲದಿದ್ರೂ R. ಅಶೋಕ್ ಸಂಬಂಧಿ BIAAPA ಅಧ್ಯಕ್ಷರಾಗಿ ನೇಮಕ; ಕೋರ್ಟ್ ತರಾಟೆ appeared first on News First Kannada.

Source: newsfirstlive.com

Source link