
ಧಾರ್ಮಿಕ ದತ್ತಿ ಇಲಾಖೆ
ಹಿಂದೂ ಧರ್ಮ ಪರಂಪರೆಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಅರ್ಹತೆ ಇಲ್ಲದಿದ್ರೂ ಸ್ವಯಂಘೋಷಿತ ಬಿರುದು ಹಾಕಿಕೊಳ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬುವವರು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದರು.
ಬೆಂಗಳೂರು: ಸ್ವಯಂ ಘೋಷಿತ ಸ್ವಾಮೀಜಿಗಳಿಗೆ ಕಡಿವಾಣ ಹಾಕಲು ಧಾರ್ಮಿಕ ದತ್ತಿ ಇಲಾಖೆ ಮುಂದಾಗಿದೆ. ಇನ್ನುಮುಂದೆ ಅರ್ಹರಲ್ಲದ ಸ್ವಯಂ ಘೋಷಿತ ಸ್ವಾಮೀಜಿಗಳಿಗೆ ಸಂಕಷ್ಟ ಎದುರಾಗಲಿದೆ. ಸುಖಾಸುಮ್ಮನೇ ಹೆಸರು ಮುಂದೆ ಬಿರುದು ಹಾಕಿಕೊಂಡ್ರೆ ಕೇಸ್? ಬೀಳಲಿದೆ. ಇನ್ಮುಂದೆ ತಮಗಿಷ್ಟ ಬಂದಂತೆ ಭಗವಾನ್, ಮಹರ್ಷಿ, ಅವಧೂತ ಎಂದು ಬಳಸುವಂತಿಲ್ಲ. ಬೆಂಗಳೂರಿನಲ್ಲಿ ಸಾಮಾಜಿಕ ಕಾರ್ಯಕರ್ತರ ದೂರಿನ ಹಿನ್ನೆಲೆ ಎಚ್ಚೆತ್ತ ಧಾರ್ಮಿಕ ದತ್ತಿ ಇಲಾಖೆ ಸ್ವಯಂಘೋಷಿತ ಸ್ವಾಮೀಜಿಗಳ ಅರ್ಹತೆ ಕುರಿತು ಪರಿಶೀಲನೆ ನಡೆಸಲು ನಿರ್ಧರಿಸಿದೆ. ಆಗಮ ಪಂಡಿತರಿಂದ ವರದಿ ಪಡೆಯಲು ಇಲಾಖೆ ಮುಂದಾಗಿದ್ದು ವರದಿ ತರಿಸಲು ಅಧಿಕಾರಿಗಳಿಗೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಹಿಂದೂ ಧರ್ಮ ಪರಂಪರೆಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಅರ್ಹತೆ ಇಲ್ಲದಿದ್ರೂ ಸ್ವಯಂಘೋಷಿತ ಬಿರುದು ಹಾಕಿಕೊಳ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬುವವರು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದರು. ದೂರಿನ ಬಳಿಕ ಎಚ್ಚೆತ್ತ ಇಲಾಖೆ ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಹರ್ಷಿ, ಜಗದ್ಗುರು, ಪರಮಹಂಸ, ಅವಧೂತ, ವೇದಧೂತ ಎಂಬ ಹತ್ತು ಹಲವು ಹೆಸರುಗಳಿಂದ ಕೆಲವರು ಸ್ವಯಂ ಬಿರುದು ಘೋಷಿಸಿಕೊಳ್ಳುತ್ತಿದ್ದಾರೆ. ಇದರಿಂದ ಹಿಂದೂ ಧರ್ಮ ಪಾವಿತ್ರ್ಯಗೆ ಧಕ್ಕೆಯಾಗುವ ಆತಂಕವಿದೆ. ಸ್ವಯಂಘೋಷಿತ ಶ್ರೀಗಳಿಂದ ಅರ್ಹತೆ ಇಲ್ಲದಿದ್ರೂ ಬಿರುದುಗಳಿಂದ ಕರೆಸಿಕೊಂಡು ನಿಜವಾದ ಧರ್ಮ ಗುರುಗಳಿಗೆ ಅಪಚಾರ ಮಾಡುತ್ತಿದ್ದಾರೆ. ಈ ಕುರಿತು ಧಾರ್ಮಿಕ ದತ್ತಿ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾಯಿದತ್ತ ದೂರಿನಲ್ಲಿ ಮನವಿ ಮಾಡಿದ್ದಾರೆ.