ಬೆಂಗಳೂರು: ಸಾರ್ವತ್ರಿಕ ಚುನಾವಣೆ ಹತ್ತಿರವಾಗ್ತಿದ್ದಂತೆ ಹಸ್ತಪಾಳಯ ಅಲರ್ಟ್ ಆಗಿದೆ. ದಳಪತಿಗಳು ಹೆಣೆದಿರುವ ಮುಸ್ಲಿಂ ತಂತ್ರಕ್ಕೆ ಕೈ ಪಡೆ ಪ್ರತಿತಂತ್ರ ಹೆಣೆದಿದೆ. ಜೆಡಿಎಸ್ ತಂತ್ರದಿಂದ ಮೈಕೊಡವಿ ಎದ್ದಿರುವ ಕಾಂಗ್ರೆಸ್ ಸೇನೆ, ಅಲ್ಪಸಂಖ್ಯಾತ ಮತ ಕೈಬಿಟ್ಟು ಹೋಗದಂತೆ ಮಾಡಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ.
ಕಳೆದ ಎರಡು ಉಪಚುನಾವಣೆಗಳಲ್ಲಿ ದಳದ ತಂತ್ರಗಾರಿಕೆಗಳು ಬದಲಾಗಿವೆ. ಈ ತಂತ್ರಗಳೇ ಕಾಂಗ್ರೆಸ್ಗೆ ಆತಂಕ ಹುಟ್ಟಿಸಿವೆ. ತನ್ನ ಮತಬುಟ್ಟಿಯಲ್ಲಿರುವ ಹಣ್ಣನ್ನು ಕಳೆದುಕೊಳ್ಳುವ ಭೀತಿ ಕಾಂಗ್ರೆಸ್ಗೆ ಆವರಿಸಿದೆ. ದಳಪತಿ ಹಾಕಿರುವ ಲೆಕ್ಕಾಚಾರ ಪಲ್ಟಿ ಮಾಡಲು ಈಗ ಕೈ ಪಡೆ ಹೊಸ ಪಡೆ ರಚಿಸ್ತಿದೆ.
ದಳಪತಿಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆದ ಹಸ್ತ ಪಾಳಯ
ಮುಸ್ಲಿಂ ಮತ ಕೈತಪ್ಪಬಾರದೆಂದು ಈಗಲೇ ಅಲರ್ಟ್
ಸಾರ್ವತ್ರಿಕ ಚುನಾವಣೆಗೂ ಮುನ್ನ ಎಚ್ಚೆತ್ತುಕೊಂಡ ಕೈಪಡೆ ಜೆಡಿಎಸ್ ತಂತ್ರದಿಂದ ಮೈಕೊಡವಿ ಎದ್ದಿದೆ. ಅಲ್ಪಸಂಖ್ಯಾತ ಮತ ಕೈಬಿಟ್ಟು ಹೋಗದಂತೆ ತಂತ್ರಗಾರಿಕೆ ರೂಪಿಸಿರುವ ಹಸ್ತ ಪಾಳಯ ಮುಸ್ಲಿಂ ಮತಗಳು ಕೈತಪ್ಪಬಾರದೆಂದು ಈಗಲೇ ಅಲರ್ಟ್ ಆದಂತಿದೆ. ಇದಕ್ಕೆ ಸಾರ್ವತ್ರಿಕ ಬೇರೆ ಉಪ ಕದನವೇ ಬೇರೆ ಎಂಬ ಲೆಕ್ಕಚಾರ ಕೂಡ ಇದೆ.
ದಳಪತಿ ತಂತ್ರದಿಂದ ಕೈಗೆ ನಡುಕ!
- ಆತಂಕ 1 : ಕರ್ನಾಟಕದಲ್ಲಿ ಸುಮಾರು ಶೇ.18ರಷ್ಟಿರುವ ಮುಸ್ಲಿಂ ಮತಗಳು
- ಆತಂಕ 2 : 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿರುವ ಮತಗಳು
- ಆತಂಕ 3 : 2023ರಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಂರಿಗೆ ದಳ ಟಿಕೆಟ್
- ಆತಂಕ 4 : ಬಸವ ಕಲ್ಯಾಣ, ಸಿಂದಗಿ, ಹಾನಗಲ್ನಲ್ಲಿ ಜೆಡಿಎಸ್ ಪ್ರಯೋಗ
- ಆತಂಕ 5 : ಬಸವ ಕಲ್ಯಾಣದಲ್ಲಿ ಸಫಲ, ಸಿಂದಗಿ, ಹಾನಗಲ್ನಲ್ಲಿ ವಿಫಲ
- ಆತಂಕ 6 : ಉಪ ಚುನಾವಣೆಯಲ್ಲಿ ದಳದ ಬೆನ್ನಿಗೆ ನಿಲ್ಲದ ಮುಸ್ಲಿಂ ಮತ
- ಆತಂಕ 7 : ಸಾರ್ವತ್ರಿಕ ಚುನಾವಣೆ ವೇಳೆ ಕೈಪಡೆಗೆ ಯಡವಟ್ಟಾಗಬಾರದು
ದಳಪತಿಯ ಈ ಲೆಕ್ಕಾಚಾರಗಳಿಂದ ಎಚ್ಚೆತ್ತಿರುವ ಕಾಂಗ್ರೆಸ್ ತನ್ನ ಸಂಕಷ್ಟ ನಿವಾರಣೆಗೂ ಕೆಲ ಪ್ಲ್ಯಾನ್ಗಳನ್ನು ಮಾಡಿಕೊಂಡಿದೆ.
ಕೈಪಡೆ ಸಂಕಷ್ಟ ನಿವಾರಣೆ ಜಪ!
- ಪ್ಲಾನ್ 1 : ದಳ ಎಷ್ಟೇ ಕ್ಷೇತ್ರಗಳಿಗೆ ಮುಸ್ಲಿಂ ಅಭ್ಯರ್ಥಿ ಹಾಕಿದ್ರೂ ಠಕ್ಕರ್
- ಪ್ಲಾನ್ 2 : ಪಕ್ಷದ ಮುಸ್ಲಿಂ ನಾಯಕರಿಗೆ ಹೆಚ್ಚಿನ ಹೊಣೆ ನೀಡಲು ಪ್ಲಾನ್
- ಪ್ಲಾನ್ 3 : ಭವಿಷ್ಯದಲ್ಲಿ ಮುಸ್ಲಿಂ ಮತ ಕೈ ಬಿಟ್ಟು ಹೋಗದಂತೆ ತಂತ್ರ
- ಪ್ಲಾನ್ 4 : ಇದೇ ತಿಂಗಳ 16ರಂದು ಮುಸ್ಲಿಂ ಘಟಕದ ಪದಗ್ರಹಣ ಸಭೆ
- ಪ್ಲಾನ್ 5 : ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರನ್ನು ಸೇರಿಸಿ ಶಕ್ತಿ ಪ್ರದರ್ಶನ
ಒಟ್ಟಾರೆ ತನ್ನ ಭದ್ರ ಮತಬ್ಯಾಂಕ್ ಅನ್ನು ಉಳಿಸಿಕೊಳ್ಳಲು ಹೊಣೆಗಾರಿಕೆಗಳನ್ನ ಕಾಂಗ್ರೆಸ್ ಹಂಚಿಕೆ ಮಾಡ್ತಿದೆ. ಆದ್ರೆ ಇದು ಭವಿಷ್ಯದಲ್ಲಿ ಎಷ್ಟು ಫಲ ನೀಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.