ಅಲ್ಪಸಂಖ್ಯಾತ ಮತಗಳನ್ನು ಒಗ್ಗೂಡಿಸಲು RSS ಮೇಲೆ ದಾಳಿ? ವಿಪಕ್ಷಗಳ ಪ್ಲಾನ್​ ಏನು?

ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಾನಗಲ್​ ಮತ್ತು ಸಿಂಧಗಿ ಕ್ಷೇತ್ರಗಳಲ್ಲಿ ಚುನಾವಣಾ ಕಾವು ಜೋರಾಗಿದೆ. ಈಗಾಗಲೇ ಮೂರು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣಾ ತಂತ್ರಗಾರಿಕೆ ರೂಪಿಸುತ್ತಿವೆ. ಅದರ ಬೆನ್ನಲ್ಲೇ ವಿಪಕ್ಷಗಳಾದ ಕಾಂಗ್ರೆಸ್​ ಮತ್ತು ಜೆಡಿಎಸ್​ ಈ ಬಾರಿಯ ಉಪ ಚುನಾವಣೆಯಲ್ಲಿ ಆರ್​ಎಸ್​ಎಸ್​ ಅನ್ನೇ ಚುನಾವಣಾ ದಾಳವಾಗಿ ಬಳಸಿಕೊಳ್ಳುತ್ತಿವೆ ಎಂದು ಹೇಳಲಾಗುತ್ತಿದೆ.

ಹೌದು ಬೈ ಎಲೆಕ್ಷನ್​ನಲ್ಲಿ ಅಲ್ಪಸಂಖ್ಯಾತರ ವೋಟ್ ಗಾಗಿ RSS ನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನಲಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಬೈ ಎಲೆಕ್ಷನ್ ಕ್ಯಾಂಪೇನ್ ಗೆ ಆರ್​ಎಸ್​ಎಸ್ ಪ್ರಮುಖ ಅಸ್ತ್ರವಾಗಿ ಅಲ್ಪಸಂಖ್ಯಾತರ ವೋಟ್ ಸೆಳೆಯಲು ಬಳಕೆಯಾಗುತ್ತಿದೆ ಎಂಬುದಕ್ಕೆ ಇತ್ತೀಚಿಗೆ ವಿಪಕ್ಷ ನಾಯಕರುಗಳು ಆರ್​ಎಸ್​ಎಸ್ ನ ಮೇಲೆ ನಡೆಸಿರುವ ವಾಗ್ದಾಳಿಗಳೇ ಸಾಕ್ಷಿ.

ಹಿಂದಿನ ಚುನಾವಣೆಯಲ್ಲಿ ಬಿಜೆಪಿಯನ್ನೇ ಟಾರ್ಗೆಟ್ ಮಾಡಿಕೊಂಡು ಬರುತ್ತಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್, ಇದೀಗ ಟರ್ನ್​ ತೆಗೆದುಕೊಂಡು ಆರ್​ಎಸ್​ಎಸ್ ಮೇಲೆ ಮುಗಿಬೀಳುತ್ತಿವೆ. ದಿನಕ್ಕೊಬ್ಬರಂತೆ ವಿಪಕ್ಷ ನಾಯಕರುಗಳು RSS ಮೇಲೆ ಕೆಂಡಾಮಂಡಲವಾಗುತ್ತಿದ್ದಾರೆ.

ಇನ್ನು ಹಿಂದೂತ್ವದ ಅಜೆಂಡಾ ಪ್ರತಿಪಾದಿಸುತ್ತಿರುವ ಬಿಜೆಪಿ ಇತ್ತೀಚೆಗೆ ಅಲ್ಪಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದ್ದು ಭಾಜಪದ ತೀವ್ರ ಹಿಂದೂತ್ವದ ಅಜೆಂಡಾದಿಂದ ಅಲ್ಪಸಂಖ್ಯಾತರು ಆತಂಕಕ್ಕೀಡಾಗಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಇದನ್ನೇ ಎನ್ಕಾಶ್​ ಮಾಡಿಕೊಳ್ಳಲು ಮುಗಿಬಿದ್ದಿರುವ ವಿಪಕ್ಷಗಳು ಆರ್​ಎಸ್​ಎಸ್ ವಿರುದ್ಧ ಮಾತನಾಡೋದರ ಮೂಲಕ ನಾವು ಅಲ್ಪಸಂಖ್ಯಾತರ ಪರ ಎಂದು ಬಿಂಬಿಸಿಕೊಳ್ಳಲು ಯತ್ನ ನಡೆಸಿವೆಯಾ ಎಂಬ ಸಂಶಯ ಮೂಡಿಸುತ್ತಿವೆ.

ಹೀಗೆ ಚದುರಿದ ಅಲ್ಪಸಂಖ್ಯಾತರ ಮತಗಳನ್ನು ಒಟ್ಟುಗೂಡಿಸಲು ಜೆಡಿಎಸ್, ಕಾಂಗ್ರೆಸ್ ತಂತ್ರ ರೂಪಿಸಿ ಹಣಾಹಣಿಗೆ ಬಿದ್ದಿದ್ದು ಬೈ ಎಲೆಕ್ಷನ್​ ಬಳಿಕ ಸಾರ್ವತ್ರಿಕ ಚುನಾವಣೆ‌ ಗೆಲ್ಲಲು ವಿಪಕ್ಷಗಳು ಪ್ಲಾನ್​ ಮಾಡಿಕೊಂಡಿವೆಯಂತೆ.

ಇದನ್ನೂ ಓದಿ:‘ದೇಶದಲ್ಲಿ ಸಂಘದ 4000 IAS/IPS ಅಧಿಕಾರಿಗಳಿದ್ದಾರೆ; RSS ಆರ್ಭಟ ಹೆಚ್ಚಾಗ್ತಿದೆ’ HDK ಗಂಭೀರ ಆರೋಪ

ಇದನ್ನೂ ಓದಿ:ದೇಶ ಅಧೋಗತಿಗೆ ಹೋಗಲು ಬಿಜೆಪಿ, ಕಾಂಗ್ರೆಸ್​ನ ಸ್ವಯಂಕೃತ ಅಪರಾಧ ಕಾರಣ : ಹೆಚ್​ಡಿಕೆ ಕಿಡಿ

News First Live Kannada

Leave a comment

Your email address will not be published. Required fields are marked *