ಬೆಂಗಳೂರು: ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದ ಮೇಲೆ ಡಾ.ವಿಷ್ಣುವರ್ಧನ್ ಅವರ ಹೆಸರು ಹಾಕದೇ ಇರೋದಕ್ಕೆ ಅನಿರುದ್ಧ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅನಿರುದ್ಧ ಅವರು, ಕಲಾವಿದರ ಸಂಘದ ಕಟ್ಟಡದ ಮೇಲೆ ಡಾ.ರಾಜ್ ಕುಮಾರ್ ಭವನ ಹಾಗೂ ಡಾ.ಅಂಬರೀಶ್ ಆಡಿಟೋರಿಯಂ ಎಂದು ಹೆಸರನ್ನ ಬಳಸಲಾಗಿದೆ. ಇದನ್ನೂ ನೋಡಿ ಸಂತಸ ಆಗಿದೆ. ಆದರೆ ಇದೇ ವೇಳೆ ಸಹಾಸ ಸಿಂಹ ವಿಷ್ಣುವರ್ಧನ್​ ಅವರ ಹೆಸರು ಇಲ್ಲದಿರುವುದು ಅಷ್ಟೇ ಬೇಸರ ಉಂಟು ಮಾಡಿದೆ.

ವಿಷ್ಣುವರ್ಧನ್ ಅವರು ಯಾವುದನ್ನ ಎಕ್ಸ್​​ಪೆಕ್ಟ್ ಮಾಡ್ತಿದ್ದಿಲ್ಲ , ಎಲ್ಲವನ್ನು ಅಕ್ಸ್​ಪೆಟ್ ಮಾಡುತ್ತಿದ್ದವರು. ಆದರೆ ಅಪ್ಪಾಜಿಯವರಿಗೆ ಸಿಗೋ ಗೌರವ ಸಿಗಲೇ ಬೇಕು. ಇದು ನನ್ನ ಮತ್ತು ಅಭಿಮಾನಿಗಳ ಬೇಡಿಕೆ. ಡಾ.ರಾಜ್ ಕುಮಾರ್ ಅವರಿಗೆ ಸಲ್ಲೋ ಗೌರವ ಸಲ್ಲಬೇಕು. ಅದೇ ರೀತಿ ಡಾ.ವಿಷ್ಣುವರ್ಧನ್ ಅವರಿಗೂ ಸಲ್ಲುವ ಗೌರವ ಸಲ್ಲಲೇ ಬೇಕು.

ಈ ಹಿಂದೆ ಫಿಲ್ಮ್ ಚೆಂಬರ್​​ನಲ್ಲೂ  ಪ್ರತಿಮೆ ಇಡೋದಕ್ಕೂ ಇದೇ ರೀತಿ ಭೇದ ಭಾವ ಮಾಡಿದ್ದರು. ಪುತ್ತಳಿ  ಇಡಬೇಕು ಎಂದರೇ ಅಭಿಮಾನಿಗಳ ಸಹಿ ಸಂಗ್ರಹ ಮಾಡಬೇಕು ಎಂದರು, ಅದನ್ನೂ ಮಾಡಿದ್ದೇನೆ. ಈಗಲೂ ಫಿಲ್ಮ್ ಚೇಂಬರ್​​​​ನಲ್ಲಿ ವಿಷ್ಣು ಅವರ ಪುತ್ತಳಿ ಇಟ್ಟಿಲ್ಲ. ಅಧಿಕೃತವಾಗಿ ಅಧ್ಯಕ್ಷರಾಗಿರಲಿಲ್ಲ, ಆದ್ರೆ ಕಲಾವಿದರ ಸಂಘದ ಅನೇಕ ಕೆಲಸ ಕಾರ್ಯಗಳಿಗೆ ಅವರೇ ಮುಂದು ನಿಂತು ಮಾಡಿದ್ದಾರೆ. ಬಹಳಷ್ಟು ಬಾರಿ ಸಲಹೆ ಸೂಚನೆಯನ್ನ ನೀಡಿದ್ದಾರೆ. ಆದರೂ ವಿಷ್ಣು ಅವರ ಹೆಸರು ಯಾಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

The post ‘ಅಲ್ಲಿ ರಾಜ್​ಕುಮಾರ್​, ಅಂಬರೀಶ್​​ರ ಹೆಸರಿದೆ.. ವಿಷ್ಣುವರ್ಧನ್​​ ಹೆಸಱಕಿಲ್ಲ’ -ಅನಿರುದ್ಧ್ ಬೇಸರ appeared first on News First Kannada.

Source: newsfirstlive.com

Source link