ಕೊಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ತಮ್ಮ ಅಳಿಯ ಅಭಿಷೇಕ್ ಬ್ಯಾನರ್ಜಿಯನ್ನ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಇಂದು ನಡೆಸಿದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ, ಇನ್ನು ಸಭೆಯಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸಹ ಭಾಗಿಯಾಗಿದ್ದರು ಎನ್ನಲಾಗಿದೆ. ಇನ್ನು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಟಿಎಂಸಿ ನಾಯಕ ಪಾರ್ಥ ಚಟರ್ಜೀ ಪಾರ್ಟಿಯ ವರ್ಕಿಂಗ್ ಕಮಿಟಿ ಒನ್ ಪರ್ಸನ್ ಒನ್ ಪೋಸ್ಟ್ (ಓರ್ವ ವ್ಯಕ್ತಿ, ಒಂದೇ ಸ್ಥಾನ) ಫಾರ್ಮುಲಾ ನೀತಿಗೆ ನಿರ್ಧರಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಇದೇ ಮೀಟಿಂಗ್​ನಲ್ಲಿ ಪತ್ರಕರ್ತನಾಗಿ ನಂತರ ರಾಜಕೀಯಕ್ಕೆ ಧುಮುಕಿದ ಕುನಾಲ್ ಘೋಷ್ ಅವರನ್ನ ಟಿಎಂಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಇನ್ನು ಸಯೋನಿ ಘೋಷ್​ ಅವರನ್ನ ಯೂತ್ ವಿಂಗ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ದೀದಿ ಅಳಿಯ ಅಭಿಷೇಕ್ ಈ ಸ್ಥಾನ ನಿರ್ವಹಿಸುತ್ತಿದ್ದರು.

The post ಅಳಿಯ ಅಭಿಷೇಕ್ ಬ್ಯಾನರ್ಜಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಕೊಟ್ಟ ದೀದಿ appeared first on News First Kannada.

Source: newsfirstlive.com

Source link