ಅವಕಾಶಕ್ಕಾಗಿ ಕಾಯ್ತಿರುವ ಆಟಗಾರರಿಗೆ ಶರ್ಮಾ ಹೇಳಿದ ಕಿವಿ ಮಾತು ಏನು..?


ಇಂಜುರಿಗೆ ತುತ್ತಾಗಿ ಟೀಮ್​ ಇಂಡಿಯಾದಿಂದ ಪ್ರಮುಖ ಆಟಗಾರರೇ ಹೊರ ಬಿದ್ದಿದ್ದಾರೆ. ಅದರ ಬೆನ್ನಲ್ಲೇ ಇವರಿಗೆಲ್ಲಾ ವಿಶ್ವಕಪ್​ ಆಡೋ ಅವಕಾಶ ಬಹುತೇಕ ಅಸಾಧ್ಯ ಎನ್ನಲಾಗ್ತಿದೆ. ಆದ್ರೆ, ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಇವರೆಲ್ಲರಿಗೂ ಎಲ್ಲಾ ಉಹಾಪೋಹಗಳನ್ನ ತಳ್ಳಿ ಹಾಕಿ ಡ್ರಾಪ್​ ಔಟ್​ ಆದ ಆಟಗಾರರಿಗೆ ಗುಡ್​ನ್ಯೂಸ್​​ ನೀಡಿದ್ದಾರೆ.

ನಿನ್ನೆಯಿಂದ ಆರಂಭವಾಗಿರುವ ಇಂಡೋ-ವೆಸ್ಟ್​​ ಇಂಡೀಸ್​​ ಸೀರಿಸ್​ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದ್ರೆ, ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​​ ಮಾತ್ರ ವಿಶ್ವಕಪ್​ ಅನ್ನ ಟಾರ್ಗೆಟ್​​ ಮಾಡಿದೆ. ಅದಕ್ಕಾಗೇ ಈಗಿನಿಂದಲೇ ಗೇಮ್​ ಪ್ಲಾನ್​, ಸ್ಟಾರ್ಟಜಿಗಳನ್ನ ರೂಪಿಸ್ತಿದ್ದು, ತಂಡದ ಆಯ್ಕೆಗೆ ಈಗಿನಿಂದಲೇ ಅಡಿಪಾಯ ಹಾಕ್ತಿದೆ. ಅದರಲ್ಲೂ ನಾಯಕ ರೋಹಿತ್​ ಶರ್ಮಾ ಈ ವಿಚಾರದಲ್ಲಿ ಸ್ಪಷ್ಟತೆ ಬಂದಿದ್ದು, ತಂಡದಿಂದ ಹೊರಗುಳಿದಿರೋ ಆಟಗಾರರಿಗೆ ಸಂದೇಶವೊಂದನ್ನ ರವಾನಿಸಿದ್ದಾರೆ.

ಎಲ್ಲರಿಗೂ ಮುಕ್ತವಾಗಿದೆ ಅವಕಾಶ..!
ಯೆಸ್​​.. ಈ ಮಾತನ್ನ ಹೇಳಿದ್ದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ. ವಿಂಡೀಸ್​ ವಿರುದ್ಧದ ಟಿ20 ಸರಣಿಯ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವಕಪ್​ ಪ್ಲಾನಿಂಗ್​ ರೋಹಿತ್​ ಮಾತನಾಡಿದ್ರು. ಇದೇ ವೇಳೆ ಎದುರಾದ ಟೀಮ್​ ಕಾಂಬಿನೇಷನ್​ ಪ್ರಶ್ನೆಗೆ ಹಿಟ್​ಮ್ಯಾನ್​ ನೇರವಾದ ಉತ್ತರ ನೀಡಿದ್ದು, ಎಲ್ಲರಿಗೂ ಆಯ್ಕೆ ಮುಕ್ತವಾದ ಅವಕಾಶವಿದೆ ಎಂದಿದ್ದಾರೆ. ಈ ಮೂಲಕ ಇಂಜುರಿಗೆ ತುತ್ತಾಗಿ ತಂಡದಿಂದ ಹೊರಗಿರುವ ಆಟಗಾರರಿಗೂ ಆಯ್ಕೆಯ ಅವಕಾಶವಿದೆ ಅನ್ನೋ ಸೂಚನೆ ನೀಡಿದ್ದಾರೆ.

ಫಿಟ್​​ನೆಸ್​ ಟೆಸ್ಟ್​ ಪಾಸ್​ ಆದ್ರೆ ತಂಡದಲ್ಲಿ ಸ್ಥಾನ ಫಿಕ್ಸ್​
ಹಾರ್ದಿಕ್​ ಪಾಂಡ್ಯ, ವಾಷಿಂಗ್ಟನ್​ ಸುಂದರ್​, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​, ಶುಭ್​ಮನ್​ ಗಿಲ್​, ನಟರಾಜನ್​ ಹೀಗೆ ಪ್ರಮುಖ ಆಟಗಾರರು ಇದೀಗ ತಂಡದಿಂದ ಹೊರಗುಳಿದಿದ್ದಾರೆ. ಇವರೆಲ್ಲಾ ಇಂಜುರಿಗೆ ತುತ್ತಾದ ಬೆನ್ನಲ್ಲೇ, ಇವರ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಅದರಲ್ಲೂ ಮುಂಬರುವ ವಿಶ್ವಕಪ್ ದೃಷ್ಟಿಯಿಂದ​ ಹಾಟ್​​ ಸಬ್ಜೆಕ್ಟ್​ ಆಗಿ ಮಾರ್ಪಟ್ಟಿದೆ. ಇದೀಗ ರೋಹಿತ್​ ಶರ್ಮಾನೇ ಈ ಡಿಬೇಟ್​​ಗೆ ಬ್ರೇಕ್​ ಹಾಕಿದ್ದು ಫಿಟ್​​ನೆಸ್​​ ಅಗ್ನಿ ಪರೀಕ್ಷೆ ಗೆದ್ದಿದ್ದೆ ಆದ್ರೆ, ಚಾನ್ಸ್​ ಸಿಗೋ ಸಾಧ್ಯತೆ ಹೆಚ್ಚಿದೆ.

ಫಿಟ್​ನೆಸ್​ ಮಾತ್ರವಲ್ಲ ಫಾರ್ಮ್​ ಕೂಡ ನಿರ್ಣಾಯಕ..!
ಫಿಟ್​ನೆಸ್​​ ಮಾತ್ರವಲ್ಲ.. ಫಾರ್ಮ್​ ಕೂಡ ಇಲ್ಲಿ ನಿರ್ಣಾಯಕವಾಗಲಿದೆ. ತಮ್ಮ ಸಾಮರ್ಥ್ಯವನ್ನ ನಿರೂಪಿಸಿ ಆಯ್ಕೆಗಾರರನ್ನ ಇಂಪ್ರೆಸ್​ ಮಾಡಲೇಬೇಕಿದೆ. ಇದಕ್ಕಿರೋ ಉತ್ತಮ ವೇದಿಕೆ ಅಂದ್ರೆ, ಅದು ಮಾರ್ಚ್​​ನಿಂದ ಅಂತ್ಯದಿಂದ ಆರಂಭವಾಗಲಿರೋ ಐಪಿಎಲ್​. ಈ ಬಿಲಿಯನ್​ ಡಾಲರ್​​ ಟೂರ್ನಿಯಲ್ಲಿ ಅಬ್ಬರಿಸಿ, ಫಿಟ್​ನೆಸ್​​​ ಅಗ್ನಿಪರೀಕ್ಷೆಯನ್ನೂ ಗೆದ್ರೆ ಮಾತ್ರ, ಅವಕಾಶ ಸಿಗಲಿದೆ.

ಒಟ್ಟಿನಲ್ಲಿ ರೋಹಿತ್​ ಶರ್ಮಾ ಎಲ್ಲರಿಗೂ ವಿಶ್ವಕಪ್​ ಆಡೋ ಅವಕಾಶವಿದೆ ಅನ್ನೋ ಸಂದೇಶವನ್ನೆನೋ ರವಾನಿಸಿದ್ದಾರೆ. ಆದ್ರೆ, ವಿಶ್ವಕಪ್​ಗೆ ಇನ್ನು ಕೆಲವೇ ಕೆಲವು ತಿಂಗಳುಗಳು ಮಾತ್ರ ಉಳಿದಿರುವ ಈ ಸಂದರ್ಭದಲ್ಲಿ ಫರ್ಪೆಕ್ಟ್​ ಪ್ಲೇಯಿಂಗ್​ ಇಲೆವೆನ್​ ಫಿಕ್ಸ್​ ಮಾಡೋದ್ರ ಬದಲು, ಪ್ರಯೋಗಕ್ಕೆ ಟೀಮ್​ ಇಂಡಿಯಾ ಮುಂದಾಗ್ತಿದೆ. ಈ ನಡೆ ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆಯೂ ಇಲ್ಲಿ ಹುಟ್ಟಿದೆ.

News First Live Kannada


Leave a Reply

Your email address will not be published. Required fields are marked *