ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ಮನರಂಜನೆಗೆ ಯಾವುದೇ ಕೊರತೆ ಇರುವುದಿಲ್ಲ. ಶರಣ್ ಸಿನಿಮಾಗಳಲ್ಲೂ ಅಷ್ಟೇ. ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಕಲೆ ಅವರಿಗೆ ಕರಗತವಾಗಿದೆ. ಈಗ ಇಬ್ಬರೂ ‘ಅವತಾರ ಪುರುಷ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾಗೆ ಆಶಿಕಾ ರಂಗನಾಥ್ ನಾಯಕಿ. ಸಿನಿಮಾ ಬಗ್ಗೆ ಮಾಹಿತಿ ನೀಡೋಕೆ ಇಡೀ ಚಿತ್ರತಂಡ ಮಾಧ್ಯಮದ ಎದುರು ಹಾಜರಾಗಿತ್ತು. ಸಿನಿಮಾದಲ್ಲಿ ಏನೆಲ್ಲ ಇದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು ಶರಣ್. ‘ನನ್ನ ಉಳಿದ ಸಿನಿಮಾಗಳಲ್ಲಾದರೆ ನನಗೆ ಒಂದೇ ಪಾತ್ರ. ಆದರೆ, ಇದರಲ್ಲಿ ಹಾಗಿಲ್ಲ. ನಾನು ನಾನಾ ಅವತಾರ ತಾಳಿದ್ದೇನೆ. ಹೀಗಾಗಿ ಇದರಲ್ಲಿ ಬರುವ ಪಾತ್ರ ಎಲ್ಲರಿಗೂ ಕನೆಕ್ಟ್ ಆಗುತ್ತದೆ’ ಎನ್ನುವ ಮಾತನ್ನು ಹೇಳಿದರು ಅವರು. ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಇದನ್ನೂ ಓದಿ: ಸಖತ್ ಆಗಿದೆ ‘ಸಖತ್’ ಟೀಸರ್; ಪ್ರೇಕ್ಷಕರ ತಲೆಗೆ ಕುತೂಹಲದ ಹುಳ ಬಿಟ್ಟ ಗಣೇಶ್, ಸಿಂಪಲ್ ಸುನಿ