ಅವಧಿಗೂ ಮುನ್ನ ಎಫ್​ಡಿ ವಾಪಸ್ ಪಡೆದರೆ ದಂಡ; ಇಲ್ಲಿದೆ ವಿವರ – Withdrawing Fixed Deposits Before Maturity Banks may impose Penalty and fee know how much to you pay for bank personal finance news in Kannada


Premature withdrawal; ಅನಿವಾರ್ಯ ಸಂದರ್ಭಗಳು ಎದುರಾದರೆ ಎಫ್​ಡಿಯನ್ನು ಅವಧಿಪೂರ್ವ ಹಿಂತೆಗೆಯಲು ಅವಕಾಶವಿದೆ. ಆದರೆ, ಇದಕ್ಕಾಗಿ ಬ್ಯಾಂಕ್​ಗಳು ದಂಡ ಅಥವಾ ವಿವಿಧ ಶುಲ್ಕಗಳನ್ನು ವಿಧಿಸುವ ಸಾಧ್ಯತೆ ಇದೆ. ಈ ಕುರಿತ ವಿವರ ಇಲ್ಲಿ ನೀಡಲಾಗಿದೆ.

ಅವಧಿಗೂ ಮುನ್ನ ಎಫ್​ಡಿ ವಾಪಸ್ ಪಡೆದರೆ ದಂಡ; ಇಲ್ಲಿದೆ ವಿವರ

ಸಾಂದರ್ಭಿಕ ಚಿತ್ರ

ಸ್ಥಿರ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (Fixed Deposit) ಅತ್ಯಂತ ಸುಭದ್ರ ಮತ್ತು ಅಪಾಯರಹಿತ ಹೂಡಿಕೆ ಯೋಜನೆ. ಈ ಮಾದರಿಯಯಲ್ಲಿ ನಿರ್ದಿಷ್ಟ ಮೊತ್ತವೊಂದನ್ನು ನಿಗದಿತ ಅವಧಿಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇಡಬೇಕಾಗುತ್ತದೆ. ಅಂದರೆ, ನಿರ್ದಿಷ್ಟ ಅವಧಿಗೂ ಮುನ್ನ ಠೇವಣಿಯನ್ನು ವಾಪಸ್ ಪಡೆಯುವಂತಿಲ್ಲ. ಒಂದು ವೇಳೆ ಅನಿವಾರ್ಯ ಸಂದರ್ಭಗಳು ಎದುರಾದರೆ ಎಫ್​ಡಿಯನ್ನು ಅವಧಿಪೂರ್ವ ಹಿಂತೆಗೆಯಲು ಅವಕಾಶವಿದೆ. ಆದರೆ, ನಿಮಗೆ ಸಿಗಬೇಕಾದ ಬಡ್ಡಿ ಸಿಗದೇ ಹೋಗಬಹುದು. ಅವಧಿಪೂರ್ವ ಹಿಂಪಡೆತಕ್ಕಾಗಿ ಬ್ಯಾಂಕ್​ಗಳು ದಂಡ ಅಥವಾ ವಿವಿಧ ಶುಲ್ಕಗಳನ್ನು ವಿಧಿಸುವ ಸಾಧ್ಯತೆ ಇದೆ.

ಅವಧಿಪೂರ್ವ ಠೇವಣಿ ಹಿಂಪಡೆಯುವಿಕೆ ಎಂದರೆ…

ಒಂದು ನಿರ್ದಿಷ್ಟ ಅವಧಿಗೆ ನಿಗದಿತ ಬಡ್ಡಿ ದರದಲ್ಲಿ ಹೂಡಿಕೆ ಮಾಡುವುದೇ ಸ್ಥಿರ ಠೇವಣಿ. ಉದಾಹರಣೆಗೆ; 3 ವರ್ಷ ಅವಧಿಗೆ ಶೇಕಡಾ 6ರ ಬಡ್ಡಿ ದರದಲ್ಲಿ 10,000 ರೂ. ಸ್ಥಿರ ಠೇವಣಿ ಇಡುತ್ತೇವೆ ಎಂದುಕೊಳ್ಳೋಣ. ಇಲ್ಲಿ 3 ವರ್ಷ ಎಂಬುದು ಠೇವಣಿಯ ಮೆಚ್ಯೂರಿಟಿ ಅವಧಿ. ಅದಕ್ಕೂ ಮುನ್ನ ಅದನ್ನು ಹಿಂಪಡೆಯಲಾಗದು. ಆದರೆ, ಹಣಕಾಸಿನ ತುರ್ತು ಅಥವಾ ಅತಿಯಾದ ಅನಿವಾರ್ಯತೆ ಎದುರಾಗಿ ಅದನ್ನು ಹಿಂಪಡೆಯಬೇಕಾಗಿ ಬಂದರೆ? ಇದಕ್ಕೆ ಅವಕಾಶ ಇದೆ. ಹೀಗೆ ಹಿಂಪಡೆಯುವುದನ್ನೇ ಅವಧಿಪೂರ್ವ ಠೇವಣಿ ಹಿಂಪಡೆಯುವಿಕೆ ಎನ್ನುತ್ತಾರೆ.

ಅವಧಿಗೂ ಮುನ್ನ ಎಫ್​​ಡಿ ವಾಪಸ್ ಪಡೆಯಲು ಏನುಮಾಡಬೇಕು?

  • ಎಫ್​ಡಿಯನ್ನು ಅವಧಿಪೂರ್ವ ಹಿಂಪಡೆಯಲು ಬ್ಯಾಂಕ್​ ಶಾಖೆಗೆ ಭೇಟಿ ನೀಡಲು ಸಾಧ್ಯವಾಗದೇ ಇದ್ದಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ಮಾಡಿಕೊಳ್ಳಬಹುದು.
  •  ಎಫ್​​ಡಿ ತೆರೆಯುವ ಸಂದರ್ಭದಲ್ಲಿ ಪಡೆದ ರಶೀದಿಯನ್ನು ಬ್ಯಾಂಕ್​ಗೆ ಸಲ್ಲಿಸಿ ಅವಧಿಪೂರ್ವ ಹಿಂಪಡೆಯುವಿಕೆಗೆ ಮನವಿ ಮಾಡಬಹುದು. ಒಂದು ವೇಳೆ ರಶೀದಿ ಕಳೆದುಹೋಗಿದ್ದಲ್ಲಿ ಎಫ್​ಡಿ ಲಿಕ್ವಿಡೇಷನ್ ಅರ್ಜಿಯನ್ನು ಭರ್ತಿ ಮಾಡಿ ಬ್ಯಾಂಕ್​ಗೆ ಸಲ್ಲಿಸಬೇಕಾಗುತ್ತದೆ. ಇದನ್ನು ಪರಿಶೀಲಿಸಿದ ಬಳಿಕ ಬ್ಯಾಂಕ್​ಗಳು ಠೇವಣಿ ಮೊತ್ತವನ್ನು ವೈಯಕ್ತಿಕ ಖಾತೆಗೆ ವರ್ಗಾಯಿಸುತ್ತವೆ.

ಅವಧಿಪೂರ್ವ ಠೇವಣಿ ಹಿಂಪಡೆಯುವಿಕೆಗೆ ದಂಡಗಳೇನು?

TV9 Kannada


Leave a Reply

Your email address will not be published.