ಬೆಂಗಳೂರು: ಅಪಘಾತದಿಂದಾಗಿ ನಿಧನರಾದ ನಟ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರವನ್ನ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಇಂದು ಬೆಳಗ್ಗೆ  ನಟ ಡಾಲಿ ಧನಂಜಯ್ ವಿಜಯ್​ಗೆ ಅಂತಿಮ ನಮನ ಸಲ್ಲಿಸಿದ್ರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ವಿಜಯ್​ರನ್ನ ನೆನೆದು ಧನಂಜಯ್ ಕಣ್ಣೀರಿಟ್ಟರು.

ಸಂಚಾರಿ ವಿಜಯ್ ಅಗಲಿಕೆ ತುಂಬಾ ನೋವು ಕೊಡ್ತಿದೆ. ಅವನು ಇಲ್ಲ ಎನ್ನುವುದನ್ನ ನಂಬೋಕೆ ಆಗ್ತಿಲ್ಲ. ವಿಜಯ್ ಒಳ್ಳೆ ಜೀವ, ಒಳ್ಳೆ ಕಲಾವಿದ. ಆತ ಎಂದೆದಿಗೂ ಸದಾ ಜೀವಂತ. ವಿಜಯ್ ರನ್ನ ಎಂದೂ ಮರೆಯೋಕೆ ಸಾಧ್ಯವಿಲ್ಲ ಎಂದು ಧನಂಜಯ್ ಗದ್ಗದಿತರಾದ್ರು.

The post ಅವನು ಇಲ್ಲ ಅನ್ನೋದನ್ನ ನಂಬೋಕಾಗ್ತಿಲ್ಲ -ಸಂಚಾರಿ ವಿಜಯ್​ರನ್ನ ನೆನೆದು ಡಾಲಿ ಕಣ್ಣೀರು appeared first on News First Kannada.

Source: newsfirstlive.com

Source link