‘ಅವರಿಂದ ಪಡೆದ ಹಣ ನಾನಿನ್ನೂ ವಾಪಸ್​ ಕೊಟ್ಟಿಲ್ಲ’; ​ಇನ್​ಸೈಡ್​ ಮಾಹಿತಿ ಬಹಿರಂಗ ಪಡಿಸಿದ ಧನಂಜಯ | Daali Dhananjaya talks about Badava Rascal Kannada movie production in success meet


ನಟ ಧನಂಜಯ (Daali Dhananjaya) ಅವರು ನಿರ್ಮಾಪಕನಾಗಿ ಗೆದ್ದಿದ್ದಾರೆ. ಅವರು ನಿರ್ಮಾಣ ಮಾಡಿ, ಅಭಿನಯಿಸಿದ ‘ಬಡವ ರಾಸ್ಕಲ್​’ ಸಿನಿಮಾ (Badava Rascal Movie) ಸೂಪರ್​ ಹಿಟ್​ ಆಗಿದೆ. ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಂಡಿತು. ಧನಂಜಯ ಮತ್ತು ಅಮೃತಾ ಅಯ್ಯಂಗಾರ್​ (Amrutha Iyengar) ಜೋಡಿಯಾಗಿ ನಟಿಸಿದ ಈ ಸಿನಿಮಾವನ್ನು ಜನರು ಮೆಚ್ಚಿಕೊಂಡರು. ನಟನಾಗಿ ಯಶಸ್ಸು ಕಂಡಿದ್ದ ಧನಂಜಯ ಅವರಿಗೆ ಈ ಸಿನಿಮಾ ಮೂಲಕ ನಿರ್ಮಾಪಕನಾಗಿಯೂ ಪ್ರೇಕ್ಷಕರು ಗೆಲುವು ನೀಡಿದ್ದಾರೆ. ಹಾಗಂತ ಈ ಹಾದಿ ಸುಲಭದ್ದಾಗಿರಲಿಲ್ಲ. ‘ಬಡವ ರಾಸ್ಕಲ್​’ ಸಿನಿಮಾ ನಿರ್ಮಾಣ ಮಾಡಲು ಧನಂಜಯ ಅವರು ಹಲವು ಬಗೆಯಲ್ಲಿ ಕಷ್ಟಪಟ್ಟಿದ್ದಾರೆ. ಅನೇಕರಿಂದ ಹಣ ಪಡೆದು ಈ ಚಿತ್ರ ನಿರ್ಮಾಣ ಮಾಡಿದರು. ಅಂದು ಯಾರಿಂದ ದುಡ್ಡು ಪಡೆದುಕೊಳ್ಳಲಾಗಿತ್ತೋ ಅವರಿಗೆ ಧನಂಜಯ ಅವರು ಇನ್ನೂ ಹಣ ವಾಪಸ್​ ನೀಡಲ್ಲ. ಆ ವಿಚಾರವನ್ನು ಅವರು ವೇದಿಕೆ ಮೇಲೆಯೇ ಒಪ್ಪಿಕೊಂಡಿದ್ದಾರೆ. ಇನ್ನೂ ಯಾಕೆ ಹಣ ವಾಪಸ್​ ನೀಡಿಲ್ಲ ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಇತ್ತೀಚೆಗೆ ‘ಬಡವ ರಾಸ್ಕಲ್​’ ಚಿತ್ರದ ಸಕ್ಸಸ್​ ಮೀಟ್​ ನಡೆಯಿತು. ಈ ವೇಳೆ ಅನೇಕ ವಿಷಯಗಳ ಬಗ್ಗೆ ಧನಂಜಯ ಮಾತನಾಡಿದರು.

TV9 Kannada


Leave a Reply

Your email address will not be published. Required fields are marked *