ಅಶ್ಲೀಲ​ ವೆಬ್​ಸೈಟ್​ನಲ್ಲಿ ಉರ್ಫಿ ಜಾವೇದ್​ ಫೋಟೋ; ಪ್ರತಿ ದಿನ ರೇಪ್​ ಬೆದರಿಕೆ: ಶಾಕಿಂಗ್​ ವಿಚಾರದ ತೆರೆದಿಟ್ಟ ನಟಿ | Urfi Javed says her photo was uploaded on adult site


ನಟಿ ಉರ್ಫಿ ಜಾವೇದ್​ (Urfi Javed) ಅವರು​ ಪ್ರತಿ ದಿನವೂ ಸುದ್ದಿ ಆಗುತ್ತಿದ್ದಾರೆ. ಒಂದಿಲ್ಲೊಂದು ಕಾರಣಕ್ಕೆ ಅವರ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತದೆ. ವಿಚಿತ್ರ ಬಟ್ಟೆ ಧರಿಸಿ ಹೊರಬರುವ ಮೂಲಕ​ ಅವರು ಫೇಮಸ್​ ಆಗಿದ್ದಾರೆ. ಈ ಕಾರಣಕ್ಕಾಗಿ ನೆಟ್ಟಿಗರು ಎಷ್ಟೇ ಟ್ರೋಲ್​ (Urfi Javed Troll) ಮಾಡಿದರೂ ಆ ಬಗ್ಗೆ ಉರ್ಫಿ ಜಾವೇದ್​ ತಲೆ ಕೆಡಿಸಿಕೊಂಡಿಲ್ಲ. ಆದರೆ ಒಂದು ವಿಷಯದಿಂದ ಅವರು ಚಿಂತೆಗೆ ಒಳಗಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಅವರು ಬಂದಿದ್ದರು. ಪ್ರತಿ ದಿನ ಅವರಿಗೆ ರೇಪ್​ (Rape) ಬೆದರಿಕೆ ಬರುತ್ತವೆ. ಆ ಎಲ್ಲ ಘಟನೆಗಳ ಕುರಿತು ಈಗ ಉರ್ಫಿ ಜಾವೇದ್ ಅವರು ಮಾತನಾಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲಕಿ ಆಗಿದ್ದಾಗಲೇ ಅವರಿಗೆ ಸೈಬರ್​ ಲೋಕದಲ್ಲಿ ಕಿರುಕುಳ ಎದುರಾಗಿತ್ತು. ಅದರಿಂದ ಅವರು ಎದುರಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಅದಕ್ಕೆಲ್ಲ ಕಾರಣ ಆಗಿದ್ದು ಅವರ ಒಂದು ಫೋಟೋ. ಆ ಬಗ್ಗೆ ವಿವರ ಇಲ್ಲಿದೆ.

‘ಆಗ ನನಗೆ ಇನ್ನೂ 15ರ ಪ್ರಾಯ. ನಾವು ಲಖನೌನಲ್ಲಿ ವಾಸವಾಗಿದ್ದೆವು. ಒಂದು ಆಫ್​ ಶೋಲ್ಡರ್​ ಉಡುಗೆಯನ್ನು ನಾನು ಧರಿಸಿದ್ದೆ. ಆ ಸಮಯದಲ್ಲಿ ಲಖನೌ ಸಮೀಪ ಎಲ್ಲಿಯೂ ಆ ರೀತಿಯ ಬಟ್ಟೆ ಕಾಣಲು ಸಿಗುತ್ತಿರಲಿಲ್ಲ. ಹಾಗಾಗಿ ನನ್ನ ಒಂದು ಟಾಪ್​ ಅನ್ನು ಕತ್ತರಿಸಿ ನಾನು ವಿನ್ಯಾಸಗೊಳಿಸಿದ್ದೆ. ಆ ಬಟ್ಟೆ ಧರಿಸಿ ಫೋಟೋ ತೆಗೆದುಕೊಂಡು, ಅದನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ್ದೆ. ಅದೇ ಫೋಟೋವನ್ನು ಯಾರೋ ಅಶ್ಲೀಲ ವೆಬ್​ಸೈಟ್​​ನಲ್ಲಿ ಹಾಕಿದ್ದರು’ ಎಂದು ಆ ಕಹಿ ಘಟನೆಯನ್ನು ಉರ್ಫಿ ಜಾವೇದ್​ ವಿವರಿಸಿದ್ದಾರೆ.

‘ಆ ಸಂದರ್ಭವನ್ನು ಹೇಗೆ ಎದುರಿಸಬೇಕು ಎಂಬುದೇ ನನಗೆ ತಿಳಿದಿರಲಿಲ್ಲ. ಅಂಥ ಪರಿಸ್ಥಿತಿ ಬರುವರೆಗೆ ನಾವು ಎಷ್ಟು ಸ್ಟ್ರಾಂಗ್​ ಎಂಬುದು ನಮಗೆ ಗೊತ್ತಾಗುವುದಿಲ್ಲ. ಬಂದಿದ್ದನ್ನು ಸ್ವೀಕರಿಸಬೇಕಾ? ಫೈಟ್​ ಮಾಡಬೇಕಾ ಅಥವಾ ಸಾಯಬೇಕಾ? ಸಾಯಲು ನನಗೆ ಧೈರ್ಯ ಇರಲಿಲ್ಲ. ಹಾಗಾಗಿ ನಾನು ಫೈಟ್​ ಮಾಡಲು ನಿರ್ಧರಿಸಿದೆ’ ಎಂದು ಉರ್ಫಿ ಜಾವೇದ್​ ಹೇಳಿದ್ದಾರೆ.

ಉರ್ಫಿ ಜಾವೇದ್​ ಅವರ ಫೋಟೋ ಅಶ್ಲೀಲ ವೆಬ್​ ಸೈಟ್​ನಲ್ಲಿ ಅಪ್​ಲೋಡ್​ ಆದಾಗ ಅವರನ್ನು ಇಡೀ ಊರಿನವರು ಮತ್ತು ಕುಟುಂಬದವರು ಕೂಡ ಅವಮಾನಿಸಿದ್ದರು. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಕೂಡ ಅವರು ಆಲೋಚಿಸಿದ್ದರು. ಆದರೆ ಸಾಧ್ಯವಾಗಲಿಲ್ಲ. ಈಗಲೂ ಅವರಿಗೆ ಪ್ರತಿದಿನ ರೇಪ್​ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಅದು ಕೂಡ ನೂರಾರು ಜನರಿಂದ. ಆ ಬಗ್ಗೆ ಕೂಡ ಅವರು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಬಟ್ಟೆ ವಿಚಾರದಲ್ಲಿ ಉರ್ಫಿ ಜಾವೇದ್​ ಅವರಿಗೆ ಈಗಲೂ ಟ್ರೋಲ್​ ಕಾಟ ತಪ್ಪಿಲ್ಲ. ಅವರ ಫೋಟೋಗಳು ವೈರಲ್​ ಆದಾಗ ಕೆಲವು ಕಿರುತೆರೆಯ ಸೆಲೆಬ್ರಿಟಿಗಳು ಕೂಡ ಅಶ್ಲೀಲವಾಗಿ ಕಮೆಂಟ್​ ಮಾಡುತ್ತಾರೆ ಎಂಬ ಕುರಿತು ಉರ್ಫಿ ಅವರು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ತಮಗೆ ಪ್ರತಿಭೆ ಇದ್ದರೂ ಕೂಡ ಕಿರುತೆರೆಯಲ್ಲಿ ಸೂಕ್ತ ಮನ್ನಣೆ ಸಿಕ್ಕಿಲ್ಲ ಎಂದು ಗರಂ ಆಗಿದ್ದರು. ಬಿಗ್​ ಬಾಸ್​ ಒಟಿಟಿಯಲ್ಲಿ ಸ್ಪರ್ಧಿಸಿ ಹೊರಬಂದ ಬಳಿಕ ಉರ್ಫಿ ಜಾವೇದ್​ ಅವರ ಖ್ಯಾತಿ ಹೆಚ್ಚಿತು.

TV9 Kannada


Leave a Reply

Your email address will not be published. Required fields are marked *