ಮುಂಬೈ: ಅಶ್ಲೀಲ ಸಿನಿಮಾಗಳನ್ನ ನಿರ್ಮಿಸಿ ಪ್ರಕಟಿಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ ಅವರನ್ನ ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಓದಿ: ಅಶ್ಲೀಲ ಸಿನಿಮಾಗಳ ನಿರ್ಮಾಣ ಆರೋಪ; ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ

ರಾಜ್ ಕುಂದ್ರಾ ಜೊತೆಗೆ ಱನ್ ಥಾರ್ಪ್ ಎಂಬಾತನನ್ನೂ ಸಹ ಪ್ರಕರಣದಡಿ ಇಂದು ಬಂಧಿಸಲಾಗಿದ್ದು ಆತನನ್ನೂ ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನಿನ್ನೆ ವಿಚಾರಣೆಗೆಂದು ತೆರಳಿದ್ದ ವೇಳೆ ರಾಜ್ ಕುಂದ್ರಾ ಅವರನ್ನ ಮುಂಬೈ ಕ್ರೈಂ ಬ್ರಾಂಚ್ ಬಂಧಿಸಿತ್ತು. ಅಲ್ಲದೇ ಮುಂಬೈ ಪೊಲೀಸ್ ಕಮಿಷನರ್ ಮಾತನಾಡಿ.. ರಾಜ್ ಕುಂದ್ರಾ ಅವರು ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂಬುದಕ್ಕೆ ನಮ್ಮಲ್ಲಿ ಸೂಕ್ತ ಆಧಾರಗಳಿವೆ ಎಂದು ಹೇಳಿದ್ದಾರೆ.

The post ಅಶ್ಲೀಲ ಸಿನಿಮಾ ನಿರ್ಮಾಣ ಆರೋಪ; ಶಿಲ್ಪಾಶೆಟ್ಟಿ ಪತಿ ರಾಜ್​​ಕುಂದ್ರಾ ಪೊಲೀಸ್ ಕಸ್ಟಡಿಗೆ appeared first on News First Kannada.

Source: newsfirstlive.com

Source link