ಅಶ್ವತ್ಥಾಮ ನೇತೃತ್ವದ ಟೀಮ್ ಗಜ ಮೈಸೂರು ಅರಮನೆ ಅವರಣದಲ್ಲಿ ಭರ್ಜರಿ ತಾಲೀಮು ನಡೆಸಿದೆ | Team elephant led by Ashwathama indulged in massive practice session in Mysuru palace premises

ದಸರಾ ಮಹೋತ್ಸವ 2021ಕ್ಕೆ ಚಾಲನೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ಅವರು ಗುರುವಾರದಂದು ನಾಡದೇವತೆ ಚಾಮುಂಡಿಗೆ ಪೂಜೆ ಸಲ್ಲಿಸಿ ದಸರಾ ಉತ್ಸವವನ್ನು ಉದ್ಘಾಟಿಸಿದರು. ಮತ್ತೊಂದೆಡೆ ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅನೆಗಳು ಅರಮನೆ ಆವರಣದಲ್ಲಿ ತಾಲೀಮು ಮುಂದುವರೆಸಿದವು. ಈ ಬಾರಿ ಅಂಬಾರಿ ಹೊರಲಿರುವ ಅಶ್ವತ್ಥಾಮ ಹೆಸರಿನ ಆನೆಯ ಮೇಲೆ 600 ಕೆಜಿ ತೂಕದ ಮರಳು ಮೂಟೆಗಳನ್ನು ಹೊರೆಸಿ ಅಭ್ಯಾಸ ಮಾಡಿಸಲಾಯಿತು. ಗುರುವಾರ ಅಶ್ವತ್ಥಾಮನೊಂದಿಗೆ ಧನಂಜಯ ಮತ್ತು ಗೋಪಾಲಸ್ವಾಮಿ ಸೇರಿದಂತೆ ಒಟ್ಟು 5 ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡವು.

ಪ್ರತಿ ಆನೆಗೆ ನಿಯುಕ್ತಿಗೊಳಿಸಿರುವ ಮಾವುತ, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿ ವರ್ಗ ಗಜಪಡೆಯ ತಾಲೀಮಿನಲ್ಲಿ ಭಾಗಿಯಾಗಿದ್ದರು. ಆನೆಗಳಿಗೆ ಪ್ರತಿದಿನ ಮೈ ತೊಳೆಯುತ್ತಿರುವುದರಿಂದ ಮಿರಮಿರ ಮಿಂಚುತ್ತಿವೆ. ಎಲ್ಲ ಆನೆಗಳು ಮೈದುಂಬಿಕೊಂಡಂತೆ ಕಾಣುತ್ತಿವೆ. ಅರಮನೆಯಲ್ಲಿ ಆನೆಗಳಿಗೆ ಅವುಗಳ ಸಹಜ ಆಹಾರದ ಜೊತೆಗೆ ಬೇರೆ ಬೇರೆ ಭಕ್ಷ್ಯಗಳನ್ನು ನೀಡಲಾಗುತ್ತಿದೆ. ಮೈಸೂರಲ್ಲಿರುವವರೆಗೆ ಅವುಗಳಿಗೆ ರಾಜಾತಿಥ್ಯ.

ಪ್ರಾಣಿಗಳು ಅದರಲ್ಲೂ ಆನೆಯಂಥ ಬೃಹತ್ ಗಾತ್ರದ ಜೀವಿಗಳು ಅನಾರೋಗ್ಯಕ್ಕೆ ಈಡಾಗುವ ಸಂದರ್ಭಗಳು ಬಹಳ ಕಡಿಮೆ. ಆದರೆ ಈ ಆನೆಗಳನ್ನು ದಸರಾಗೆಂದು ಬೇರೆ ಬೇರೆ ಅನೆ ಶಿಬಿರಗಳಿಂದ ಕರೆತರಲಾಗುತ್ತದೆ. ದುಬಾರೆ, ಮತ್ತಿಗೋಡು, ಬಳ್ಳೆ, ಸುಂಕದ ಕಟ್ಟೆ, ಕೆ ಗುಡಿ, ಮೂರ್ಕಲ್ ಮತ್ತು ಸಕ್ಕರೆಬೈಲುಗಳಲ್ಲಿ ಆನೆ ಶಿಬಿರಗಳಿವೆ.

ಶಿಬಿರಗಳಲ್ಲಿನ ಪ್ರಶಾಂತವಾದ ವಾತಾವರಣದಿಂದ ನಗರ ಪ್ರದೇಶಕ್ಕೆ ಆನೆಗಳನ್ನು ಕರೆತಂದಾಗ ಅವುಗಳಲ್ಲಿ ಸಹಜವಾಗೇ ಆತಂಕ ಮನೆ ಮಾಡಿರುತ್ತದೆ. ಆದರೆ ಅಶ್ವತ್ಥಾಮ ನೇತೃತ್ವದ ಟೀಮ್ ಆನೆಯನ್ನು ನೋಡುತ್ತಿದ್ದರೆ ಅವು ಅರಮನೆಯ ಪರಿಸರಕ್ಕೆ ಹೊಂದಿಕೊಂಡಿವೆ.

ಇದನ್ನೂ ಓದಿ:  Viral Video: ಗೆಳೆಯನ ಮದುವೆ ಸಮಾರಂಭದಲ್ಲಿ ಸ್ನೇಹಿತರ ಮೋಜು ಮಸ್ತಿ; ನಗು ನಗುತ್ತಾ ಆಚರಿಸಿದ ಅರಿಶಿಣ ಶಾಸ್ತ್ರದ ವಿಡಿಯೋ ನೋಡಿ

TV9 Kannada

Leave a comment

Your email address will not be published. Required fields are marked *