ಅಶ್ವಿನಿ ಪುನೀತ್​ ತಂದೆ ನಿಧನ ಹಿನ್ನೆಲೆ; ಆಸ್ಪತ್ರೆಗೆ ಧಾವಿಸಿದ ರಾಜ್​ ಕುಟುಂಬ | Ashwini Puneeth Rajkumar father Bagmane Revanath Died Shivarajkumar And Geetha Visited hospital


ಪುನೀತ್​ ರಾಜ್​ಕುಮಾರ್ (Puneeth Rajkumar) ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದು ಅವರ ಪತ್ನಿ ಅಶ್ವಿನಿ (Ashwini Puneeth) ಅವರಿಗೆ ತೀವ್ರ ಆಘಾತ ಉಂಟು ಮಾಡಿತ್ತು. ಆ ನೋವು ಮಾಸುವ ಮೊದಲೇ ಅವರ ತಂದೆ ಭಾಗಮನೆ ರೇವನಾಥ್​ (Bagmane Revanath) ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ. ಭಾನುವಾರ ಬೆಳಗ್ಗೆ ವಾಕ್ ಮಾಡುವಾಗ ರೇವನಾಥ್​ ಕುಸಿದು ಬಿದ್ದಿದ್ದರು. ನಂತರ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಶಿವರಾಜ್​​ಕುಮಾರ್​ ಹಾಗೂ ಅವರ ಪತ್ನಿ ಗೀತಾ ಶಿವರಾಜ್​ಕುಮಾರ್​ ಅವರು ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್​ ಅವರ ಸ್ಥಿತಿ ಕಂಡು ಅಭಿಮಾನಿಗಳು ಮರುಗುತ್ತಿದ್ದಾರೆ. ಕೆಲವೇ ತಿಂಗಳ ಅಂತರದಲ್ಲಿ ಪತಿ ಮತ್ತು ತಂದೆಯನ್ನು ಅವರು ಕಳೆದುಕೊಳ್ಳುವಂತಾಗಿದ್ದು ನಿಜಕ್ಕೂ ದುಃಖದ ಸಂಗತಿ.

TV9 Kannada


Leave a Reply

Your email address will not be published. Required fields are marked *